ADVERTISEMENT

ಪ್ರಜಾವಾಣಿ ಡಿಜಿಟಲ್ – ವ್ಯಾಲೆಂಟೈನ್ಸ್ ಡೇ ರೀಲ್ಸ್ ಸ್ಪರ್ಧೆಗೆ ಆಹ್ವಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜನವರಿ 2026, 12:51 IST
Last Updated 22 ಜನವರಿ 2026, 12:51 IST
   

ವ್ಯಾಲೆಂಟೈನ್ಸ್ ಡೇ ಅಂಗವಾಗಿ ಕೇಂಬ್ರಿಡ್ಜ್‌ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಾರ್ಥ್ ಕ್ಯಾಂಪಸ್‌ ಸಹಯೋಗದೊಂದಿಗೆ ವಿಶೇಷ ರೀಲ್ಸ್‌ ಸ್ಪರ್ಧೆಯನ್ನು ‘ಪ್ರಜಾವಾಣಿ ಡಿಜಿಟಲ್’ ಆಯೋಜಿಸಿದೆ. ಪ್ರೀತಿ, ಸ್ನೇಹ, ನಂಬಿಕೆ, ಸಂಬಂಧಗಳ ಮೌಲ್ಯ ಹಾಗೂ ಜೀವನದ ಸೌಂದರ್ಯವನ್ನು ಪ್ರತಿಬಿಂಬಿಸುವ ಸೃಜನಾತ್ಮಕ ರೀಲ್ಸ್‌ಗಳನ್ನು ಆಹ್ವಾನಿಸಲಾಗುತ್ತಿದೆ.

ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತರು ತಮ್ಮ ಮೂಲ ಸೃಜನಾತ್ಮಕ ಮತ್ತು ಕುಟುಂಬ ಸ್ನೇಹಿ ರೀಲ್ಸ್‌ಗಳನ್ನು ನಿಗದಿತ ಅವಧಿಯೊಳಗೆ ಸಲ್ಲಿಸಬಹುದು. ಅಶ್ಲೀಲತೆ, ಹಿಂಸೆ, ದ್ವೇಷ ಭಾಷೆ, ಹಕ್ಕುಸ್ವಾಮ್ಯ ಉಲ್ಲಂಘನೆ ಅಥವಾ ಇತರರ ವಿಷಯದ ನಕಲು ಇರುವ ರೀಲ್ಸ್‌ಗಳನ್ನು ಪರಿಗಣಿಸಲಾಗುವುದಿಲ್ಲ.

ಆಯ್ಕೆಯಾದ ರೀಲ್ಸ್‌ಗಳನ್ನು ಪ್ರಜಾವಾಣಿ ಡಿಜಿಟಲ್‌ನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಕಟಿಸಲಾಗುವುದು. ವಿಜೇತರಿಗೆ ವಿಶೇಷ ಗೌರವ/ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ADVERTISEMENT
  • ಪ್ರಥಮ ಬಹುಮಾನ: ₹25 ಸಾವಿರ

  • ದ್ವಿತೀಯ ಬಹುಮಾನ: ₹20 ಸಾವಿರ

  • ತೃತೀಯ ಬಹುಮಾನ: ₹15 ಸಾವಿರ

    ಜತೆಗೆ, 10 ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು

ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಿ, ಪ್ರೀತಿಯನ್ನು ಸಂಭ್ರಮಿಸಿ!

ರೀಲ್ಸ್‌ಗಳನ್ನು ಕಳುಹಿಸಬೇಕಾದ ಇ–ಮೇಲ್‌events.pvdigital@prajavani.co.in

ಕಳುಹಿಸುವವರು ತಮ್ಮ ಹೆಸರು, ವಿಳಾಸ ಹಾಗೂ ಸಂಪರ್ಕ ಸಂಖ್ಯೆಯನ್ನು ನಮೂದಿಸಿ.

ನಿಯಮ ಮತ್ತು ಷರತ್ತುಗಳು ಅನ್ವಯಿಸುತ್ತವೆ

ನಿಯಮಗಳು

  • ರೀಲ್ಸ್‌ ಗರಿಷ್ಠ 1 ನಿಮಿಷ 48 ಸೆಕೆಂಡುಗಳನ್ನು ಮೀರಿರಬಾರದು

  • ರೀಲ್ಸ್‌ ಕಳುಹಿಸಲು ಕೊನೆಯ ದಿನಾಂಕ ಫೆ. 5, 2026

ಷರತ್ತುಗಳು

  • ಕುಟುಂಬಸ್ನೇಹಿ ವಿಷಯವಾಗಿರಬೇಕು: ಎಲ್ಲಾ ವಯೋಮಾನದ ವೀಕ್ಷಕರಿಗೂ ಸೂಕ್ತವಾಗಿರುವಂತಹ ಕುಟುಂಬ ಸ್ನೇಹಿ ವಿಷಯಗಳ ಆಯ್ಕೆ ಇರಲಿ.

  • ಸಾಮಾಜಿಕ ಹಾಗೂ ಸಾಂಸ್ಕೃತಿಕ ಗೌರವ ಕಡ್ಡಾಯ: ರೀಲ್ಸ್‌ಗಳು ಸಮಾಜದ ಮೌಲ್ಯಗಳು, ಸಂಸ್ಕೃತಿ ಮತ್ತು ಸಾರ್ವಜನಿಕ ಶಿಷ್ಟಾಚಾರವನ್ನು ಗೌರವಿಸುವಂತಿರಬೇಕು.

