ADVERTISEMENT

ಹೆಸರಿನಲ್ಲೇನಿದೆ?

ಆನಂದ ಉಳಯ
Published 6 ಜುಲೈ 2022, 19:08 IST
Last Updated 6 ಜುಲೈ 2022, 19:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಶ್ರೀ ಬಸವೇಶ್ವರ ಯುವ ಆಟೊ ಚಾಲಕರ ಗೆಳೆಯರ ಬಳಗ’ ಎಂಬ ಬೋರ್ಡ್ ನೋಡಿದೇರಿ ಇವತ್ತು ಬಸ್‌ಸ್ಟ್ಯಾಂಡ್ ಬಳಿ’ ಎಂದಳು ಹೆಂಡತಿ.

‘ವಾಟ್ ಈಸ್ ಇನ್ ಎ ನೇಮ್?’ ಎಂದೆ ನಾನು ಥೇಟ್ ಷೇಕ್ಸ್‌ಪಿಯರ್‌ನಂತೆ.

‘ಇನ್ನೊಂದು ಸಲ ಹೇಳ್ತೀನಿ ಗಮನವಿಟ್ಟು ಕೇಳಿ’ ಎಂದು ‘ಶ್ರೀ ಬಸವೇಶ್ವರ ಯುವ ಆಟೊ ಚಾಲಕರ ಗೆಳೆಯರ ಬಳಗ’ ಎಂದು ಉಚ್ಚರಿಸಿದಳು.

ADVERTISEMENT

ನನಗೆ ಗೊಂದಲವಾಗತೊಡಗಿತು. ಅದನ್ನು ಬರೆದು ತೋರಿಸಿದಳು.

‘ಶ್ರೀ ಬಸವೇಶ್ವರ’ ಅಷ್ಟೇ ಅರ್ಥವಾಗಿದ್ದು ನನಗೆ’ ಎಂದೆ.

‘ನನ್ನದೂ ಅದೇ ಸಮಸ್ಯೆ. ಯುವ ಆಟೊ ಚಾಲಕರು ಎಂದರೆ ಯುವ ಆಟೊನೇ ಅಥವಾ ಯುವ ಚಾಲಕರೆ? ಅಥವಾ ಯುವ ಗೆಳೆಯರೆ?’

‘ಹೌದು ‘ಚಾಲಕರ ಗೆಳೆಯರ ಬಳಗ’ ಅಂತಿದೆ’.

‘ಸೊ, ಈಗ ನಾವು ‘ಶ್ರೀ ಬಸವೇಶ್ವರ ಯುವ ಆಟೊ ಚಾಲಕರ ಗೆಳೆಯರ ಬಳಗ’ ಅಂದರೆ ಯಾರನ್ನ ಎಂದು ತಿಳಿದುಕೊಳ್ಳುವುದು? ಅದು ಯುವ ಆಟೊ ಎಂದರೆ ಹೊಸ ಆಟೊ ಆಗಿರಬಹುದು. ಅಂದರೆ ಹೊಸ ಆಟೊ ಕೊಂಡ ಚಾಲಕರ ಬಳಗವೇ ಇದು? ಅಥವಾ ಯುವ ಚಾಲಕರ ಬಳಗವೇ? ಆದರೆ ಚಾಲಕರ ಗೆಳೆಯರ ಬಳಗ ಅಂತಿದೆಯಲ್ಲ? ಯುವ ಗೆಳೆಯರು, ಬರೀ ಗೆಳೆಯರು ಅಲ್ಲ’.

‘ಕರೆಕ್ಟ್, ದೇವನೊಬ್ಬ ನಾಮ ಹಲವು ಎಂದಂತೆ ಬೋರ್ಡ್ ಒಂದು, ಅರ್ಥಗಳು ಬೇರೆ ಬೇರೆ’.

‘ನನಗೆ ಈಗ ಇನ್ನೊಂದು ಸಂದೇಹ. ಈ ಆಟೊ ಚಾಲಕರು- ಯುವಕರೋ ವಯಸ್ಸಾದವರೋ ಅದನ್ನು ಪಕ್ಕಕ್ಕಿಡಿ- ಅವರ ಗೆಳೆಯರು ಸೇರಿ ಏಕೆ ಈ ಬಳಗ ಮಾಡಿಕೊಂಡರು? ಹೌದು, ಆಟೊ ಚಾಲಕರಿಗೆ ನೆರವಾಗಲೆಂದೇ?’

‘ನೆರವು ಬೇಕಾಗಿರುವುದು ಪ್ರಯಾಣಿಕರಿಗೆ, ಕರೆದರೆ ಬರೋಲ್ಲ ಅಂತಾರೆ, ಮೀಟರ್ ಮೇಲೆ ಟ್ವೆಂಟಿ ರುಪೀಸ್ ಕೊಡಿ ಅಂತಾರೆ ಚಾಲಕರು’.

‘ಹಾಗಿದ್ದರೆ ಪ್ರಯಾಣಿಕರ ನೆರವಿಗೆ ಬರಲು ಈ ಬಳಗ ರಚಿಸಿರಬಹುದೇ?’

‘ಆದರೆ ಈ ಗೆಳೆಯರು ಎಲ್ಲಿ ಸಿಗುತ್ತಾರೆ?’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.