ADVERTISEMENT

Bamboo Art: ಬಿದಿರು ಕಲಾಕೃತಿಗಳಿಗೆ ಮರುಜೀವ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 0:15 IST
Last Updated 31 ಆಗಸ್ಟ್ 2025, 0:15 IST
   

ಹುಟ್ಟಿನಿಂದ ಸಾಯುವವರೆಗೂ ಮನುಷ್ಯನ ಬದುಕಿನ ಒಂದು ಭಾಗವೇ ಆಗಿದ್ದ ಕಾಡಿನ ಬಿದಿರು ಉತ್ಪನ್ನಗಳು ಈಗ ಕೇವಲ ಕಲಾಕೃತಿಗೆ ಸೀಮಿತವಾಗುವಷ್ಟು ಅದರ ಅವಶ್ಯಗಳು ಕಡಿಮೆಯಾಗಿವೆ. ಇದಕ್ಕೆ ಕಾರಣ ಬಿದಿರು ಕೊರತೆ. ಇದರ ನಡುವೆಯೂ ಕಾಡಿನ ಜಿಲ್ಲೆ ಎಂದೇ ಪ್ರಸಿದ್ಧಿ ಪಡೆದ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿದಿರು ಉದ್ಯಮ ಮತ್ತೆ ಚಿಗುರುತ್ತಿದೆ.

ಉತ್ತರ ಕನ್ನಡದ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಮಹಿಳೆಯರಿಗೆ ಮತ್ತು ಆಸಕ್ತ ಯುವಕರಿಗೆ ಸ್ವ ಉದ್ಯೋಗ ಕೈಗೊಳ್ಳಲು ಅನುಕೂಲವಾಗುವಂತೆ ಪ್ರತಿ ವರ್ಷ ಬಿದಿರು ಕಲಾಕೃತಿ ಸಿದ್ಧಪಡಿಸುವ ತರಬೇತಿ ನೀಡಲಾಗುತ್ತಿದ್ದು ಇದರ ಉಪಯೋಗವನ್ನು ಈಗಾಗಲೇ ಹಲವರು ಪಡೆದುಕೊಂಡಿದ್ದಾರೆ. ವಿಶೇಷವಾಗಿ ಈ ಭಾಗದ ಬುಡಕಟ್ಟು ಜನಾಂಗದ ಮಹಿಳೆಯರು, ಯುವಕರು ಬಿದಿರಿನಿಂದ ಆಕರ್ಷಕ ಕಲಾಕೃತಿಗಳನ್ನು ಮಾಡುವುದರಲ್ಲಿ ತರಬೇತಿ ಪಡೆದಿದ್ದು, ನೂರಾರು ಜನರು ಕೌಶಲ್ಯಾಭಿವೃದ್ಧಿ ಹೊಂದಿ ಸ್ವ ಉದ್ಯೋಗದಲ್ಲಿ ತೊಡಗಿದ್ದಾರೆ. ಈ ಮೂಲಕ ಬಿದಿರಿಗೂ ಬೇಡಿಕೆ ಬರಲು ಕಾರಣರಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿದಿರು ನಾಲ್ಕೈದು ವರ್ಷಗಳಿಂದ ಕಟ್ಟೆ ರೋಗದಿಂದ ಸಂಪೂರ್ಣ ಎನ್ನುವಷ್ಟು ನಾಶವಾಗಿದ್ದು, ಅವು ಪುನಃ ಚಿಗುರಲು ಇನ್ನೂ ಹತ್ತಾರು ವರ್ಷಗಳೇ ಬೇಕು. ಉದ್ಯಮ ಮತ್ತು ಕೌಶಲ್ಯಾಭಿವೃದ್ಧಿಯಲ್ಲಿ ಮಹತ್ವ ಪಡೆದೆಕೊಂಡಿದ್ದ ಬಿದಿರು ಕಲಾಕೃತಿಗಳಿಗೆ ಈಗಲೂ ಬೇಡಿಕೆ ಇದೆ. ಆದರೆ ಅಗತ್ಯಕ್ಕೆ ತಕ್ಕಂತೆ ಬಿದಿರು ಸಿಗುತ್ತಿಲ್ಲ. 

ADVERTISEMENT
article

ಶಿರಸಿ ತಾಲ್ಲೂಕಿನ ತಾರಗೋಡದ ಕೃಷಿಕ ಸೀತಾರಾಮ ಹೆಗಡೆ ಅವರು ಬಿದಿರಿನಿಂದ ಕಲಾಕೃತಿಗಳನ್ನು ತಯಾರಿಸುವುದರಲ್ಲಿ ಪಳಗಿದ್ದಾರೆ. ಕೃಷಿ ಕಾರ್ಯದ ಜೊತೆಯಲ್ಲೇ ಬಿಡುವಿನ ಸಮಯದಲ್ಲಿ ಬಿದಿರಿನಿಂದ ಹಲವಾರು ಬಗೆಯ ಕರಕುಶಲ ತಯಾರಿಕೆಯನ್ನು ಮಾಡುತ್ತಿದ್ದ ಇವರು ಈಗ ಬಿದಿರು ಕೊರತೆಯಿಂದಾಗಿ ಈ ಹವ್ಯಾಸವನ್ನು ಕೈಬಿಡುವ ಸಂದರ್ಭ ಎದುರಾಗಿದೆ. ಹೀಗೆ ಅನೇಕ ಕಲಾವಿದರು ಬಿದಿರಿಲ್ಲದೆ ಕೈಕಟ್ಟಿ ಕೂರುವಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.