ADVERTISEMENT

ಪಂಚಮ ಶನಿ ಕಾಟಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್‌ ವರ್ತನೆ ಉತ್ತಮ ಉದಾಹರಣೆ

ಮಹಾಬಲಮೂರ್ತಿ ಕೊಡ್ಲೆಕೆರೆ
Published 29 ಜನವರಿ 2026, 0:56 IST
Last Updated 29 ಜನವರಿ 2026, 0:56 IST
<div class="paragraphs"><p>ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌</p></div>

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌

   

ಕೃಪೆ: ಪಿಟಿಐ

ಮನ ಬಂದಂತೆ ಟ್ರಂಪ್ ವರ್ತಿಸುತ್ತಾರೆ ಎಂದು ಈಗ ಇಡೀ ಯುರೋಪ್ ಖಂಡ ಕೂಗಿ, ಕೂಗಿ ಹೇಳುತ್ತಿದೆಯೆ? ಇದಕ್ಕೆ ಯಾವ ಅನುಮಾನವೂ ಬೇಕಿಲ್ಲ ಎಂದು ಇತ್ತೀಚಿನ ಅಂತರರಾಷ್ಟ್ರೀಯ ಮಟ್ಟದ ಎಲ್ಲಾ ರಾಜಕೀಯ ವಿಶ್ಲೇಷಕರು ಒಂದೇ ಸ್ವರದಲ್ಲಿ ಟೇಬಲ್‌ ಬಡಿದು ಹೇಳುತ್ತಿದ್ದಾರೆ. ಇವರೆಲ್ಲರ ವ್ಯಂಗ್ಯದ, ಒಕ್ಕೊರಲಿನ ವಿಶ್ಲೇಷಣೆಗಳೆಲ್ಲ ‘ಟ್ರಂಪ್ ಒಬ್ಬ ಯೋಚನಾ ಶಕ್ತಿ ಇಲ್ಲದೆ ಮಾತನಾಡುವ ವಿಚಿತ್ರ ಒರಟು ವ್ಯಕ್ತಿತ್ವದ ಮನುಷ್ಯ’ ಎಂದು ಬೊಟ್ಟು ಮಾಡಿ ತೋರಿಸುವ ರೀತಿಯಲ್ಲಿ ಇರುತ್ತವೆ. ಆದರೆ ಟ್ರಂಪ್ ತನ್ನ ವಿರುದ್ಧದ ಟೀಕೆಗಳಿಗೆ ಎಂದೂ ತಲೆ ಕೆಡಿಸಿಕೊಳ್ಳದ ವ್ಯಕ್ತಿಯಾಗಿದ್ದಾರೆ. ಜತೆಗೆ ಟೀಕೆಗಳು ಬಂದಷ್ಟೂ ತಾನು ಗಟ್ಟಿಯಾಗುತ್ತೇನೆ ಎಂದು ತಿಳಿದುಕೊಂಡಂತೆ ಇನ್ನೂ ಹೆಚ್ಚು ಗಟ್ಟಿಯಾಗುತ್ತಾರೆ. 

