ADVERTISEMENT

ಭರತನಾಟ್ಯ: ಏಪ್ರಿಲ್‌ 20ರಂದು ಚಂದನಾ ರಂಗಪ್ರವೇಶ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2025, 23:30 IST
Last Updated 18 ಏಪ್ರಿಲ್ 2025, 23:30 IST
<div class="paragraphs"><p>ಚಂದನಾ ನಾಗ್‌</p></div>

ಚಂದನಾ ನಾಗ್‌

   

ನಿರ್ಮಾಪಕಿ ಶೈಲಜಾ ನಾಗ್‌ ಮತ್ತು ನಿರ್ದೇಶಕ ಬಿ.ಸುರೇಶ್‌ ಅವರ ಪುತ್ರಿ ಚಂದನಾ ನಾಗ್‌ ಅವರ ಭರತನಾಟ್ಯ ರಂಗಪ್ರವೇಶ ಏಪ್ರಿಲ್‌ 20ರಂದು ಭಾನುವಾರ ಜೆ.ಸಿ.ರಸ್ತೆಯಲ್ಲಿರುವ ಎಡಿಎ ರಂಗಮಂದಿರದಲ್ಲಿ ನಡೆಯಲಿದೆ. 

ಚಂದನಾ ನಾಗ್‌ ಭ್ರಮರಿ ಡಾನ್ಸ್‌ ರೆಪರ್ಟರಿಯ ನಿರ್ದೇಶಕಿ ಸ್ನೇಹಾ ಕಪ್ಪಣ್ಣ ಅವರ ಶಿಷ್ಯೆ. 

ADVERTISEMENT

ಸಂಜೆ 5.30ಕ್ಕೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ನೂಪುರ ಭರತನಾಟ್ಯ ಶಾಲೆಯ ನಿರ್ದೇಶಕಿ ಡಾ.ಲಲಿತಾ ಶ್ರೀನಿವಾಸನ್‌, ಖ್ಯಾತ ನೃತ್ಯಪಟು ಪ್ರತಿಭಾ ಪ್ರಹ್ಲಾದ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷೆ ಶುಭಾ ಧನಂಜಯ್ ಇರಲಿದ್ದಾರೆ. 

ಉಪಸ್ಥಿತಿ: ಡಾ.ವಿಜಯ, ಕಮಲಾ ರಾಧಾಕೃಷ್ಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.