ADVERTISEMENT

ಸಲ್ಮಾನ್‌ ಖಾನ್‌ ಕುಟುಂಬದಲ್ಲಿ ಏನಾಗ್ತಿದೆ? ಸೊಹೈಲ್‌, ಸೀಮಾ ವಿಚ್ಛೇದನಕ್ಕೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 21 ಮೇ 2022, 6:37 IST
Last Updated 21 ಮೇ 2022, 6:37 IST
 ಸೊಹೈಲ್‌, ಸೀಮಾ
ಸೊಹೈಲ್‌, ಸೀಮಾ    

ಬಾಲಿವುಡ್‌ ಸ್ಟಾರ್‌ನಟ ಸಲ್ಮಾನ್‌ ಖಾನ್‌ ಕುಟುಂಬದಲ್ಲಿ ಮತ್ತೊಂದು ವಿಚ್ಛೇದನದಸುದ್ದಿ ಹರಿದಾಡುತ್ತಿದೆ. ಸಲ್ಲುಸಹೋದರ ಸೊಹೈಲ್‌ ಖಾನ್‌ ಮತ್ತು ಸೀಮಾ ಖಾನ್‌ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಪಡೆಯುತ್ತಿದ್ದಾರೆ.

ಸೊಹೈಲ್‌ ಖಾನ್‌ ಹಾಗೂ ಸೀಮಾ ಖಾನ್‌ ಕಳೆದ ವಾರ ಮುಂಬೈನ ಕೌಟುಂಬಿಕ ನ್ಯಾಯಾಲಯಕ್ಕೆ ಆಗಮಿಸಿ ವಿಚ್ಛೇದನಕ್ಕೆಅರ್ಜಿ ಸಲ್ಲಿಸಿದ್ದಾರೆ ಎಂದು ಸಲ್ಮಾನ್‌ ಖಾನ್‌ ಕುಟುಂಬದ ಆಪ್ತರು ಖಚಿತವಾಗಿ ಹೇಳಿದ್ದಾರೆ ಎಂದು ಬಾಲಿವುಡ್‌ ಮೂಲಗಳು ತಿಳಿಸಿವೆ.

ಈ ವಿಚ್ಛೇದನಕ್ಕೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಸೊಹೈಲ್‌ ಮತ್ತು ಸೀಮಾ ವಿಚ್ಚೇದನ ಪಡೆಯುವುದು ಬಹುತೇಕ ಖಚಿತವಾಗಿದೆ. ಇತ್ತ ಸೀಮಾ ಕೂಡ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಹೆಸರಿನ ಮುಂದೆ ಇದ್ದ ‘ಖಾನ್‌‘ ಹೆಸರನ್ನು ತೆಗೆದುಹಾಕಿದ್ದಾರೆ. ಈಗ ಅವರು ತಮ್ಮ ಹೆಸರನ್ನು ‘ಸೀಮಾ ಕಿರಣ್‌ ಸಚ್ದೆ‘ ಎಂದು ಬದಲಿಸಿಕೊಂಡಿದ್ದಾರೆ.

ADVERTISEMENT

ಸೀಮಾ ಇನ್‌ಸ್ಟಾದಲ್ಲಿ ಹೆಸರು ಬದಲಿಸಿ ಕೊಂಡಿರುವುದನ್ನುಗಮನಿಸಿರುವ ಅಭಿಮಾನಿಗಳು, ಸೀಮಾ ವಿಚ್ಛೇದನ ಪಡೆಯುವುದು ಖಚಿತ ಎಂದು ಹೇಳುತ್ತಿದ್ದಾರೆ. ಇನ್ನು ಕೆಲ ಅಭಿಮಾನಿಗಳು ಏಕೆ? ಎನಾಯ್ತು? ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಕೇಳುತ್ತಿದ್ದಾರೆ.

1998ರಲ್ಲಿ ಸೊಹೈಲ್‌ ಹಾಗೂ ಸೀಮಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ವೃತ್ತಿಯಲ್ಲಿ ವಸ್ತ್ರ ವಿನ್ಯಾಸಕಿಯಾಗಿದ್ದ ಸೀಮಾ ಅವರನ್ನು ಸೊಹೈಲ್‌ ಇಷ್ಟಪಟ್ಟು ಮದುವೆಯಾಗಿದ್ದರು.ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ಸೊಹೈಲ್‌ ಖಾನ್‌ಗೆ 51, ಸೀಮಾಗೆ 46 ವರ್ಷಗಳು. ಇಬ್ಬರ ಮುಂದಿನ ಕೌಟುಂಬಿಕ ಜೀವನದ ನಡೆ ಏನು ಎಂಬುದು ಇನ್ನು ಗೊತ್ತಾಗಿಲ್ಲ. ಸೊಹೈಲ್‌ ಖಾನ್ ಮತ್ತೊಂದು ಮದುವೆಯಾಗಲಿದ್ದಾರೆ ಎಂಬ ಗಾಳಿ ಮಾತುಗಳುಕೂಡ ಹರಿದಾಡುತ್ತಿವೆ. ಇತ್ತ ಸೀಮಾ ನಡೆ ಕೂಡ ನಿಗೂಢವಾಗಿದೆ.

ಸಲ್ಮಾನ್‌ ಖಾನ್‌ ಅವರ ಮತ್ತೊಬ್ಬ ಸಹೋದರ ಅರ್ಬಾಜ್‌ ಖಾನ್‌ ಕೂಡ 2017ರಲ್ಲಿ ಪತ್ನಿ ಮಲೈಕಾ ಅರೋರಾಗೆ ವಿಚ್ಛೇದನ ನೀಡಿದ್ದಾರೆ. ಸದ್ಯ ಮಲೈಕಾ ನಟ ಅರ್ಜುನ್‌ ಕಪೂರ್‌ ಜೊತೆಯಲ್ಲಿ ಸಹ ಜೀವನ ನಡೆಸುತ್ತಿದ್ದಾರೆ.

ಸಲ್ಮಾನ್‌ ಖಾನ್‌ ಕುಟುಂಬದಲ್ಲಿನ ವಿಚ್ಛೇದನಘಟನೆಗಳು ಸಲ್ಲುಅಭಿಮಾನಿಗಳಿಗೆ ಬೇಸರ ತರಿಸಿದೆ. ‘ಖಾನ್‌‘ ಕುಟುಂಬದಲ್ಲಿ ಏನಾಗುತ್ತಿದೆ ಎಂದು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಸಲ್ಮಾನ್‌ ಖಾನ್‌ಗೆ ಇನ್ನೂಮದುವೆಯಾಗಿಲ್ಲ, ಅವರ ಇಬ್ಬರು ಸಹೋದರರು ಮದುವೆಯಾಗಿದ್ದರೂ ವಿಚ್ಛೇದನಪಡೆದಿದ್ದಾರೆ ಎಂದು ಬೇಸರು ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.