ಊರಿನ ಅಭಿವೃದ್ಧಿಯ ಎಲ್ಲ ಕೆಲಸಗಳೂ ಸರ್ಕಾರದಿಂದಲೇ ಆಗಬೇಕೆಂದೇನಿಲ್ಲ. ಮನಸ್ಸು ಮಾಡಿದರೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿಯೇ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾದ ದೇಶದ ಒಂದಷ್ಟು ಮಾದರಿ ಗ್ರಾಮ ಪಂಚಾಯ್ತಿಗಳ ಸಾಧನೆಯ ಸಂಕಥನ ‘ಪಂಚಾಯತ್ ಪವರ್’ ಕೃತಿ. ವಿಭಿನ್ನ ಕೆಲಸಗಳ ಮೂಲಕ ನಮ್ಮ ನಡುವೆ ಮಾದರಿಯಾಗಿ ನಿಲ್ಲಬಲ್ಲ ಕೆಲವಷ್ಟು ಪಂಚಾಯ್ತಿಗಳ ಕಿರು ಪರಿಚಯ ಮಾಡಿಕೊಡುವ ಯತ್ನವನ್ನು ಲೇಖಕರು ಈ ಕೃತಿಯಲ್ಲಿ ಮಾಡಿದ್ದಾರೆ.
ಕೃತಿಯಲ್ಲಿ ಆರು ವಿಭಾಗಗಳಿದ್ದು, 30ಕ್ಕೂ ಹೆಚ್ಚು ಕಿರು ಲೇಖನಗಳಿವೆ. ಜಲಪಾತದಿಂದ ಹಣ //ಹರಿಸುವ// ಆಂಧ್ರ ಪ್ರದೇಶದ ಕತಕಿ ಪಂಚಾಯ್ತಿ, ವಿದ್ಯುತ್‌ನ ಹಂಗಿಲ್ಲದ ರಾಜಸ್ಥಾನದ ನ್ಯೂಕೊಟ್ರ, ಕಾರಂತರನ್ನು ನೆನಪಿಸುವ ಉಡುಪಿಯ ಕೋಟತೊಟ್ಟು ಪಂಚಾಯ್ತಿ–ಹೀಗೆ ಬೇರೆ ಬೇರೆ ವಿಷಯಗಳಿಂದ ಸ್ವಾವಲಂಬಿಯಾಗಿ ನಿಂತಿರುವ ಪಂಚಾಯ್ತಿಗಳ ವಿಶಿಷ್ಟ ಕಥನಗಳು ಇಲ್ಲಿ ಸಿಗುತ್ತವೆ.
‘ಇಂಥ ಅಪರೂಪದ ಕೃತಿ ಪ್ರತಿ ಗ್ರಾಮ ಪಂಚಾಯ್ತಿಯ ಕಪಾಟಿನಲ್ಲಿರಬೇಕು. ರಾಜ್ಯದ ಒಂದೊಂದು ಪಂಚಾಯತ್‌ಗೂ ತನ್ನದೇ ಆದ ಗ್ರಾಮಗೀತೆಯನ್ನು ರಚಿಸಲು ಪ್ರೇರಣೆಯಾಗುವಷ್ಟರ ಮಟ್ಟಿಗೆ ಈ ಕೃತಿ ಕೈದೀವಿಗೆಯಾಲಿ’ ಎಂದು ಕೃತಿಯ ಮುನ್ನುಡಿಯಲ್ಲಿ ನಾಗೇಶ ಹೆಗಡೆ ಬರೆದಿದ್ದಾರೆ.
ಪಂಚಾಯತ್ ಪವರ್
ಲೇ: ಗುರುರಾಜ್ ಎಸ್.ದಾವಣಗೆರೆ
ಪ್ರ: ನದಿ ಪ್ರಕಾಶನ
ಸಂ:9008475899
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.