ADVERTISEMENT

ಭೌತ ವಿಜ್ಞಾನದ ಬೆನ್ನೇರಿ ಪುಸ್ತಕ ವಿಮರ್ಶೆ: ವಿಜ್ಞಾನದ ರೋಚಕ ಕಥೆಯುಳ್ಳ ಕೃತಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 23:33 IST
Last Updated 21 ಜೂನ್ 2025, 23:33 IST
<div class="paragraphs"><p>ಭೌತ ವಿಜ್ಞಾನದ ಬೆನ್ನೇರಿ </p></div>

ಭೌತ ವಿಜ್ಞಾನದ ಬೆನ್ನೇರಿ

   

ತಲೆಮೇಲೆ ಬಿದ್ದ ಸೇಬು ನ್ಯೂಟನ್‌ಗೆ ಗುರುತ್ವಾಕರ್ಷಣದ ನಿಯಮ ವಿವರಿಸಲು ನೆರವಾಯಿತು. ಬಾತ್‌ ಟಬ್‌ನಲ್ಲಿ ಇಳಿದಾಗ ನೀರು ಹೊರಚೆಲ್ಲಿದ್ದು ಬಯಾನ್ಸಿ ತತ್ವವನ್ನು ಜಗತ್ತಿಗೆ ನೀಡಲು ಆರ್ಕಿಮಿಡೀಸ್‌ಗೆ ಸಾಧ್ಯವಾಯಿತು. ವಿಜ್ಞಾನವೇ ಕೌತುಕ. ಜಗತ್ತನ್ನು ಬೆರಗುಗಣ್ಣಿನಿಂದ ನೋಡಿದ ವಿಜ್ಞಾನಿಗಳು ಹಲವು ಮೌಢ್ಯಗಳನ್ನು ನಿವಾರಿಸಿ ವೈಜ್ಞಾನಿಕವಾಗಿ ಪ್ರಪಂಚವನ್ನು ನೋಡುವಂತೆ ಕಣ್ಣು ತೆರೆಸಿದ್ದಾರೆ. ಇಂಥ ಭೌತವಿಜ್ಞಾನದ ಹಲವು ಸಂಶೋಧನೆಗಳನ್ನು ಕನ್ನಡದಲ್ಲಿ ನೀಡುವ ಕೃತಿಯೊಂದನ್ನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಲೇಖಕ ರೋಹಿತ್ ವಿ. ಸಾಗರ ರಚಿಸಿದ್ದಾರೆ. 

‘ಭೌತ ವಿಜ್ಞಾನದ ಬೆನ್ನೇರಿ– ನಿಸರ್ಗದಲ್ಲೊಂದು ಸವಾರಿ’ ಎಂಬ ಶೀರ್ಷಿಕೆಯ ಈ ಕೃತಿಯಲ್ಲಿ ವೈಜ್ಞಾನಿಕ ಆವಿಷ್ಕಾರ ಒಳಗೊಂಡ 20 ಲೇಖನಗಳಿವೆ. ವಿಜ್ಞಾನ ಕಬ್ಬಿಣದ ಕಡಲೆ ಎಂದುಕೊಂಡವರಿಗೆ ಹಲವು ಪ್ರಮುಖ ಅನ್ವೇಷಣೆಗಳನ್ನು ಸರಳವಾಗಿ ತಿಳಿಸುವ ಪ್ರಯತ್ನ ಮಾಡಲಾಗಿದೆ. ವಿದ್ಯಾರ್ಥಿಗಳು, ಜನಸಾಮಾನ್ಯರ ಭಾಷೆಯಲ್ಲೇ ರೋಹಿತ್ ಅವರು ಭೌತವಿಜ್ಞಾನವನ್ನು ಸರಳವಾಗಿ ವಿವರಿಸಿದ್ದಾರೆ.

ADVERTISEMENT

ಗುರುತ್ವಾಕರ್ಷಣೆ, ಸೂರ್ಯನ ಸುತ್ತ ಗ್ರಹಗಳ ಚಲನೆ, ಬೆಳಕಿನ ವಿಸ್ಮಯ, ವಿದ್ಯುತ್‌ ಸಂಶೋಧನೆ, ನ್ಯಾನೊ ತಂತ್ರಜ್ಞಾನ, ನಿಸರ್ಗದ ರಹಸ್ಯ, ಬಾಹ್ಯಾಕಾಶ, ಖಗೋಳ, ಅಣುಬಾಂಬ್‌, ಇಂಧನ ಹೀಗೆ ಹಲವು ವಿಷಯಗಳನ್ನು ಅವರು ಇದರಲ್ಲಿ ಚರ್ಚಿಸಿದ್ದಾರೆ. ವಿಜ್ಞಾನದ ಮಹತ್ವ ಸಾರುತ್ತಲೇ ಹಲವು ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದ್ದಾರೆ. 

ಕಾರು ವೇಗವಾಗಿ ಹೋಗಬೇಕೆಂದರೆ ಆಕ್ಸಲರೇಟ್ ಒತ್ತಬೇಕು ಎಂಬುದು ಜ್ಞಾನ. ಆದರೆ ಅದು ಹೇಗೆ ಕೆಲಸ ಮಾಡಲಿದೆ ಎಂದು ಆಲೋಚಸಲು ಆರಂಭಿಸಿದರೆ ವಿಜ್ಞಾನ ಎಂಬುದರ ಉದಾಹರಣೆಯೊಂದಿಗೆ ವಿಜ್ಞಾನದ ಮೂಲ ಸಿದ್ಧಾಂತವನ್ನು ಮನಮುಟ್ಟುವಂತೆ ವಿವರಿಸಿದ್ದಾರೆ. ವಿಜ್ಞಾನವನ್ನೂ ಕನ್ನಡದಲ್ಲಿ ಸರಳವಾಗಿ ತಿಳಿಸುವ ಪ್ರಯತ್ನ ಈ ಕೃತಿಯಲ್ಲಿ ಕಂಡುಬರುತ್ತದೆ.

ಲೇ: ರೋಹಿತ್ ವಿ. ಸಾಗರ

ಪ್ರ: ಬೆನಕ ಬುಕ್ಸ್‌ ಬ್ಯಾಂಕ್‌

ಸಂ: 73384 37666

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.