ADVERTISEMENT

ಕ್ಯಾಥ್‌ ಲ್ಯಾಬ್‌ಗೆ ನಿಧಿ ಸಂಗ್ರಹ ಸಹಾಯಾರ್ಥ ಅಮೋಲ್‌ ಪಾಲೇಕರ್‌ ನಾಟಕ ‘ಕುಸೂರ್‌’

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 19:30 IST
Last Updated 19 ಫೆಬ್ರುವರಿ 2020, 19:30 IST
ಅಮೋಲ್‌ ಪಾಲೇಕರ್‌
ಅಮೋಲ್‌ ಪಾಲೇಕರ್‌   

ರೋಟರಿ ಇಂದಿರಾನಗರ, ಬಾಲಿವುಡ್‌ ನಟ, ನಿರ್ದೇಶಕ ಅಮೋಲ್‌ ಪಾಲೇಕರ್‌ ಅವರ ‘ಕುಸೂರ್‌’ ನಾಟಕವನ್ನು ನಗರದಲ್ಲಿ ಆಯೋಜಿಸಿದೆ.ಕುತೂಹಲಕರ ಕಥಾನಕದ ‘ಕುಸೂರ್‌’ ನಾಟಕ ಚೌಡಯ್ಯ ಸಭಾಂಗಣದಲ್ಲಿ ಫೆ. 23ರಂದು ಭಾನುವಾರ ಪ್ರದರ್ಶನಗೊಳ್ಳಲಿದೆ.

ಜಯದೇವ ಆಸ್ಪತ್ರೆಯಲ್ಲಿ ₹4 ಕೋಟಿ ವೆಚ್ಚದ ಕ್ಯಾಥ್‌ ಲ್ಯಾಬ್‌ ಸೌಲಭ್ಯ ಒದಗಿಸುವ ‌ನಿಟ್ಟಿನಲ್ಲಿ ನಿಧಿ ಸಂಗ್ರಹದ ಉದ್ದೇಶದೊಂದಿಗೆ ಈ ನಾಟಕ ಆಯೋಜಿಸಲಾಗಿದೆ.

ನಾಟಕ ‘ಕುಸೂರ್‌’: ಒಬ್ಬ ನಿವೃತ್ತ ಸಹಾಯಕ ಪೊಲೀಸ್‌ ಆಯುಕ್ತ, ಸ್ವಯಂ ಪ್ರೇರಣೆಯಿಂದ ಪೊಲೀಸ್‌ ನಿಯಂತ್ರಣ ಕೊಠಡಿಯಲ್ಲಿ ಸೇವೆಯಲ್ಲಿರುತ್ತಾನೆ. ಸಹಾಯ ಕೋರಿ ಮುಂಬೈನ ಪ್ರದೇಶವೊಂದರ ಅನಾಮಧೇಯ ಮಹಿಳೆಯ ಕರೆ ಬರುತ್ತದೆ. ತುಂಬ ಆಸಕ್ತಿಯಿಂದ ಅವಳ ಸಮಸ್ಯೆಗೆ ನಿವೃತ್ತ ಸಹಾಯಕ ಪೊಲೀಸ್‌ ಆಯುಕ್ತ ಸ್ಪಂದಿಸುತ್ತಾನೆ. ರಾತ್ರಿ ಹೊತ್ತಿನಲ್ಲಿ ಆ ಸಮಸ್ಯೆ ಆಸಕ್ತಿಕರವಾದ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತದೆ. ಅದರ ಅಂತ್ಯ ಮಾತ್ರ ಪ್ರೇಕ್ಷಕರ ಎದೆ ಝಲ್ಲೆನಿಸುವಂಥದು.

ADVERTISEMENT

‘ದೆನ್‌ ಸ್ಕಿಲ್ದೀ’ (ಅಪರಾಧಿ ಎಂದರ್ಥ) ಎನ್ನುವ ಡ್ಯಾನಿಶ್‌ ಸಿನಿಮಾವೊಂದರ ರಂಗರೂಪವಿದು. ಹೆಸರಾಂತ ಬಾಲಿವುಡ್‌ ನಟ, ನಿರ್ದೇಶಕ ಅಮೋಲ್‌ ಪಾಲೇಕರ್‌ ಅಭಿನಯದ ವಿಭಿನ್ನ ರಂಗ ಪ್ರಯೋಗ. ರಂಗರೂಪ– ಸಂಧ್ಯಾ ಗೋಖಲೆ. ನಿರ್ದೇಶನ– ಅಮೋಲ್‌ ಪಾಲೇಕರ್‌ ಮತ್ತು ಸಂಧ್ಯಾ ಗೋಖಲೆ.

* ಮೂಲ: ಗುಸ್ತಾವ್‌ ಮೊಲರ್‌ ಮತ್ತು ಎಮಿಲ್‌ ಎನ್‌ ಅಂಡರ್‌ಸನ್‌.

* ಪ್ರಸ್ತುತಿ: ರೋಟರಿ ಇಂದಿರಾನಗರ.

* ಸ್ಥಳ: ಚೌಡಯ್ಯ ಸ್ಮಾರಕ ಸಭಾಂಗಣ, ವೈಯಾಲಿಕಾವಲ್‌. ಫೆ.23 ಭಾನುವಾರ, ಸಂಜೆ 7ಕ್ಕೆ.

* ಟಿಕೆಟ್‌: ₹800, ಬುಕ್‌ ಮೈ ಶೋನಲ್ಲಿ ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.