ADVERTISEMENT

ದೇಶದ ಶೇ 70ರಷ್ಟು ಮಂದಿಗೆ ಕೋವಿಡ್‌ ಲಸಿಕೆ ಪೂರೈಕೆ: ಮಾಂಡವಿಯಾ

ಪಿಟಿಐ
Published 4 ಅಕ್ಟೋಬರ್ 2021, 8:28 IST
Last Updated 4 ಅಕ್ಟೋಬರ್ 2021, 8:28 IST
ಮನ್‌ಸುಖ್ ಮಾಂಡವಿಯಾ
ಮನ್‌ಸುಖ್ ಮಾಂಡವಿಯಾ   

ನವದೆಹಲಿ: ದೇಶದ ಒಟ್ಟು ಜನಸಂಖ್ಯೆಯ ಶೇ 70ರಷ್ಟು ವಯಸ್ಕರಿಗೆ ಮೊದಲ ಡೋಸ್ ಕೋವಿಡ್–19 ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವಿಯಾ ಹೇಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ಬಲಿಷ್ಠ ರಾಷ್ಟ್ರ; ಕ್ಷಿಪ್ರ ಲಸಿಕೆ: ಭಾರತದ ಶೇ 70ರಷ್ಟು ಜನರಿಗೆ ಕೋವಿಡ್‌ ಲಸಿಕೆಯ ಮೊದಲ ಡೋಸ್‌ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ, ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಹೊಸ ದಾಖಲೆ ಬರೆದಿದೆ. ಇದೇ ಉತ್ಸಾಹದಲ್ಲಿ ಸಾಗೋಣ, ಕೊರೊನಾ ವಿರುದ್ಧ ಹೋರಾಡೋಣ‘ ಎಂದು ಬರೆದಿದ್ದಾರೆ.

ದೇಶದಲ್ಲಿ ಈವರೆಗೆ 90.79 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ. ಲಸಿಕೆ ಪಡೆದವರ ಪೈಕಿ ಶೇ 25ರಷ್ಟು ಮಂದಿಗೆ ಎರಡೂ ಡೋಸ್‌ಗಳನ್ನು ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.