ADVERTISEMENT

'ಪರಮ ಸುಂದರಿ' ಹಾಡಿಗೆ ಹೆಜ್ಜೆ ಹಾಕಿದ ಪ್ರಿಯಾಂಕಾ ಉಪೇಂದ್ರ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 4:35 IST
Last Updated 21 ಸೆಪ್ಟೆಂಬರ್ 2021, 4:35 IST
ಪ್ರಿಯಾಂಕಾ ಉಪೇಂದ್ರ ಇನ್‌ಸ್ಟಾಗ್ರಾಮ್ ಖಾತೆಯ ಸ್ಕ್ರೀನ್ ಗ್ರ್ಯಾಬ್
ಪ್ರಿಯಾಂಕಾ ಉಪೇಂದ್ರ ಇನ್‌ಸ್ಟಾಗ್ರಾಮ್ ಖಾತೆಯ ಸ್ಕ್ರೀನ್ ಗ್ರ್ಯಾಬ್   

ಬೆಂಗಳೂರು: ಬಾಲಿವುಡ್ ನಟಿ ಕೃತಿ ಸನೋನ್ ಹೆಜ್ಜೆ ಹಾಕಿರುವ ‘ಮಿಮಿ’ ಚಿತ್ರದ ಪರಮ ಸುಂದರಿ ಹಾಡು ಭಾರೀ ಮೆಚ್ಚುಗೆ ಗಳಿಸಿದೆ.

ಕಿರುತೆರೆ, ಹಿರಿತೆರೆ ನಟಿಯರು, ಮಾಡೆಲ್‌ಗಳು ಸೇರಿದಂತೆ ಹಲವರು ಈ ಹಾಡಿಗೆ ನೃತ್ಯ ಮಾಡಿ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

ಇದೀಗ, ನಟಿ ಪ್ರಿಯಾಂಕಾ ಉಪೇಂದ್ರ ಸಹ ಪರಮ ಸುಂದರಿ ಹಾಡಿಗೆ ತನ್ನ ಸಹೋದರಿ ಜತೆ ಹೆಜ್ಜೆ ಹಾಕಿದ್ದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿದ್ಧಾರೆ.

ADVERTISEMENT

ಪ್ರಿಯಾಂಕಾ ಅವರ ವಿಡಿಯೊಗೆ ಹಲವರು ಲೈಕ್ ಒತ್ತಿದ್ದಾರೆ.

ಇತ್ತೀಚೆಗೆ, ಬಿಗ್ ಬಾಸ್ ಖ್ಯಾತಿಯ ಕಿರುತೆರೆ ನಟಿ ವೈಷ್ಣವಿ ಗೌಡ ಸಹ ಪರಮ ಸುಂದರಿ ಹಾಡಿಗೆ ತಮ್ಮದೇ ಆದ ಶೈಲಿಯಲ್ಲಿ ಕುಣಿದಿದ್ದರು.

ಎ.ಆರ್. ರೆಹಮಾನ್ ಸಂಗೀತ ನಿರ್ದೇಶನದ ಈ ಹಾಡನ್ನುಶ್ರೇಯಾ ಘೋಷಾಲ್ ಹಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.