ADVERTISEMENT

ಇತ್ತೀಚಿನ ಟ್ರಂಪ್ ಅವರ ಟ್ಯಾರಿಫ್ ನೀತಿಯ ಆಳ ಅಗಲಗಳ ಮೂಲಕ ನಾವಿದನ್ನು ಗಮನಿಸಬಹುದಾಗಿದೆ. ಎಲ್ಲಾ ದೇಶಗಳನ್ನು ಶಿಕ್ಷಿಸುವ ನ್ಯಾಯಾಧೀಶ ತಾನು ಎಂಬ ಅಘೋಷಿತ ಅಧಿಕಾರವನ್ನು ಚಲಾಯಿಸುತ್ತಿರುವ ಭ್ರಮಾಧೀನ ವ್ಯಕ್ತಿಯಾಗಿ ಕಾಣಿಸುತ್ತಾರೆ. ಈ ರೀತಿಯ ವಿಲಕ್ಷಣ ನಡತೆಯನ್ನು ಇವರಿಗೆ ಒಂದು ಬಾಧೆಯೇ ಎಂಬಂತೆ ಚಂದ್ರ ಒದಗಿಸಿದ್ದಾನೆ. ಚಂದ್ರನಿಗೆ ನೀಚ ಭಂಗ ರಾಜ ಯೋಗವನ್ನು ಮಂಗಳ ಗ್ರಹ ಒದಗಿಸಿರುವುದರಿಂದ ತನ್ನ ಬಗೆಗೆ ಸ್ವವಿಮರ್ಶೆ ಮಾಡಲು ಟ್ರಂಪ್ ವಿಫಲರಾಗುತ್ತಾರೆ. ಹಾಗೆಯೇ ಚಂದ್ರನೂ ಕುಜ ಗ್ರಹಕ್ಕೆ ನೀಚ ಭಂಗ ರಾಜಯೋಗವನ್ನು ಒದಗಿಸಿದೆಯಾದ್ದರಿಂದ ಒರಟುತನವನ್ನೂ ಚಂದ್ರ, ಕುಜನ ಮೂಲಕ ಟ್ರಂಪ್ ಅವರ ವ್ಯಕ್ತಿತ್ವದಲ್ಲಿ ಸಂಯೋಜಿಸಿ ಇಟ್ಟಿದೆ.

ತನ್ನ ಹಟವೇ ಗೆಲ್ಲಬೇಕು ಎಂಬ ಮಹತ್ತರ ಅಹಂ ಅನ್ನು ಅವರ ಜನ್ಮ ಸಿದ್ಧ ಹಕ್ಕು ಎಂಬಂತೆ ಪೋಷಿಸುತ್ತದೆ. ಆಧುನಿಕ ರಾಜ ನೀತಿಗೆ ಮಹತ್ತರವಾದ ನಯಗಾರಿಕೆ ಬೇಕೇ ಬೇಕು. ಆದರೆ ಟ್ರಂಪ್ ಯಾವುದೇ ಸಮಯದಲ್ಲಿ ಯಾರೂ ಒಪ್ಪದಿರುವ ನಡವಳಿಕೆಗಳನ್ನು ತೋರಿಸುತ್ತಾರೆ. ಇದಕ್ಕೆ ಬಹು ದೊಡ್ಡ ಉದಾಹರಣೆ ಎಂದರೆ, ಉಕ್ರೇನ್ ಅಧ್ಯಕ್ಷರಾದ ಝಲೆನ್‌ಸ್ಕಿ ಅವರಿಗೆ ‘ರಷ್ಯಾದ ಜತೆಗೆ ಸಂಧಾನಕ್ಕೆ ಒಪ್ಪಿಗೆ ಕೊಡುವುದಾಗಿದೆ. ಬೀದಿಯ ಜಗಳದ ರೀತಿಯಲ್ಲಿ ಟ್ರಂಪ್ ಸೂಕ್ಷ್ಮವಾದ ಅಂತರಾರಾಷ್ಟ್ರೀಯ ಮಹತ್ವದ ಸಂದರ್ಭದಲ್ಲಿ ತನ್ನನ್ನು ಜಗತ್ತಿಗೆ ಕಾಣಿಸಿಕೊಂಡಿದ್ದು ಸೂಕ್ತವಾಗಿರಲಿಲ್ಲ. ಅಮೆರಿಕದ ಅಧ್ಯಕ್ಷರಿಗೆ ಈ ರೀತಿಯ ವ್ಯಗ್ರತೆ ಶೋಭೆಯೇ ಎಂದು ಕೋಟ್ಯಂತರ ಜನ ವಿಸ್ಮಯದಿಂದಲೇ ಕೇಳಿದರು. ಚಂದ್ರ ಗ್ರಹ ಈ ಎಲ್ಲಾ ಅವಾಂತರಗಳನ್ನು ಮಾಡಿಸುತ್ತಿದೆ. ಜತೆಗೆ ಪಂಚಮ ಶನಿ ಕಾಟ ಟ್ರಂಪ್ ಅವರನ್ನು
ಸಂಕಷ್ಟಕ್ಕೆ ತಳ್ಳಿತು. ಚಂದ್ರನ ಮನೆಯಾದ ಕಟಕ ರಾಶಿಯಲ್ಲಿ ಕುಳಿತಿರುವ ಶನಿ ಗ್ರಹ ಮುಂದಿನ ಎರಡು ಕಾಲು ವರ್ಷಗಳಲ್ಲಿ ಟ್ರಂಪ್ ಅವರನ್ನು ಇನ್ನೂ ಹೆಚ್ಚು ಅಪಾಯಕಾರಿ ವೇಗಕ್ಕೆ ತಳ್ಳುತ್ತಾನೆ. 

