
ಚಿತ್ರ: ಎಐ
ಕಾಲು ತೊಳೆಯುವಾಗ ಒಂದು ಅಭ್ಯಾಸವಿರುತ್ತದೆ. ಕಾಲುಗಳನ್ನು ಕೈಯಿಂದ ಉಜ್ಜಿ ತೊಳೆಯುವ ಬದಲು ಮತ್ತೊಂದು ಕಾಲಿನ ಪಾದದಿಂದಲೇ ಮುಂಗಾಲನ್ನು ಉಜ್ಜುವ ಅಭ್ಯಾಸ ಹಲವರಲ್ಲಿದೆ. ಹೀಗೆ ಕಾಲು ತೊಳೆಯುವುದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಣದ ಮುಗ್ಗಟ್ಟು ತಂದುಕೊಡಬಹುದು ಎಂದು ಹೇಳಲಾಗುತ್ತದೆ.
ಈ ರೀತಿಯಾಗಿ ಕಾಲು ತೊಳೆಯುವುದರಿಂದ ಮನೆಯಲ್ಲಿ ನಡೆಯುವ ಶುಭಕಾರ್ಯ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡೆತಡೆ ಉಂಟಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾದರೆ ಒಂದು ಕಾಲಿನಿಂದ ಮತ್ತೊಂದು ಕಾಲನ್ನು ಏಕೆ ಉಜ್ಜಿ ತೊಳೆಯಬಾರದು ಎಂಬುದನ್ನು ತಿಳಿಯೋಣ.
ಇದಕ್ಕೆ ಕಾರಣ ಏನು?
ಮೀನ ರಾಶಿ ಪಾದವನ್ನು ಸೂಚಿಸುತ್ತದೆ. ಇಡೀ ದೇಹದ ಭಾರವನ್ನು ಹೊತ್ತು ಮುನ್ನಡೆಯುವ ಶಕ್ತಿ ಪಾದಕ್ಕೆ ಇರುತ್ತದೆ.
ಗುರು ಗ್ರಹವು ಮೀನ ರಾಶಿಯ ಅಧಿಪತಿಯಾಗಿರುತ್ತಾನೆ. ಅಲ್ಲದೇ ಗುರು ಧನ, ಜ್ಞಾನ ಹಾಗೂ ಶುಭಕಾರಕ ಎಂದು ಜ್ಯೋತಿಷ ಹೇಳುತ್ತದೆ.
ಶುಕ್ರನು ಕೂಡ ಇದೇ ಮೀನ ರಾಶಿಯಲ್ಲಿ ಉಚ್ಚ ಸ್ಥಾನವನ್ನು ಪಡೆಯುತ್ತಾನೆ. ಈ ಗ್ರಹದ ಬಲದಿಂದ ವಿವಾಹ, ಸಂಪತ್ತು, ಮನೆ, ವಾಹನ ಖರೀದಿ ಹಾಗೂ ಐಷಾರಾಮಿ ಜೀವನಕ್ಕೆ ಕಾರಣಕರ್ತನಾಗುತ್ತಾನೆ.
ಇವೆರಡು ಗ್ರಹಗಳು ರಾಕ್ಷಸ ಗುರು ಮತ್ತು ದೇವ ಗುರುಗಳಾಗಿವೆ. ಆದರೂ ಈ ಗ್ರಹಗಳು ಶುಭ ಹಾಗೂ ಗುರು ಸ್ಥಾನವನ್ನು ಪಡೆದುಕೊಂಡಿವೆ.
ಈ ಕಾರಣದಿಂದಲೇ ಪಾದಗಳು ಪೂಜನೀಯ ಸ್ಥಾನ ಪಡೆದಿವೆ. ಇದರಿಂದಾಗಿ ಒಂದು ಪಾದವನ್ನು ಇನ್ನೊಂದು ಪಾದದಿಂದ ಉಜ್ಜಬಾರದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.