ADVERTISEMENT

Astrology: 6 ಬೆರಳು, ಎರಡು ಸುಳಿ ಹೊಂದಿದ್ದರೆ ಅದೃಷ್ಟವೋ, ದುರದೃಷ್ಟವೋ

ಎಲ್.ವಿವೇಕಾನಂದ ಆಚಾರ್ಯ
Published 7 ನವೆಂಬರ್ 2025, 6:20 IST
Last Updated 7 ನವೆಂಬರ್ 2025, 6:20 IST
<div class="paragraphs"><p>ಚಿತ್ರ: ಗೆಟ್ಟಿ&nbsp;</p></div>
   

ಚಿತ್ರ: ಗೆಟ್ಟಿ 

ಸಹಜವಾಗಿಯೇ ಕೆಲವರು 6 ಬೆರಳು ಹಾಗೂ ತಲೆಯಲ್ಲಿ‌ ಎರಡು ಸುಳಿ ಹೊಂದಿರುತ್ತಾರೆ. ಜ್ಯೋತಿಷದಲ್ಲಿ ಈ ಗುರುತುಗಳು ಅದೃಷ್ಟದ ಸಂಕೇತ ಎಂದು ನಂಬಲಾಗಿದೆ. ಇದರ ಬಗ್ಗೆ ಜ್ಯೋತಿಷಿ ಎಲ್‌. ವಿವೇಕಾನಂದ ಆಚಾರ್ಯ ಅವರು ವಿವರಿಸಿದ್ದಾರೆ.  

  • ಗಂಡು ಮಕ್ಕಳ ಬಲಗೈನಲ್ಲಿ 6 ಬೆರಳುಗಳಿರುವುದು ಹಾಗೂ ಹೆಣ್ಣು ಮಕ್ಕಳ ಎಡಗೈಯಲ್ಲಿ 6 ಬೆರಳುಗಳಿರುವುದು ಅದೃಷ್ಟದ ಸಂಕೇತ ಎಂದು ಹೇಳಲಾಗುತ್ತದೆ.

    ADVERTISEMENT
  • ಒಂದು ವೇಳೆ ಎರಡು ಕೈಯಲ್ಲಿ ಆರು ಬೆರಳುಗಳಿದ್ದರೆ ಅವರು ಜೀವನದಲ್ಲಿ ಲಾಭ ಮತ್ತು ನಷ್ಟ ಎರಡೂ ಸರಿ ಸಮನಾಗಿರುತ್ತದೆ. 6 ಬೆರಳುಗಳ ಜೊತೆ ಹುಟ್ಟುವ ಮಕ್ಕಳು ಆ ಮನೆಗೆ ಅದೃಷ್ಟವನ್ನು ತರುತ್ತಾರೆ ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ.

  • ಆರು ಬೆರಳುಗಳಿರುವುದು ಅಪಶಕುನವೆಂದು ತಿಳಿದು ಶಸ್ತ್ರ ಚಿಕಿತ್ಸೆ ಮಾಡಿಸುವವರಿದ್ದಾರೆ. ಆದರೆ ಇದು ಸಮಂಜಸವಲ್ಲ. ಅಗಲವಾಗಿರುವ ಹಣೆ ಹಾಗೂ ಉದ್ದವಾಗಿರುವ ಮೂಗು ಇರುವವರು ಯೋಗಗಳನ್ನು ಹೊಂದಿರುತ್ತಾರೆ. ಇವರುಗಳಿಗೆ ರಾಜಯೋಗ, ಧಾನ್ಯ ಯೋಗ ಹಾಗೂ ಧನ ಯೋಗಗಳು ಲಭಿಸುತ್ತದೆ ಎಂದು ಹೇಳಲಾಗುತ್ತದೆ. ‌

  • ಇವರು ಸಮಾಜದಲ್ಲಿ ಗಣ್ಯ ವ್ಯಕ್ತಿಗಳು, ರಾಜಕಾರಣಿಗಳು ಹಾಗೂ ಪ್ರಸಿದ್ಧ ವ್ಯಕ್ತಿಗಳಾಗುತ್ತಾರೆ ಎಂದು ಜ್ಯೋತಿಷ ಹೇಳುತ್ತದೆ. 

  • ಉದಾಹರಣೆ:ರಾಜಕುಮಾರ್, ಅಟಲ್ ಬಿಹಾರಿ ವಾಜಪೇಯಿ. ಎಪಿಜೆ ಅಬ್ದುಲ್ ಕಲಾಂ. ಸಿದ್ದಗಂಗಾ ಮಠದ ಶಿವಕುಮಾರ ಮಹಾಸ್ವಾಮೀಜಿಗಳು ಹಾಗೂ ಮಹಾತ್ಮ ಗಾಂಧಿ ಸೇರಿದಂತೆ ಇನ್ನೂ ಹಲವು ಉನ್ನತ ಸಾಧನೆ ಮಾಡಿದವರನ್ನು ನೋಡಬಹುದು.

  • ತಲೆಯಲ್ಲಿ ಎರಡು ಸುಳಿ ಇರುವವರಿಗೆ ದ್ವಿಕಳತ್ರ ಯೋಗವಿರುತ್ತದೆ (ಎರಡು ಮದುವೆಯ ಯೋಗ) ಎಂದು ಹೇಳಲಾಗುತ್ತದೆ. ಇದು ಜ್ಯೋತಿಷ್ಯ ಶಾಸ್ತ್ರಕ್ಕೆ ಅನುಸಾರವಾಗಿ ಹಲವರ ಜೀವನದಲ್ಲಿ ನಿಜವಾಗಿದೆ.

ಇವೆಲ್ಲವೂ ಮನುಷ್ಯನ ಪೂರ್ವ ಜನ್ಮದ ಕರ್ಮಾನುಸಾರವಾಗಿ ನಡೆಯುತ್ತವೆ ಎಂದು ಜ್ಯೋತಿಷಿ ಎಲ್‌.ವಿವೇಕಾನಂದ ಅವರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.