ADVERTISEMENT

IPL 2021: ದಾಖಲೆಯ ಹೊಸ್ತಿಲಲ್ಲಿ ಮುಂಬೈ ನಾಯಕ ರೋಹಿತ್ ಶರ್ಮಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಸೆಪ್ಟೆಂಬರ್ 2021, 10:02 IST
Last Updated 19 ಸೆಪ್ಟೆಂಬರ್ 2021, 10:02 IST
ರೋಹಿತ್ ಶರ್ಮಾ
ರೋಹಿತ್ ಶರ್ಮಾ   

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ದ್ವಿತೀಯಾರ್ಧದ ಪಂದ್ಯಗಳು ಯುಎಇನಲ್ಲಿ ಇಂದಿನಿಂದ (ಭಾನುವಾರ) ಆರಂಭವಾಗಲಿವೆ.ಈ ನಡುವೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮಗದೊಂದು ದಾಖಲೆಯ ಹೊಸ್ತಿಲಲ್ಲಿದ್ದಾರೆ.

ಟ್ವೆಂಟಿ-20 ಕ್ರಿಕೆಟ್‌ನಲ್ಲಿ 400 ಸಿಕ್ಸರ್‌ಗಳ ಮೈಲಿಗಲ್ಲು ತಲುಪಲು ರೋಹಿತ್‌ಗಿನ್ನು ಕೇವಲ ಮೂರು ಸಿಕ್ಸರ್‌ಗಳ ಅಗತ್ಯವಿದೆ. ಇದರೊಂದಿಗೆ ಈ ಸಾಧನೆ ಮಾಡಿದ ವಿಶ್ವದ ಎಂಟನೇ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ.

ಪ್ರಸ್ತುತ ಪಟ್ಟಿಯನ್ನು ವೆಸ್ಟ್‌ಇಂಡೀಸ್‌ನ ಕ್ರಿಸ್ ಗೇಲ್ ಮುನ್ನಡೆಸುತ್ತಿದ್ದು, ಕೀರನ್ ಪೊಲಾರ್ಡ್, ಆ್ಯಂಡ್ರೆ ರಸೆಲ್, ಬ್ರೆಂಡನ್ ಮೆಕಲಮ್, ಶೇನ್ ವ್ಯಾಟ್ಸನ್, ಎಬಿ ಡಿ ವಿಲಿಯರ್ಸ್ ಹಾಗೂ ಆ್ಯರೋನ್ ಫಿಂಚ್ ನಂತರದ ಸ್ಥಾನಗಳನ್ನು ಅಲಂಕರಿಸಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ರೋಹಿತ್ ಇದುವರೆಗೆ 397 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇನ್ನು ಮೂರು ಸಿಕ್ಸರ್ ಗಳಿಸಿದರೆ ಟಿ20 ಕ್ರಿಕೆಟ್‌ನಲ್ಲಿ 400 ಸಿಕ್ಸರ್ ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ.

ಭಾರತದ ಪರ ರೋಹಿತ್ ನಂತರದ ಸ್ಥಾನಗಳಲ್ಲಿ ಸುರೇಶ್ ರೈನಾ (324), ವಿರಾಟ್ ಕೊಹ್ಲಿ (315) ಹಾಗೂ ಮಹೇಂದ್ರ ಸಿಂಗ್ ಧೋನಿ (303)ಪಟ್ಟಿಯಲ್ಲಿದ್ದಾರೆ.

397 ಸಿಕ್ಸರ್‌ಗಳ ಪೈಕಿ ರೋಹಿತ್, ಐಪಿಎಲ್‌ನಲ್ಲಿ 224 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಇವುಗಳಲ್ಲಿ 173 ಮುಂಬೈ ಇಂಡಿಯನ್ಸ್ ಪರ ದಾಖಲಾಗಿವೆ. ಇನ್ನುಳಿದ 51 ಸಿಕ್ಸರ್‌ಗಳು ಡೆಕ್ಕನ್ ಚಾರ್ಜರ್ಸ್ ಪರ ಬಾರಿಸಿದ್ದಾರೆ. ಹಾಗೆಯೇ ಟೀಮ್ ಇಂಡಿಯಾ ಪರ 133 ಸಿಕ್ಸರ್‌ ಸಿಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.