ADVERTISEMENT

ಹನಿಗತೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 19:30 IST
Last Updated 26 ಫೆಬ್ರುವರಿ 2011, 19:30 IST

ದೀಪಾ ಮತ್ತು ವಿದ್ಯಾ ಗೆಳತಿಯರು. ದೀಪಾ ಬಡ ಹುಡುಗಿ. ಅವಳಿಗೆ ಗೊಂಬೆಗಳೆಂದರೆ ತುಂಬಾ ಇಷ್ಟ. ಆದರೆ ಶಾಲೆ ಆರಂಭವಾಗಿ ಒಂದು ತಿಂಗಳಾದರೂ ಅವಳು ಹೊಸ ಪಠ್ಯಪುಸ್ತಕ, ನೋಟ್‌ಬುಕ್‌ಗಳನ್ನು ಕೊಂಡುಕೊಳ್ಳಲು ಆಗಿರಲಿಲ್ಲ. ಹತ್ತಿರದಲ್ಲಿಯೇ ಅವಳ ಹುಟ್ಟುಹಬ್ಬ ಇತ್ತು. ದೀಪಾಗೆ ಗೊಂಬೆಗಳೆಂದರೆ ಇಷ್ಟ ಎಂದು ತಿಳಿದಿದ್ದ ವಿದ್ಯಾ ಅವಳ ಹುಟ್ಟುಹಬ್ಬಕ್ಕೆ ಗೊಂಬೆ ಕೊಡಬೇಕೆಂದು ಹಣ ಸಂಗ್ರಹಿಸತೊಡಗಿದ್ದಳು.

ದೀಪಾ ಹುಟ್ಟುಹಬ್ಬ ಬಂದೇ ಬಿಟ್ಟಿತು. ವಿದ್ಯಾ ಅಪ್ಪನೊಂದಿಗೆ ಗೊಂಬೆ ಅಂಗಡಿಗೆ ಹೋದಳು. ಅಲ್ಲಿದ್ದ ಗೊಂಬೆಗಳಲ್ಲಿ ಕೆಲವನ್ನು ಆರಿಸಿಟ್ಟಳು. ಜೊತೆಯಲ್ಲಿ ಬಂದಿದ್ದ ಅವಳ ತಂದೆ, ‘ವಿದ್ಯಾ, ನಿನ್ನ ಗೆಳತಿ ದೀಪಾ ಇನ್ನೂ ಪಠ್ಯ ಮತ್ತು ನೋಟ್ ಪುಸ್ತಕಗಳನ್ನು ಖರೀದಿಸಿಲ್ಲ ಎಂದು ಹೇಳಿದ್ದೆ ಅಲ್ಲವೇ?’ ಎಂದರು.ಆಗ ವಿದ್ಯಾ, ‘ಹೌದು ಅಪ್ಪ’ ಎಂದಳು.

ಆಗ ವಿದ್ಯಾಳ ತಂದೆ, ‘ಅವಳಿಗೆ ಗೊಂಬೆಗಳಿಗಿಂತ ಪುಸ್ತಕಗಳ ಅಗತ್ಯ ಇದೆ. ಉಪಯುಕ್ತವಾಗುವ ವಸ್ತುಗಳನ್ನು ಉಡುಗೊರೆಯಾಗಿ ಕೊಡಬೇಕು ಮಗಳೇ. ಅಗತ್ಯ ವಸ್ತುಗಳ ನಂತರ ರಂಜನೆಯ ವಸ್ತುಗಳ ಕಡೆ ಗಮನ ಹರಿಸಬೇಕು’ ಎಂದರು. ಅಪ್ಪನ ಮಾತು ವಿದ್ಯಾಳಿಗೂ ಸರಿ ಅನ್ನಿಸಿತು. ಗೆಳತಿಗೆ ಪಠ್ಯಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನೇ ಉಡುಗೊರೆಯಾಗಿ ನೀಡಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.