ADVERTISEMENT

ಕರಣ್-ನಿಶಾ ಕೌಟುಂಬಿಕ ದೌರ್ಜನ್ಯ ಪ್ರಕರಣ: ಬೆಡ್‌ರೂಂ ವಿಡಿಯೊ ವೈರಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜೂನ್ 2021, 5:55 IST
Last Updated 11 ಜೂನ್ 2021, 5:55 IST
ಕರಣ್ ಮೆಹ್ರಾ ಮತ್ತು ನಿಶಾ ರಾವಲ್
ಕರಣ್ ಮೆಹ್ರಾ ಮತ್ತು ನಿಶಾ ರಾವಲ್   

ಬೆಂಗಳೂರು: ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿದ್ದ ಕರಣ್ ಮೆಹ್ರಾ ಮತ್ತು ನಿಶಾ ರಾವಲ್ ದಂಪತಿ ಈಗ ಕೌಟುಂಬಿಕ ದೌರ್ಜನ್ಯ ಪ್ರಕರಣ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

ಕರಣ್ ಮತ್ತು ನಿಶಾ ಪರಸ್ಪರ ಆರೋಪ ಹೊರಿಸಿದ್ದು, ದೂರು ಕೂಡ ದಾಖಲಾಗಿದೆ. ಆದರೆ ಈ ಬೆನ್ನಲ್ಲೇ ದಂಪತಿ ಕಳೆದ ವರ್ಷ ಲಾಕ್‌ಡೌನ್ ಅವಧಿಯಲ್ಲಿ ಹಂಚಿಕೊಂಡಿದ್ದ ಮಧುರ ಕ್ಷಣಗಳ ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಹಳೆಯ ವಿಡಿಯೊ ಇದಾಗಿದ್ದು, ನಿಶಾ ರಾವಲ್ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಲಾಕ್‌ಡೌನ್ 1 ಮೆಮೊರೀಸ್ ಎಂದು ಅಡಿಬರಹ ನೀಡಿದ್ದಾರೆ.

ADVERTISEMENT

ನಿಶಾ ರಾವಲ್, ಕರಣ್ ಮೆಹ್ರಾ ವಿರುದ್ಧ ದೌರ್ಜನ್ಯದ ಗಂಭೀರ ಆರೋಪ ಮಾಡಿದ್ದು, ಕೌಟುಂಬಿಕ ಹಿಂಸೆ ಮತ್ತು ಕರಣ್ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಪತ್ನಿಯ ಮೇಲೆ ಹಲ್ಲೆ ನಡೆಸಿರುವ ಆರೋಪದಲ್ಲಿ ಕರಣ್‌ನನ್ನು ಪೊಲೀಸರು ಬಂಧಿಸಿದ್ದು, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.