  • ರಾಜಕೀಯ ಅಥವಾ ಧಾರ್ಮಿಕ ಪ್ರಚಾರ ಬೇಡ: ರಾಜಕೀಯ ಸಂದೇಶಗಳು, ಧಾರ್ಮಿಕ ಪ್ರಚಾರ ಅಥವಾ ವಿವಾದಾತ್ಮಕ ವಿಷಯಗಳನ್ನು ಒಳಗೊಂಡ ರೀಲ್ಸ್‌ಗಳಿಗೆ ಅವಕಾಶವಿಲ್ಲ.

  • ಹಿಂಸೆ ಅಥವಾ ದ್ವೇಷ ಭಾಷೆ ಬೇಡ: ಯಾವುದೇ ರೀತಿಯ ಹಿಂಸೆ, ದುರುಪಯೋಗ, ದ್ವೇಷ, ಜಾತಿ–ಧರ್ಮ ಆಧಾರಿತ ಅವಮಾನ ಅಥವಾ ಕಿರುಕುಳವನ್ನು ಉತ್ತೇಜಿಸುವ ವಿಷಯಗಳು ಇರಬಾರದು.

  • ಮೂಲ ಸೃಜನಾತ್ಮಕ ವಿಷಯ ಮಾತ್ರ: ಸ್ಪರ್ಧೆಗೆ ಸಲ್ಲಿಸುವ ರೀಲ್ಸ್‌ ಸಂಪೂರ್ಣವಾಗಿ ನಿಮ್ಮದೇ ಆದ ಮೂಲ ಸೃಜನಾತ್ಮಕ ವಿಷಯವಾಗಿರಬೇಕು. ಇತರರ ರೀಲ್ಸ್‌ಗಳ ನಕಲು, ಮರು ಅಪ್ಲೋಡ್ ಅಥವಾ ಅನುಕರಣೆ ಮಾಡಿದ ವಿಷಯಗಳನ್ನು ಪರಿಗಣಿಸಲಾಗುವುದಿಲ್ಲ.

  • ಹಕ್ಕುಸ್ವಾಮ್ಯ ಉಲ್ಲಂಘನೆ ಬೇಡ: ಬಳಸುವ ಸಂಗೀತ, ದೃಶ್ಯಗಳು ಹಾಗೂ ಇತರೆ ವಿಷಯಗಳು ಹಕ್ಕುಸ್ವಾಮ್ಯ ರಹಿತವಾಗಿರಬೇಕು ಅಥವಾ ಬಳಕೆಗೆ ಸೂಕ್ತ ಅನುಮತಿ ಪಡೆದಿರಬೇಕು.

  • ಅಶ್ಲೀಲತೆ ಮತ್ತು ಅಸಭ್ಯತೆ ನಿಷಿದ್ಧ: ಅಶ್ಲೀಲ ಪದಗಳು, ಅಸಭ್ಯ ದೃಶ್ಯಗಳು, ಅತಿರೇಕದ ವರ್ತನೆ ಅಥವಾ ಲೈಂಗಿಕ ಸನ್ನೆಗಳನ್ನು ಒಳಗೊಂಡ ರೀಲ್ಸ್‌ಗಳನ್ನು ಪರಿಗಣಿಸಲಾಗುವುದಿಲ್ಲ.

  • ಪ್ಲಾಟ್‌ಫಾರ್ಮ್ ಮಾರ್ಗಸೂಚಿಗಳ ಪಾಲನೆ: ರೀಲ್ಸ್‌ಗಳು ಇನ್‌ಸ್ಟಾಗ್ರಾಂ ಹಾಗೂ ಪ್ರಜಾವಾಣಿ ಡಿಜಿಟಲ್‌ನ ವಿಷಯ ನೀತಿಗಳನ್ನು ಪಾಲಿಸಬೇಕು.

  • ವಿಷಯ ಬಳಕೆಯ ಹಕ್ಕು: ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ, ನಿಮ್ಮ ರೀಲ್ಸ್‌ ಅನ್ನು ಸೂಕ್ತ ಕ್ರೆಡಿಟ್‌ನೊಂದಿಗೆ ಪ್ರಜಾವಾಣಿ ಡಿಜಿಟಲ್ ತನ್ನ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬಳಸಲು ಮತ್ತು ಪ್ರಚಾರ ಮಾಡಲು ಅನುಮತಿ ನೀಡಿದಂತಾಗಲಿದೆ.

  • ಸಂಪಾದಕೀಯ ನಿರ್ಧಾರವೇ ಅಂತಿಮ: ನಿಯಮ ಉಲ್ಲಂಘಿಸುವ ಯಾವುದೇ ರೀಲ್ಸ್‌ಗಳನ್ನು ಪೂರ್ವ ಸೂಚನೆ ಇಲ್ಲದೇ ತಿರಸ್ಕರಿಸುವ ಅಥವಾ ತೆಗೆದುಹಾಕುವ ಹಕ್ಕು ಪ್ರಜಾವಾಣಿ ಡಿಜಿಟಲ್‌ಗೆ ಇದೆ. ಸ್ಪರ್ಧೆಯ ಫಲಿತಾಂಶ ಮತ್ತು ಆಯ್ಕೆ ಕುರಿತು ಪ್ರಜಾವಾಣಿ ಡಿಜಿಟಲ್ ಸಂಪಾದಕೀಯ ತಂಡದ ತೀರ್ಮಾನವೇ ಅಂತಿಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.