ADVERTISEMENT

ಮೊದಲ ಓದು | ಮನುಷ್ಯ ಸ್ವಭಾವಗಳ ತೆರೆದಿಡುವ ಕತೆಗಳು

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 0:10 IST
Last Updated 17 ಆಗಸ್ಟ್ 2025, 0:10 IST
<div class="paragraphs"><p>ಸಾದರ ಸ್ವೀಕಾರ</p></div>

ಸಾದರ ಸ್ವೀಕಾರ

   

‎'ಲಚ್ಮನ ಸೈಕಲ್ ಪುರಾಣ ಮತ್ತು ಇತರ ಕಥೆಗಳು' ಮೋಹನ ಬಣಕಾರ ಅವರ ಚೊಚ್ಚಲ ಕಥಾ ಸಂಕಲನ. ‎ಈ ಸಂಕಲನದ ಹಸ್ತಪ್ರತಿಯು 2024-25ನೇ ಸಾಲಿನ 'ಛಂದ ಪುಸ್ತಕ ಬಹುಮಾನ' ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನಕ್ಕೆ ಕೂಡ ಪಾತ್ರವಾಗಿದೆ. ‌

‎ರಾಣೇಬೆನ್ನೂರು ಮೂಲದ ಇವರು ಬೆಂಗಳೂರಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದಾರೆ. ಇವರ ಕಥೆಗಳಲ್ಲಿ ಹಳ್ಳಿ ಹಾಗೂ ನಗರ ಸಮುದಾಯಗಳೆರಡೂ ಇಣುಕುತ್ತವೆ.

‎ವಾಸ್ತವ ಜಗತ್ತಿನಲ್ಲಿ ನಮ್ಮ ಸುತ್ತಲೂ ನಡೆಯುವ, ನಡೆಯುತ್ತಿರುವ ಅತಿ ಸಾಮಾನ್ಯ ಎನಿಸುವ ಘಟನೆಗಳನ್ನು ಕೂಡ ಕತೆಯಾಗಿಸುವ ಗುಣವನ್ನು ಕತೆಗಾರರು ಹೊಂದಿದ್ದಾರೆ. ಇದು ಈ ಸಂಕಲನದ ಕತೆಗಳಲ್ಲಿ ಕಾಣಬಹುದು. ಮನುಷ್ಯ ಸ್ವಭಾವದ ವಿವಿಧ ಮಗ್ಗುಲುಗಳನ್ನು ಇಲ್ಲಿನ ಕತೆಗಳು ತೆರೆದಿಡುತ್ತವೆ.

‎ಆಚಾರ ಹೇಳುವ ನಾಲಿಗೆ, ಅವಲಕ್ಕಿ ಸರ, ಒಂದು ಬಾಟಲಿನ ಕಥೆ, ಎಬಿಸಿಡಿ, ರಾಜು ಕಾಕಾ ಹೋಗಿಬಿಟ್ಟ ಕತೆಗಳು ಮನುಷ್ಯನ ವಿಚಿತ್ರ ಸ್ವಭಾವಗಳನ್ನು ತೆರೆದಿಡುವ ಮೂಲಕ ನೀತಿ ಬೋಧೆಯನ್ನು ಕೂಡ ಮಾಡುತ್ತವೆ.

‎ಹೀಗೊಂದು ಮದುವೆ, ಪೊಲೀಸ್ ಅಜ್ಜಿ ಕತೆಗಳು ಬದಲಾದ ಕಾಲಘಟ್ಟದ ಜೀವನ ಶೈಲಿಯ ಸುತ್ತಾ ಸುತ್ತುವ ಕತೆಗಳಾಗಿವೆ. ಲೈಟ್ಸ್ ಆಫ್ ಪ್ಲೀಸ್, ನಾಟಕ ಕಂಪನಿ ಕತೆಗಳು ಕಾರ್ಪೊರೇಟ್ ಲೋಕದೊಳಗಿನ ಕತೆಗಳನ್ನು ಹೇಳುತ್ತವೆ. ಲಚ್ಮನ ಸೈಕಲ್ ಪುರಾಣ ಕತೆಯು ಉಳ್ಳವರು ಮತ್ತು ಕೆಲಸದಾಳುವಿನ ನಡುವಿನ ವಿಶಿಷ್ಟ ಸಂಬಂಧವನ್ನು ಕಟ್ಟಿಕೊಡುತ್ತದೆ.

‎'ಲಚ್ಮನ ಸೈಕಲ್ ಪುರಾಣ ಮತ್ತು ಇತರ ಕಥೆಗಳು' ಕಥಾ ಸಂಕಲನದಲ್ಲಿ  ಹತ್ತು ಕತೆಗಳಿವೆ. ಸರಳ ನಿರೂಪಣಾ ಶೈಲಿಯ, ಓದಿಸಿಕೊಂಡು ಹೋಗುವ ಗುಣ ಇಲ್ಲಿನ ಕತೆಗಳಲ್ಲಿವೆ. ವೈವಿಧ್ಯಮಯ ಕಥಾ ವಸ್ತುಗಳಿಂದ ಕೂಡಿರುವ ಈ ಕತೆಗಳು ನಮ್ಮವೇ ಎನಿಸುವಷ್ಟು ಸಹಜತೆಯಿಂದ ಕೂಡಿವೆ.

ಪುಸ್ತಕ - ಲಚ್ಮನ ಸೈಕಲ್ ಪುರಾಣ ಮತ್ತು ಇತರ ಕಥೆಗಳು
‎ಲೇಖಕರು - ಮೋಹನ ಬಣಕಾರ
‎ಪ್ರಕಾಶಕರು - ಬೆನಕ ಬುಕ್ಸ್ ಬ್ಯಾಂಕ್
‎ಸಂಪರ್ಕ ಸಂಖ್ಯೆ - 7338437666
‎ಪುಟ - 198
‎ಬೆಲೆ - ₹230

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.