ADVERTISEMENT

ಹೊಸ ಪುಸ್ತಕ: ಜೈಲಿನೊಳಗಿನ ಕೈದಿಗಳ ರೋಚಕ ಕಥೆ ಜೈಲ್ ಡೈರಿ

ಐ.ಜೆ.ಮ್ಯಾಗೇರಿ ಅವರ ಪುಸ್ತಕ

ಪ್ರಜಾವಾಣಿ ವಿಶೇಷ
Published 13 ಏಪ್ರಿಲ್ 2024, 20:34 IST
Last Updated 13 ಏಪ್ರಿಲ್ 2024, 20:34 IST
ಮುಖಪುಟ
ಮುಖಪುಟ   

ಕೈದಿಗಳ ಬದುಕಿನ ಬಗ್ಗೆ ಕೆಲವು ಕೃತಿಗಳು ಬಂದುಹೋಗಿವೆ. ಜೈಲುಗಳಲ್ಲಿ ಇದ್ದುಬಂದ ಹೋರಾಟಗಾರರ ಕಥನಗಳೂ ಪ್ರಕಟವಾಗಿವೆ. ಜೈಲು ಅಧಿಕಾರಿಗಳಿಗೆ ಕೈದಿಗಳ ಬದುಕನ್ನು ಹತ್ತಿರದಿಂದ ನೋಡುವ ಅವಕಾಶ ಇದೆ. ಕರ್ನಾಟಕ ಕಾರಾಗೃಹ ಇಲಾಖೆಯಲ್ಲಿ ಅಧಿಕಾರಿಯಾಗಿರುವ  ಐ.ಜೆ.ಮ್ಯಾಗೇರಿ ಅವರು ವಿವಿಧ ಕಡೆ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಕೆಲವು ಕೈದಿಗಳ ಕಥೆಯನ್ನು ‘ಜೈಲು ಡೈರಿ’ ಕಥೆಯಲ್ಲಿ ಕಟ್ಟಿಕೊಟ್ಟಿದ್ದಾರೆ.

ಈ ಕೃತಿ ಪತ್ರಿಕೆಯೊಂದರಲ್ಲಿ ಅಂಕಣ ರೂಪದಲ್ಲಿ ಪ್ರಕಟಗೊಂಡ ಲೇಖನಗಳ ಗುಚ್ಛ. 21 ಶೀರ್ಷಿಕೆಯಡಿ ಇದನ್ನು ಕಟ್ಟಿಕೊಟ್ಟಿದ್ದಾರೆ. ಸಾಹಿತ್ಯಾಸಕ್ತರೂ ಆದ ಲೇಖಕರು ತಮ್ಮ ಅನುಭವವನ್ನು ನಿರೂಪಿಸುತ್ತ ಕಟ್ಟಿರುವ ಈ ಕಥನಗಳು ಚಿಂತನೆಯಾಗಿ ರೂಪಾಂತರಗೊಂಡಿವೆ. ಅಲ್ಲಲ್ಲಿ ದಾರ್ಶನಿಕರ, ಪ್ರಸಿದ್ಧ ಲೇಖಕರ ಉಲ್ಲೇಖವೂ ಇದೆ.  ಆದರೆ ಅನುಭವಗಳ ನಿರೂಪಣೆಯಲ್ಲಿ ಕೆಲವೆಡೆ ನೀತಿ ಬೋಧೆ ಹೆಚ್ಚೇ ಇವೆ ಎನಿಸುತ್ತದೆ.

ಕುಡುಕನೊಬ್ಬ ಹಸಿ ಬಾಣಂತಿಯನ್ನು ತನ್ನ ಕಾಮುಕತೆಗಾಗಿ ಭೀಕರವಾಗಿ ಕೊಂದ ಪ್ರಸಂಗ, ಸಂಸಾರ ಬಿಟ್ಟು ಜೈಲಿನಲ್ಲಿ ಇರಲಾಗದೇ ಪೆರೋಲಿನ ಮೇಲೆ ಬಿಡುಗಡೆಯಾದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗ... ಹೀಗೆ  ಕೈದಿಗಳ ವಿಭಿನ್ನ ಕಥೆಯಿಂದಾಗಿ ಕೃತಿ ಓದಿಸಿಕೊಂಡು ಹೋಗುತ್ತದೆ.

ADVERTISEMENT

ಕೃತಿಯಲ್ಲಿ ಅಲ್ಲಲ್ಲಿ ಅಕ್ಷರ ದೋಷ, ಪದ ಪ್ರಯೋಗದಲ್ಲಿ ದೋಷಗಳಿವೆ. ಆ ಕಡೆಯೂ ಲಕ್ಷ್ಯ ವಹಿಸಿದ್ದಲ್ಲಿ ಕೃತಿಯ ಮೌಲ್ಯ ಹೆಚ್ಚುತಿತ್ತು. ರಾಬೆನ್ ಐಸ್ಲ್ಯಾಂಡ್‌ (ರಾಬೆನ್ ಐಲ್ಯಾಂಡ್‌ ಸರಿ ಪ್ರಯೋಗ), ಟರ್ಡಿಯೊ (ತಾರದೇವ್).. ಹೀಗೆ ಕೆಲವು ಉದಾಹರಿಸಬಹುದು.

ಜೈಲ್‌ ಡೈರಿ – ಕೈದಿಗಳ ನೈಜ ಕಥನ ಲೇ: ಐ.ಜೆ. ಮ್ಯಾಗೇರಿ ಪ್ರ: ಸಂಗಾತ ಪುಸ್ತಕ ಸಂ: 9341757653

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.