ಪಂಚಮ ಶನಿ ಕಾಟದ ವಿಹ್ವಲತೆ

ಸದ್ಯ ಪಂಚಮ ಶನಿ ಕಾಟದ ಕರಿ ನೆರಳಲ್ಲೂ ಇರುವ ಟ್ರಂಪ್ ಈಗಾಗಲೇ ತಮ್ಮ ರಾಜನೀತಿಯ ವಿಲಕ್ಷಣವಾದ ಹೆಜ್ಜೆಗಳ ಮೂಲಕ ಕುಖ್ಯಾತಿ ಹೊಂದಿದ್ದಾರೆ. ಈ ಉನ್ಮಾದ ಪಂಚಮ ಶನಿ ಕಾಟವು ಟ್ರಂಪ್ ಅವರನ್ನು ಕಾಡುತ್ತಿರುವ ಈ ಸಮಯದಲ್ಲಿ ಶನಿ ಗ್ರಹದ ಜತೆ ಚಂದ್ರನಿಗೆ ಒದಗುತ್ತಿರುವ ತಿಕ್ಕಾಟದ ಫಲವಾಗಿಯೇ ಉಂಟಾದದ್ದು ಎಂಬುದು ನಿಸ್ಸಂಶಯ ವಿಚಾರವೇ ಆಗಿದೆ. ಕೇತು ಗ್ರಹವು ಚಂದ್ರನನ್ನು ಸುತ್ತಿ ಬಿಗಿಯುತ್ತಿರುವ ವಿಚಾರವೂ ಇವರ ಜನ್ಮ ಕುಂಡಲಿಯ ಪ್ರಧಾನ ದೋಷವಾಗಿರುತ್ತದೆ. ಅಮೆರಿಕದಂತಹ ಅಗಾಧವಾದ ಶಕ್ತಿಯುತ ಪ್ರಜಾಸತ್ತೆಯ ಜವಾಬ್ದಾರಿಯುತ ಅಧ್ಯಕ್ಷ ಸ್ಥಾನದಲ್ಲಿ ಟ್ರಂಪ್ ತಾನು ಇದ್ದರೂ ನಿರ್ವಹಿಸಬೇಕಾದ ಹತ್ತು ಹಲವು ಪ್ರಮುಖ ವಿಚಾರಗಳನ್ನೆಲ್ಲ ಬಿಟ್ಟು ಅಲಕ್ಷಿಸಿ ಘನತೆ ಮರೆತು ನೊಬೆಲ್ ಪುರಸ್ಕಾರದ ವಿಷಯವನ್ನು ಪ್ರಧಾನವಾಗಿ ಯೋಚಿಸುತ್ತಾರೆ. ಒಬಾಮಾಗೆ ಒಲಿದ ನೊಬೆಲ್ ನನಗೂ ಒಲಿಯಬೇಕಾಗಿದೆ ಎಂದು ಯೋಚಿಸುತ್ತಿದ್ದಾರೆ. ವೆನೆಜುವೆಲಾ ಹೋರಾಟಗಾರ್ತಿಗೆ ಒಲಿದ ನೊಬೆಲ್ ಪದಕವನ್ನು (ಜಾಗತಿಕ ಶಾಂತಿಗಾಗಿ ತಾನೂ ಹೋರಾಡಿದ್ದೇನೆ ಎಂಬೆಲ್ಲ ಕಾರಣ ತನಗೆ ತಾನೇ ಮಾಡಿಕೊಂಡು) ಆಪ್ತತೆಯ ನೆಲೆಯಲ್ಲಿ ನೊಬೆಲ್ ಪುರಸ್ಕಾರ ಪಡೆದ ಹೆಣ್ಣುಮಗಳು ಕೊಟ್ಟ ಕಾಣಿಕೆಯಾಗಿ ಮಾಧ್ಯಮಗಳೆದುರು ಸಂತಸದ ನಗುವಲ್ಲಿ ಸ್ವೀಕರಿಸುತ್ತಾರೆ. ಜಗತ್ತೇ ತನ್ನನ್ನು ಕಂಡು ನಗುವಂತೆ ಮಾಡುತ್ತಾರೆ.

