ಇಂಗ್ಲಿಷ್ ಭಾಷೆಯ ಪ್ರಸಿದ್ಧ ಲೇಖಕ ಮಾರ್ಟಿನ್ ಲಿಂಗ್ಸ್ ಅವರ ‘ಮುಹಮ್ಮದ್’ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ಯುವ ಲೇಖಕ ಸ್ವಾಲಿಹ್ ತೋಡಾರು ಅವರ ಇನ್ನೊಂದು ಮಹತ್ವಪೂರ್ಣ ಕೃತಿಯಿದು. ಮೌಲಾನಾ ಜಲಾಲುದ್ದೀನ್ ರೂಮಿ 13ನೆಯ ಶತಮಾನದ ದಾರ್ಶನಿಕ ಕವಿ.
ರೂಮಿಯ ಅನೂಹ್ಯ ಒಳನೋಟಗಳು ಚಿಕಿತ್ಸಕ ಗುಣವನ್ನು ಹೊಂದಿವೆ. ಆಳವಾದ ಆಲೋಚನೆಗೆ ಹಚ್ಚುವ, ಮನಸ್ಸನು ಆರ್ದ್ರಗೊಳಿಸುವ ಶಕ್ತಿ ರೂಮಿಯ ಕತೆಗಳಿಗೆ ಇದೆ. ರೂಮಿಯ ಎರಡು ಸಾಲುಗಳಲ್ಲಿ ಅಸಂಖ್ಯಾತ ಅರ್ಥಗಳಿರುತ್ತವೆ. ಅವುಗಳು ಮತ್ತೆ ಮತ್ತೆ ಓದುವಂತೆ ಮಾಡುತ್ತವೆ. ಮನಸು ಭಾರವಾದಾಗ, ಮನಸು ಖಾಲಿಯೆನಿಸಿದಾಗ ರೂಮಿಯ ಸಾಲುಗಳ ಸಖ್ಯ ಬೆಳೆಸಬೇಕು.
ರೂಮಿಯ ಮಸ್ನವಿಯಲ್ಲಿ ಹೇಳಿದ ಉದಾಹರಣೆಗಳು ಮತ್ತು ದೃಷ್ಟಾಂತಗಳನ್ನು ಸಂಗ್ರಹಿಸಿ ಪ್ರಸ್ತುತ ಕತೆಗಳಿಗೆ ಪುಸ್ತಕ ರೂಪವನ್ನು ಕೊಡಲಾಗಿದೆ. ಕೃತಿಯುದ್ದಕ್ಕೂ ಸೂಫಿ ಸ್ವಭಾವವಿರುವ ದಿವ್ಯ ಪ್ರೇಮದ ದೃಷ್ಟಾಂತಗಳನ್ನು ಸೂಚಿಸುವ ಕತೆಗಳನ್ನು ಕಾಣಬಹುದು. ಒಟ್ಟಾರೆ ಎಲ್ಲ ಕಾಲಕ್ಕೂ ಸಲ್ಲುವ ಸಾಮಾನ್ಯ ಉದಾಹರಣೆಗಳನ್ನು ಮುಂದಿಟ್ಟು ರೂಮಿ ನಮಗೆ ಸೂಫಿ ತತ್ವಗಳನ್ನು ಕಲಿಸುತ್ತಾರೆ. ಈ ಕೃತಿಯ ಅನುವಾದವು ಸರಳ ಮತ್ತು ಸುಂದರವಾಗಿದೆ.
ರೂಮಿ ಕತೆಗಳು
ಲೇ: ಸ್ವಾಲಿಹ್ ತೋಡಾರು
ಪ್ರ: ತಿಜೋರಿ ಪ್ರಕಾಶನ
ಸಂ: 9663925123
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.