ADVERTISEMENT

ಸವಿತಾ ನಾಗಭೂಷಣ ಅವರ ಕವಿತೆ: ತಕರಾರು

ಸವಿತಾ ನಾಗಭೂಷಣ್
Published 8 ಫೆಬ್ರುವರಿ 2025, 23:30 IST
Last Updated 8 ಫೆಬ್ರುವರಿ 2025, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಒಂದಂಶ ಅಪ್ಪನದು ನನ್ನಲ್ಲಿದೆ
ನನ್ನಲ್ಲಿರುವ ಗಂಡು ಗುಣ ಅವನದೆ
ಹೆಮ್ಮೆ ನನಗೆ....
ಹಾಗೆ ಅವನ ದೂರಲಾರೆ!

ಒಂದಂಶ ನನ್ನದು ಮಗನಲ್ಲಿದೆ
ಅವನ ತಪ್ಪುಒಪ್ಪುಗಳಿಗೆ
ನನ್ನದೂ ಕೊಡುಗೆ ಇದೆ
ಅರೆ! ಒದ್ದರೂ ಮುದ್ದುಗರೆಯುವೆ!

ADVERTISEMENT

ಪಾಪ ಇವನು....ಕೈ ಹಿಡಿದವನು
ಹಿಂದುಳಿದರೆ ಅನುಮಾನ?
ಮುಂದೋಡಿದರೆ ಅವಮಾನ?
ಜತೆಗಿರು ಎನ್ನಲು ಬಿಗುಮಾನ!
ನನ್ನವನಾದರೂ ನನ್ನವನಲ್ಲವೆ?
ಬೆರೆತರೂ ಕಲೆತರೂ ಭಿನ್ನಮತ, 
ಯಾಕೆ ಹೀಗೆ ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.