ADVERTISEMENT

ಈಗ ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಖಾತೆ ‘ಬ್ಲೂ ಟಿಕ್‌‘ ತೆಗೆದ ಟ್ವಿಟರ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜೂನ್ 2021, 8:49 IST
Last Updated 5 ಜೂನ್ 2021, 8:49 IST
ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌
ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌    

ದೆಹಲಿ:ಸಾಮಾಜಿಕ ಜಾಲ ತಾಣ ಸಂಸ್ಥೆ ಟ್ವಿಟರ್ ಆರ್ ಎಸ್ ಎಸ್ ವರಿಷ್ಟ ಮೋಹನ್ ಭಾಗವತ್ ಅವರ ವೈಯಕ್ತಿಕ ಟ್ವಿಟರ್ ಖಾತೆಗೆ ನೀಡಲಾಗಿದ್ದ ಬ್ಲೂ ಬ್ಯಾಡ್ಜ್ ರದ್ದುಪಡಿಸಿದೆ.

ಮುಂಜಾನೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆಯಲ್ಲಿ ಇದೇ ರೀತಿಯ ಬದಲಾವಣೆ ಮಾಡಿತ್ತು. ಬಳಿಕ ವಿರೋಧ ವ್ಯಕ್ತವಾದ ಬಳಿಕ ಬ್ಲೂ ಬ್ಯಾಡ್ಜ್ ಸಕ್ರಿಯಗೊಳಿಸಿತ್ತು.

ಭಾಗವತ್ ಅವರ ಟ್ವಿಟರ್‌ ಖಾತೆಯನ್ನು 2019ರಮೇ ತಿಂಗಳಲ್ಲಿ ತೆರೆಯಲಾಗಿದೆ. ಕೇವಲ ಒಂದು ಟ್ವಿಟರ್‌ ಹ್ಯಾಂಡಲ್ ಅನ್ನು ಮಾತ್ರ ಮೋಹನ್‌ ಭಾಗವತ್‌ ತಮ್ಮ ಅಕೌಂಟ್‌ ಮೂಲಕ ಅನುಸರಿಸುತ್ತಿದ್ದು, 200,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.

ಟ್ವಿಟರ್ ನಿಯಮಗಳ ಪ್ರಕಾರ, ಖಾತೆಯು ದೀರ್ಘಕಾಲದ ವರೆಗೆ ‘ನಿಷ್ಕ್ರಿಯ‘ವಾಗಿದ್ದರೆ, ಅದರ ಬ್ಯಾಡ್ಜ್‌ ಅನ್ನು ತೆಗೆದುಹಾಕಲಾಗುತ್ತದೆ.

ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಟ್ವಿಟರ್‌ ಖಾತೆ ಬ್ಯಾಡ್ಜ್‌ ತೆಗೆದಾಗ ಟ್ವಿಟರ್‌ ಇದೇ ಕಾರಣ ನೀಡಿತ್ತು. 2020ರ ಜುಲೈನಿಂದ ವೆಂಕಯ್ಯನಾಯ್ಡು ಅವರ ಟ್ವಿಟರ್‌ ಖಾತೆ ನಿಷ್ಕ್ರಿಯವಾಗಿತ್ತು.

2019ರಲ್ಲಿಮೋಹನ್‌ ಭಾಗವತ್‌ ಅವರ ಟ್ವಿಟರ್‌ ಖಾತೆ ತೆರೆಯಲಾಗಿದೆಯಾದರೂ ಒಂದೇ ಒಂದು ಟ್ವೀಟ್‌ ಕೂಡ ಪೋಸ್ಟ್‌ ಆಗಿಲ್ಲ.

ಇವುಗಳನ್ನೂಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.