ADVERTISEMENT

ಹಾಲಕ್ಕಿ ಕೋಗಿಲೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 19:30 IST
Last Updated 22 ಫೆಬ್ರುವರಿ 2020, 19:30 IST
ಹಾಲಕ್ಕಿ ಕೋಗಿಲೆ
ಹಾಲಕ್ಕಿ ಕೋಗಿಲೆ   

ಜಾನಪದ ಜ್ಞಾನದ ಗಣಿ, ವಿಶ್ವಕೋಶ ಎಂಬ ಕೀರ್ತಿಗೆ ಪಾತ್ರರಾಗಿರುವವರು ಸುಕ್ರಜ್ಜಿ. ಪದ್ಮಶ್ರೀ ಪ್ರಶಸ್ತಿಯೂ ಸೇರಿ ಹಲವು ಪ್ರಶಸ್ತಿಗಳನ್ನು ಪಡೆದಿರುವ ಅವರು ಶಾಲೆಯ ಶಿಕ್ಷಣ ಪಡೆದವರಲ್ಲ; ವಿಶ್ವವನ್ನೇ ವಿಶ್ವವಿದ್ಯಾಲಯ ಮಾಡಿಕೊಂಡವರು.

ಐದು ಸಾವಿರಕ್ಕೂ ಹೆಚ್ಚು ಜಾನಪದ ಹಾಡುಗಳನ್ನು ತಮ್ಮ ನೆನಪಿನ ಉಗ್ರಾಣದಲ್ಲಿ ಶೇಖರಿಸಿಕೊಂಡಿರುವ ಅವರು ನಮ್ಮ ಕಾಲದ ವಿಸ್ಮಯ ವ್ಯಕ್ತಿಗಳಲ್ಲಿ ಒಬ್ಬರು. ಈ ಲೋಕಶಿಕ್ಷಕಿಯ ಬದುಕಿನ ಚಿತ್ರಣವನ್ನು ‘ಹಾಲಕ್ಕಿ ಕೋಗಿಲೆ’ ಕೃತಿ ಕಟ್ಟಿಕೊಡುತ್ತದೆ. ಅಕ್ಷತಾ ಕೃಷ್ಣಮೂರ್ತಿ ಸಂಪಾದಿಸಿರುವ ಈ ಕೃತಿಯಲ್ಲಿ ಇಪ್ಪತ್ತು ಲೇಖಕರು ಸುಕ್ರಜ್ಜಿಯ ಬದುಕಿನ ವಿವರ ಕಟ್ಟಿಕೊಟ್ಟಿದ್ದಾರೆ. ಆದರೆ ಬಹುಪಾಲು ಬರಹಗಳು ನೀರಸವಾಗಿವೆ; ವಿಷಯದ ವ್ಯಾಪ್ತಿ–ವೈವಿಧ್ಯಗಳಲ್ಲಿ ಸೊರಗಿವೆ. ಸುಕ್ರಜ್ಜಿ ಹಾಡುವ ಹಾಡುಗಳಲ್ಲಿ ಕೆಲವನ್ನಾದರೂ ಒಂದೆಡೆ ಕೊಟ್ಟು ವಿವರಿಸಿದ್ದರೆ ಓದುಗರಿಗೆ ಪ್ರಯೋಜವಾಗುತ್ತಿತ್ತು.

‘ವ್ಯಕ್ತಿ ಸರಳವಾದಷ್ಟು ಎತ್ತರಕ್ಕೆ ಏರುತ್ತಾನೆಂಬುದು ಸುಕ್ರಜ್ಜಿಯವರನ್ನು ಗಮನಿಸಿದಾಗ ಅನಿಸಲು ಶುರುವಾಗುತ್ತದೆ. ಸುಕ್ರಜ್ಜಿಯವರ ಅಂತರಾಳದಲ್ಲಿ ಸಮಷ್ಟಿಹಿತದ ಅಂತರಗಂಗೆ ಹರಿಯುತ್ತಲೇ ಇದೆ. ಅದನ್ನು ಸೂಕ್ಷ್ಮವಾಗಿ ಚಿಂತಿಸುತ್ತಾರೆ. ಇರುವುದರಲ್ಲಿಯೇ ಖುಷಿ ಪಡುವುದು ಹೇಗೆ ಎಂಬ ಪಾಠಕ್ಕೆ ಗುರುವಾಗಿ ಸುಕ್ರಜ್ಜಿ ನಿಲ್ಲುತ್ತಾರೆ’ ಎಂದಿದ್ದಾರೆ ಕೃತಿಯ ಸಂಪಾದಕರು.

ADVERTISEMENT

ಹಾಲಕ್ಕಿ ಕೋಗಿಲೆ

(ಸುಕ್ರಜ್ಜಿ ಬದುಕಿನ ಚಿತ್ರಣ)

ಸಂಪಾದಕರು: ಅಕ್ಷತಾ ಕೃಷ್ಣಮೂರ್ತಿ

ಪ್ರಕಾಶಕರು:

ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್‌

#375/15, ಕಗ್ಗೆರೆ ಪ್ರಕಾಶ್‌ ನಿಲಯ,

ಕೆಂಪೇಗೌಡನಗರ, ಒಂದನೇ ಮೇನ್‌,

ಎಂಟನೇ ಕ್ರಾಸ್‌, ಮಾಗಡಿ ಮೂಖ್ಯ ರಸ್ತೆ,

ವಿಶ್ವನೀಡಂ ಅಂಚೆ, ಬೆಂಗಳೂರು – 560091

ದೂರವಾಣಿ: 9739561334

ಪುಟಗಳು: 144

ಬೆಲೆ: ₹140/–

ಪ್ರಕಟನೆಯ ವರ್ಷ: 2019

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.