ADVERTISEMENT

ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಗಾಗಿ ಆಯುಷ್‌ನಿಂದ ’ಬಾಲ ರಕ್ಷಾ ಕಿಟ್‌‘

ಪಿಟಿಐ
Published 30 ಸೆಪ್ಟೆಂಬರ್ 2021, 9:53 IST
Last Updated 30 ಸೆಪ್ಟೆಂಬರ್ 2021, 9:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ (ಪಿಟಿಐ): ಕೋವಿಡ್‌ ಮೂರನೇ ಅಲೆಯು ಎದುರಾಗಬಹುದು ಎಂಬ ಭೀತಿಯ ನಡುವೆಯೇ, ಅಖಿಲ ಭಾರತ ಆಯುರ್ವೇದ ಸಂಸ್ಥೆಯು (ಎಐಐಎ) 16 ವರ್ಷದೊಳಗಿನ ಮಕ್ಕಳಿಗಾಗಿ, ದೇಹದಲ್ಲಿ ನಿರೋಧಕ ಶಕ್ತಿಯನ್ನು ಹೆಚ್ಚಿಸಲಿರುವ ‘ಬಾಲ ರಕ್ಷಾ ಕಿಟ್‌’ನ್ನು ಅಭಿವೃದ್ಧಿಪಡಿಸಿದೆ. ಆಯುಷ್‌ ಸಚಿವಾಲಯದಡಿ ಎಐಐಎ ಕಾರ್ಯನಿರ್ವಹಿಸಲಿದೆ.

ಸಚಿವಾಲಯದ ಅಧಿಕಾರಿಗಳ ಪ್ರಕಾರ, ಉಲ್ಲೇಖಿತ ಕಿಟ್‌ ಮಕ್ಕಳಲ್ಲಿ ಕೋವಿಡ್ ಸೋಂಕು ನಿರೋಧಕ ಶಕ್ತಿಯನ್ನು ಹೆಚ್ಚಿಸಿದ್ದು, ಆರೋಗ್ಯಕರವಾಗಿ ಇರಲೂ ಸಹಾಯಕವಾಗಲಿದೆ.

ತುಳಸಿ, ಒಣದ್ರಾಕ್ಷಿ, ಅಮೃತಬಳ್ಳಿ, ದಾಲ್ಚಿನ್ನಿ, ಬೇರಿನ ರಸ ಬಳಸಿ ತಯಾರಿಸಲಾದ ಸಿರಪ್‌, ಚ್ಯವನಪ್ರಾಶ, ತೈಲವನ್ನೂ ಒಳಗೊಂಡಿದೆ. ಇದರ ನಿಯಮಿತ ಸೇವನೆಯಿಂದ ಮಕ್ಕಳಲ್ಲಿ ನಿರೋಧಕ ಶಕ್ತಿ ಹೆಚ್ಚಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಸಚಿವಾಲಯದ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿ ಕಿಟ್‌ ರೂಪಿಸಲಾಗಿದೆ. ಸರ್ಕಾರದ ಅಂಗ ಸಂಸ್ಥೆ ಭಾರತೀಯ ವೈದ್ಯಕೀಯ ಔಷದ ಕಂಪನಿ (ಐಎಂಪಿಸಿಎಲ್‌), ಉತ್ತರಾಖಂಡ್‌ನಲ್ಲಿ ಇರುವ ತನ್ನ ಘಟಕದಲ್ಲಿ ತಯಾರಿಸಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಆಯುರ್ವೇದ ದಿನವಾದ ನ. 2ರಂದು ಸುಮಾರು 10 ಸಾವಿರ ಕಿಟ್‌ಗಳನ್ನು ಉಚಿತವಾಗಿ ಎಐಐಎ ವಿತರಿಸಲಿದೆ. ಮಕ್ಕಳಿಗಾಗಿ ಸದ್ಯ ಕೋವಿಡ್‌ ಲಸಿಕೆ ಲಭ್ಯವಿಲ್ಲದೇ ಇರುವುದರಿಂದ ಬಾಲ ಸುರಕ್ಷಾ ಕಿಟ್‌ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅತ್ಯುತ್ತಮ ಅಭಿವೃದ್ಧಿಯಾಗಿದೆ ಎಂದು ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.

ಎಐಐಎ ನಿರ್ದೇಶಕಿ ಡಾ. ತನುಜಾ ನೇಸರಿ ಅವರು, ‘ಮಕ್ಕಳಿಗೆ ಸಾಮಾನ್ಯವಾಗಿ ಕಷಾಯ ಅಥವಾ ಮಾತ್ರೆ ಸೇವಿಸುವುದು ಕಷ್ಟವಾಗಲಿದೆ. ಈ ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ನೆಗಡಿ ಹಾಗೂ ಕೆಮ್ಮು ತಡೆಯುವಂತೆ ಇತರೆ ಕೆಲವು ಔಷಧಗಳನ್ನು ಮಿಶ್ರಣ ಮಾಡಿ ಈಗ ಸಿರಪ್‌ ಅಭಿವೃದ್ಧಿಪಡಿಸಲಾಗಿದೆ’ ಎಂದು ತಿಳಿಸಿದರು.

ಕಿಟ್‌ ಜೊತೆಗೆ ಸುವರ್ಣ ಪ್ರಶನ್‌ ಅನ್ನು 5000 ಮಕ್ಕಳಿಗೆ ರಾಷ್ಟ್ರೀಯ ಆಯುರ್ವೇದ ದಿನದಂದು ವಿತರಿಸಲಾಗುತ್ತದೆ. ಸುವರ್ಣ ಪ್ರಶನ್‌ ಮಕ್ಕಳಲ್ಲಿ ಒಟ್ಟಾರೆಯಾಗಿ ಆರೋಗ್ಯವನ್ನು ವೃದ್ಧಿಸಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.