ರಾಹು ಗ್ರಸ್ತ ಸೂರ್ಯ

ಸೂರ್ಯನನ್ನು ಕರ್ಮ ಸ್ಥಾನವಾದ ವೃಷಭದಲ್ಲಿ ಮಂಕುಗೊಳಿಸಿರುವ ವಿಷಭರಿತ ರಾಹುವು ಟ್ರಂಪ್ ಅವರನ್ನು ಹಠಮಾರಿಯಾಗಿಸುತ್ತಾನೆ. ಶತಾಯಗತಾಯ ಅಧ್ಯಕ್ಷೀಯ ಚುನಾವಣೆಯಲ್ಲಿ ಮೂರು ಬಾರಿ ತನ್ನ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ, ಎರಡು ಬಾರಿ ಆಯ್ಕೆಯಾಗುತ್ತಾರೆ. ಮೂರನೇ ಚುನಾವಣಾ ಸಮಯದಲ್ಲಿ ಕೂದಲೆಳೆಯ ಅಂತರದಲ್ಲಿ ತನ್ನನ್ನು ಮುಗಿಸಲು ಬಂದವನ ಪಿಸ್ತೂಲಿನ ಏಟಿನಿಂದ ಪಾರಾಗುತ್ತಾರೆ. ಆದರೆ ಕಡು ಕತ್ತಲ ಪಿಂಡವಾದ ರಾಹು ಗ್ರಹವು ಇವರ ಕುಂಡಲಿಯಲ್ಲಿ ಆಯುಷ್ಯ, ಆರೋಗ್ಯ, ಉತ್ಸಾಹಗಳಿಗೆ ತೊಂದರೆ ತಂದಿಡುವ ರೀತಿಯಲ್ಲಿ ಸೂರ್ಯನನ್ನು ತಗುಲಿಕೊಂಡಿದೆ. ಮೈ ಎಲ್ಲಾ ಕಣ್ಣಾಗಿ ಟ್ರಂಪ್ ಇರಲೇ ಬೇಕಾಗುತ್ತದೆ. ಜೀವದ ಮೇಲೆ ತುಂಬಾ ಎಚ್ಚರ ಇರಿಸಿಕೊಳ್ಳಲು ಇನ್ನೂ ಆರು ವರ್ಷಗಳ ಜಾಗ್ರತೆಯಿಂದ ಇರಲೇ ಬೇಕಾಗುತ್ತದೆ ಟ್ರಂಪ್.

