
ಪ್ರಜಾವಾಣಿ ವಾರ್ತೆ10 ಕೆ.ಜಿ. ಗೋಮೂತ್ರ ಮತ್ತು 10 ಕೆ.ಜಿ. ಗೋಮಯವನ್ನು ಒಟ್ಟು ಸೇರಿಸಬೇಕು. ಇದಕ್ಕೆ ಅರ್ಧ ಕೆ.ಜಿ ಬೆಲ್ಲ ಸೇರಿಸಿ ಕಲಿಸಿ ಮಡಕೆಯೊಂದರಲ್ಲಿ ಹಾಕಿ ಹತ್ತು ದಿನ ಮುಚ್ಚಿಡಬೇಕು. ಬಳಿಕ ತೆಗೆದಾಗ ಇದು ಅಮೃತಜಲವಾಗುತ್ತದೆ. ಇದು ಉತ್ತಮ ಗೊಬ್ಬರ.
ಸಸ್ಯಗಳಿಗೆ ಬೇಕಾದ ಸೂಕ್ಷ್ಮಾಣು ಜೀವಿಗಳನ್ನು ಬೆಳೆಸುವಲ್ಲಿ ನೆರವಾಗುತ್ತದೆ. ಅದಕ್ಕೆ ನೂರು ಲೀಟರ್ ನೀರು ಸೇರಿಸಿ ಒಂದು ಎಕರೆ ಭೂಮಿಗೆ ಸಿಂಪಡಿಸಿದರೆ ಎರಡು ಪಟ್ಟು ಫಸಲು ಬರುತ್ತದೆ. ಇದಕ್ಕೆ 200 ಗ್ರಾಂ. ಜೇನು ತುಪ್ಪ, 200 ಗ್ರಾಂ ಶುದ್ಧ ತುಪ್ಪ ಹಾಗೂ 200 ಗ್ರಾಂ ಮೊಸರು ಸೇರಿಸಿದರೆ ಅಮೃತಜಲ ಸಾಂದ್ರತೆ ಹೆಚ್ಚಿ, ಗುಣ ಇನ್ನಷ್ಟು ಹೆಚ್ಚುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.