ADVERTISEMENT

Tokyo Olympics: ಟೆನಿಸ್‌: ಭಾರತದ ಸವಾಲು ಅಂತ್ಯ

ಪಿಟಿಐ
Published 27 ಜುಲೈ 2021, 19:32 IST
Last Updated 27 ಜುಲೈ 2021, 19:32 IST

ಟೋಕಿಯೊ: ಈ ಬಾರಿಯ ಒಲಿಂಪಿಕ್ಸ್‌ನ ಟೆನಿಸ್‌ ಸ್ಪರ್ಧೆಯಲ್ಲಿ ಭಾರತದ ಸವಾಲು ಅಂತ್ಯಕಂಡಿದೆ.

ಸಾನಿಯಾ ಮಿರ್ಜಾ ಹಾಗೂ ಸುಮಿತ್‌ ನಗಾಲ್‌, ಮಿಶ್ರ ಡಬಲ್ಸ್‌ನಲ್ಲಿ ಕಣಕ್ಕಿಳಿಯಬಹುದೆಂಬ ನಿರೀಕ್ಷೆ ಇತ್ತು. ಅದು ಹುಸಿಯಾಯಿತು. ಭಾರತದ ಜೋಡಿ ರ‍್ಯಾಂಕಿಂಗ್‌ನಲ್ಲಿ 153ನೇ ಸ್ಥಾನದಲ್ಲಿದ್ದ ಕಾರಣ ಅವಕಾಶ ಸಿಗಲಿಲ್ಲ.

ಈ ವಿಭಾಗದಲ್ಲಿ ಒಟ್ಟು 16 ಜೋಡಿ ಪದಕಕ್ಕಾಗಿ ಹೋರಾಡಲಿದೆ. ರ‍್ಯಾಂಕಿಂಗ್‌ನಲ್ಲಿ 50 ರಿಂದ 60ರೊಳಗೆ ಸ್ಥಾನ ಹೊಂದಿದ್ದವರು ಅರ್ಹತೆ ಗಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.