ADVERTISEMENT

IPL 2021: ನೀಲಿ ಜೆರ್ಸಿಯಲ್ಲಿ ಕಣಕ್ಕಿಳಿಯಲಿರುವ ಆರ್‌ಸಿಬಿ; ಕಾರಣ ಬಲ್ಲಿರಾ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಸೆಪ್ಟೆಂಬರ್ 2021, 5:35 IST
Last Updated 15 ಸೆಪ್ಟೆಂಬರ್ 2021, 5:35 IST
ಚಿತ್ರ ಕೃಪೆ: Twitter/@RCBTweets
ಚಿತ್ರ ಕೃಪೆ: Twitter/@RCBTweets   

ದುಬೈ: 2021ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ದ್ವಿತಿಯಾರ್ಧದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ತನ್ನ ಮೊದಲ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಸವಾಲನ್ನು ಎದುರಿಸಲಿದೆ.

ಸೆಪ್ಟೆಂಬರ್ 20ರಂದು ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ತಂಡದ ಆಟಗಾರರು ನೀಲಿ ಸಮವಸ್ತ್ರದೊಂದಿಗೆ ಕಣಕ್ಕಿಳಿಯಲಿದ್ದಾರೆ.

ಇದಕ್ಕೊಂದು ಕಾರಣವಿದೆ. ಕೋವಿಡ್-19 ಪಿಡುಗಿನ ಸಮಯದಲ್ಲಿ ಸಮಾಜಕ್ಕೆ ತಮ್ಮ ನಿಸ್ವಾರ್ಥ ಸೇವೆ ಮಾಡಿರುವ ಮುಂಚೂಣಿಯ ಸೇನಾನಿಗಳಿಗೆ ಸಹಾಯ ಹಾಗೂ ಗೌರವ ಸಲ್ಲಿಸುವ ಭಾಗವಾಗಿ ಆರ್‌ಸಿಬಿ ಆಟಗಾರರು ಬ್ಲೂ ಜೆರ್ಸಿಯಲ್ಲಿ ಆಡಲಿದ್ದಾರೆ.

ಈ ಹಿಂದೆಯುೂ ಪರಿಸರ ಸಂರಕ್ಷಣೆಯ 'ಗೋ ಗ್ರೀನ್' ಅಭಿಯಾನದ ಭಾಗವಾಗಿ ಹಸಿರು ಜೆರ್ಸಿಯಲ್ಲಿ ಆರ್‌ಸಿಬಿ ಕಾಣಿಸಿಕೊಂಡಿತ್ತು. ಈಗ ಕೋವಿಡ್ ಸೇನಾನಿಗಳಿಗೆ ಗೌರವ ಸೂಚಕವಾಗಿ ಪಿಪಿಇ ಕಿಟ್‌ ಹೋಲುವ ನೀಲಿ ಜೆರ್ಸಿಯಲ್ಲಿ ಆಡಲು ನಿರ್ಧರಿಸಿದೆ.

ಭಾರತದಲ್ಲಿ ನಡೆದ 14ನೇ ಆವೃತ್ತಿಯ ಟೂರ್ನಿಯ ವೇಳೆ ಬಯೋಬಬಲ್‌ನಲ್ಲಿದ್ದ ಕೆಲವು ಆಟಗಾರರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿರುವ ಪರಿಣಾಮ ಉಳಿದಿರುವ ಪಂದ್ಯಗಳನ್ನು ಯುಎಇಗೆ ಸ್ಥಳಾಂತರಿಸಲಾಗಿತ್ತು.

ಆದರೆ ಹಿಂದಿನ ಆವತ್ತಿಗಿಂತಲೂ ಭಿನ್ನವಾಗಿ ಆರ್‌ಸಿಬಿ ತಂಡವು ಆಡಿರುವ ಏಳು ಪಂದ್ಯಗಳಲ್ಲಿ ಐದು ಗೆಲುವಿನೊಂದಿಗೆ ಒಟ್ಟು 10 ಅಂಕಗಳನ್ನು ಸಂಪಾದಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಅಲ್ಲದೆ ಚೊಚ್ಚಲ ಟ್ರೋಫಿ ಮೇಲೆ ಕಣ್ಣಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.