ADVERTISEMENT

Cristiano Ronaldo| ಕ್ರಿಸ್ಟಿಯಾನೊ ರೊನಾಲ್ಡೊ ದಾಖಲೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2023, 19:39 IST
Last Updated 24 ಮಾರ್ಚ್ 2023, 19:39 IST
   

ಲಿಸ್ಬನ್‌: ಪೋರ್ಚುಗಲ್‌ ಫುಟ್‌ಬಾಲ್ ತಂಡದ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಅತಿಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದ ದಾಖಲೆ ತಮ್ಮದಾಗಿಸಿಕೊಂಡರು.

ಲಿಸ್ಬನ್‌ನಲ್ಲಿ ಗುರುವಾರ ನಡೆದ ಪೋರ್ಚುಗಲ್‌ – ಲಿಕ್‌ಸ್ಟನ್‌ಸ್ಟ್ರೈನ್‌ ನಡುವಣ ಪಂದ್ಯ ಅವರಿಗೆ 197ನೇ ಅಂತರರಾಷ್ಟ್ರೀಯ ಪಂದ್ಯ ಆಗಿತ್ತು. ಯೂರೊ 2024 ಅರ್ಹತಾ ಹಂತದ ಈ ಪಂದ್ಯವನ್ನು ಪೋರ್ಚುಗಲ್‌ 4–0 ರಲ್ಲಿ ಗೆದ್ದಿತು. 196 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿರುವ ಕುವೈತ್‌ನ ಬದರ್‌ ಅಲ್‌ ಮುತಾವ ಅವರ ದಾಖಲೆಯನ್ನು ರೊನಾಲ್ಡೊ ಮುರಿದರು.

ರೊನಾಲ್ಡೊ ಎರಡು ಗೋಲು ಗಳಿಸಿ ಪಂದ್ಯವನ್ನು ಸ್ಮರಣೀಯವನ್ನಾಗಿಸಿಕೊಂಡರು. 51ನೇ ನಿಮಿಷದಲ್ಲಿ ಪೆನಾಲ್ಟಿ ಕಿಕ್‌ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿಸಿದ ಅವರು 12 ನಿಮಿಷಗಳ ಬಳಿಕ ದೊರೆತ ಫ್ರೀಕಿಕ್‌ನಲ್ಲಿ ಮತ್ತೊಂದು ಗೋಲು ಗಳಿಸಿದರು. ತಂಡದ ಇತರ ಗೋಲುಗಳನ್ನು ಜೊವಾವೊ ಕನ್ಸೆಲೊ ಮತ್ತು ಬರ್ನಾರ್ಡೊ ಸಿಲ್ವ ತಂದಿತ್ತರು.

ADVERTISEMENT

ರೊನಾಲ್ಡೊ, ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಗೋಲುಗಳ ಸಂಖ್ಯೆ ಯನ್ನು 120ಕ್ಕೆ ಹೆಚ್ಚಿಸಿಕೊಂಡರು. ಪೋರ್ಚು ಗಲ್‌ ಪರ ಅತ್ಯಧಿಕ ಗೋಲು ಗಳಿಸಿದ ದಾಖಲೆಯೂ ಅವರ ಹೆಸರಿನಲ್ಲಿದೆ.

ರೂನಿ ಹಿಂದಿಕ್ಕಿದ ಹ್ಯಾರಿ ಕೇನ್‌

ನೇಪಲ್ಸ್‌, ಇಟಲಿ: ಹ್ಯಾರಿ ಕೇನ್‌ ಅವರು ಇಂಗ್ಲೆಂಡ್‌ ತಂಡದ ಪರ ಅತಿಹೆಚ್ಚು ಗೋಲುಗಳನ್ನು ಗಳಿಸಿದ ದಾಖಲೆ ತಮ್ಮದಾಗಿಸಿಕೊಂಡರು.

ಯೂರೊ ಫುಟ್‌ಬಾಲ್‌ ಟೂರ್ನಿಯ ಅರ್ಹತಾ ಪಂದ್ಯದಲ್ಲಿ ಇಟಲಿ ವಿರುದ್ಧ ಚೆಂಡನ್ನು ಗುರಿ ಸೇರಿಸಿದ ಅವರು ತಮ್ಮ ಒಟ್ಟು ಗೋಲುಗಳ ಸಂಖ್ಯೆಯನ್ನು 54ಕ್ಕೆ ಹೆಚ್ಚಿಸಿಕೊಂಡರು. ಈ ಮೂಲಕ ವೇಯ್ನ್‌ ರೂನಿ (53 ಗೋಲು) ದಾಖಲೆಯನ್ನು ಅವರು ಮುರಿದರು. ಗುರುವಾರ ನಡೆದ ಪಂದ್ಯವನ್ನು ಇಂಗ್ಲೆಂಡ್‌ 2–1 ಗೋಲುಗಳಿಂದ ಗೆದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.