ನಾಲ್ಕೂವರೆ ದಶಕಗಳ ಹಿಂದಿನ (ಜ. 23, 1971) ಈ ಛಾಯಾಚಿತ್ರ ಕಳೆದುಹೋದ ಹಲವು ಸಂಗತಿಗಳನ್ನು ಹೇಳುವಂತಿದೆ. ಮೊದಲಿಗೆ, ಅಂಗಡಿಯ ಮುಂದಿರುವ ‘ದರ ಪಟ್ಟಿ’ಯ ಫಲಕ ಗಮನಿಸಿ.
ಒಂದು ಕಿಲೋ ಬೇಳೆಗೆ ಎರಡು ರೂಪಾಯಿ ಆಸುಪಾಸಿನಲ್ಲಿ ಬೆಲೆಯಿದೆ. ಈಗ ಆ ಬೆಲೆ ಸುಮಾರು ನೂರು ಪಟ್ಟು ಹೆಚ್ಚಾಗಿದೆ! ಆರು ರೂಪಾಯಿಗೆ ಒಂದು ಕಿಲೋ ಬೆಣ್ಣೆ, ಹತ್ತು ರೂಪಾಯಿಗೆ ತುಪ್ಪ ದೊರೆಯುತ್ತಿದ್ದ ಕಾಲವದು. ಈಗಿನ ಬೆಲೆಗಳನ್ನು ನೆನಪಿಸಿಕೊಂಡು ‘ಕಲಿಗಾಲ’ ಎಂದು ನಿಟ್ಟುಸಿರುಬಿಡುವ ಮುನ್ನ ಚಿತ್ರದಲ್ಲಿನ ಅಂಗಡಿಯಾತ ಹಾಗೂ ಗಿರಾಕಿಯನ್ನು ಗಮನಿಸಿ.
ತೆಂಗಿನಕಾಯಿ ಬಲಿತಿದೆಯೇ ಇಲ್ಲವೇ ಎಂದು ನಡೆಯುತ್ತಿರಬಹುದಾದ ಆ ಚರ್ಚೆ, ಅಂದಿನ ಕಾಲಘಟ್ಟದಲ್ಲಿ ಚಿಲ್ಲರೆ ಅಂಗಡಿಗಳ ಮೂಲಕ ಸಾಧ್ಯವಾಗುತ್ತಿದ್ದ ‘ಸಾಮಾಜಿಕ ಸಂಬಂಧ’ದ ಕಥನವೊಂದನ್ನು ಹೇಳುತ್ತಿರುವಂತಿದೆ. ಓಣಿ–ಕೇರಿ, ಪ್ರದೇಶಗಳ ಲ್ಯಾಂಡ್‌ಮಾರ್ಕ್‌ಗಳ ರೂಪದಲ್ಲಿ ಇರುತ್ತಿದ್ದ ಈ ಅಂಗಡಿಗಳ ಜಾಗದಲ್ಲಿ ಮಾಲ್‌ಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.