ADVERTISEMENT

ಮಳೆರಾಯ

ನಂದೀಶ್ ವೈ.ಆರ್.
Published 20 ಜುಲೈ 2013, 19:59 IST
Last Updated 20 ಜುಲೈ 2013, 19:59 IST
ಮಳೆರಾಯ
ಮಳೆರಾಯ   

ಪಳಪಳಿಸುತ ಮಿಂಚಲು
ತಕ್ಷಣವೇ ಆಯಿತು ಕತ್ತಲು
ಸುತ್ತಲೂ ಮೇಘರಾಜನ ಆರ್ಭಟ
ಬಿದ್ದನು ವರುಣ ಪಟಪಟ
ಮಳೆರಾಯನ ಹಾರಾಟ
ಮರೆಮಾಚಿತು ಕಂದಮ್ಮನ ಕೂಗಾಟ
ಮತ್ತಷ್ಟು ಜೋರು ಮಳೆ
ಹೆಚ್ಚಿಸಿತ್ತು ಇಳೆಯ ಕಳೆ
ಮನೆಯಲ್ಲಿ ಮಾಯವಾಯಿತು ಬೆಳಕು
ದೀಪ ಬೆಳಗಲು ಸರಿಯಿತು ಮುಸುಕು
ಅಡಿಗೆಯಾಯಿತು ಘಮಘಮ
ಮಳೆಯು ಮಾತ್ರ ನಿಲ್ಲಿಸಲಿಲ್ಲ ಸರಿಗಮ
ಹಾಕಿದಳು ಹಿಡಿಶಾಪ ಮಳೆಗೆ
ಆದರೆ, ಇದು ಬಿಂಬಿಸಿತ್ತು ಬೆಸುಗೆ
ಮಾರನೇ ದಿನ, ಕೆರೆ-ಕಟ್ಟೆಯಲೆಲ್ಲ ನೀರು ಹೊಲ-ಗದ್ದೆಗಳಲ್ಲಿ ಹಚ್ಚ-ಹಸಿರು

-ನಂದೀಶ್ ವೈ.ಆರ್.
9ನೇ ತರಗತಿ, ಆದರ್ಶ ವಿದ್ಯಾಲಯ,
ಯಳಂದೂರು, ಚಾಮರಾಜನಗರ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.