ಹೆಚ್ಚಿನ ಜಾಗ್ರತೆ ಬೇಕೇ ಬೇಕು. ಈಗ ಟ್ರಂಪ್ ಜಾತಕದಲ್ಲಿ ಗುರು ಗ್ರಹದ ಕಕ್ಷೆಗೆ ಅಸಮತೋಲನ ತುಂಬಿದೆ. ಆರ್ಥಿಕ ನೀತಿಯನ್ನು ವಿಚಿತ್ರ ಕೋಷ್ಟಕಗಳ ಮೂಲಕ ಹಾಸ್ಯವಾಗಿ ನಿರ್ವಹಿಸುವ ಹಗುರ ನಿರ್ಧಾರಗಳೇ ಮುಖ್ಯ ಕಾರಣವಾಗಿ. ಡೊನಾಲ್ಡ್ ಟ್ರಂಪ್ ಮುಂದೆ ತನ್ನ ದೇಶವನ್ನು ಕಷ್ಟಕ್ಕೆ ಸಿಲುಕಿಸಿ ಬಿಡುವ ಸಾಧ್ಯತೆ ಅಧಿಕವಾಗಿದೆ. ಸೂಕ್ತವಾದ ಎಚ್ಚರದ ಹೆಜ್ಜೆಗಳನ್ನು ಇರಿಸಿಯೇ ಆರ್ಥಿಕತೆಗೆ ಬಲ ತರಬೇಕಾದ ರೂಪುರೇಷೆಗಳನ್ನು ಟ್ರಂಪ್ ಸದ್ಯ ಹೆಣೆಯಬೇಕಾಗಿದೆ. ಕಸರುಗಳಿಂದ ತುಂಬಿರುವ ಗುರು ಗ್ರಹ ಇವರ ಜಾತಕದ ಆರ್ಥಿಕ ಸ್ಥಳದಲ್ಲಿ ಇದ್ದು, ಜೀವಕ್ಕೂ, ಆರ್ಥಿಕತೆಗೂ ಸೇರಿ ಹಲವು ಅವಘಡ ತರುವ ಕರಿ ಕಾರ್ಮೋಡಗಳನ್ನು ಸರ್ರನೆ ನಿರ್ಮಿಸಬಹುದಾಗಿದೆ. ಮಾರಕ ರೀತಿಯಲ್ಲಿ ಗುರು ಇರುವುದರಿಂದ ಬೀಜ ಬಿತ್ತಬಹುದಾಗಿದೆ. ಒಟ್ಟಿನಲ್ಲಿ ದೊಡ್ಡ ರೀತಿಯ ಎಚ್ಚರಿಕೆ ಬೇಕು.

ಹಗುರಾಗಿ ಕಾಣಬಾರದು

ಇಸ್ರೇಲ್ ದೇಶದ ಅಸ್ತಿತ್ವಕ್ಕೆ ತನ್ನ ಮೂಲಕ ಜಾಗತಿಕ ಶಾಂತಿಗೆ ಧಕ್ಕೆ ಆದೀತು. ಗ್ರೀನ್ ಲ್ಯಾಂಡ್ ಬಗೆಗೆ ಟ್ರಂಪ್ ಉನ್ಮಾದ ತೋರಿಸಬಾರದು. ಬಹುತರವಾದ ಸಮೃದ್ಧಿ ಹಾಗೂ ತೂಕ ಹೊಂದಿದ ಅಮೆರಿವನ್ನು ಹಗುರಾಗಿಸಬಾರದು. ಟ್ರಂಪ್. ಪಾಕಿಸ್ತಾನದ ಜತೆಗಿನ ಆಪ್ತ ಕೈ ಕುಲುಕಾಟ, ಕಾಳ ಸರ್ಪ ದೋಷ ಹೊಂದಿರುವ ಡೊನಾಲ್ಡ್‌ ಗೆ ಬರುವ ವರ್ಷದ ಮಧ್ಯ ಕಾಲದ ಅವಧಿಯಲ್ಲಿ ಹಲವಾರು ಬಿಕ್ಕಟ್ಟುಗಳನ್ನು ತರಬಹುದಾಗಿದೆ. ಜಾಗತಿಕ ಶಾಂತಿಗೆ ನಿಜವಾದ ವಾರಸುದಾರನಾಗದೇ ಟ್ರಂಪ್ ನೊಬೆಲ್ ಪುರಸ್ಕಾರ ಪಡೆಯುವ ಗಳಿಗೆ ಬರಲಾರದು. ಜಿಗುಟುತನ ಬೇಕಾಗಿದೆ. ಕುಂಡಲಿಯ ಬಲಾಢ್ಯ ಮಂಗಳ ಗ್ರಹ ಜಿಗುಟುತನ ತೋರಲು ಟ್ರಂಪ್ ಅವರಿಗೆ ಅವಕಾಶ ಕೊಡುತ್ತಾನೆ. ಹಠಮಾರಿತನ ತೋರಿದರೆ ಶನಿ ಗ್ರಹ ಚಂದ್ರನ ಮೂಲಕ ಹಲವು ನಷ್ಟಗಳಿಗೆ ಕಾರಣ ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.