ADVERTISEMENT

ಎಳ್ಳು ಅಮಾವಾಸ್ಯೆಯಿಂದ ಈ ರಾಶಿಯವರಿಗೆ ಜಾಕ್‌ಪಾಟ್: ಶುಭಫಲ ನಿಮ್ಮದಾಗುತ್ತೆ

ಎಲ್.ವಿವೇಕಾನಂದ ಆಚಾರ್ಯ
Published 18 ಡಿಸೆಂಬರ್ 2025, 9:11 IST
Last Updated 18 ಡಿಸೆಂಬರ್ 2025, 9:11 IST
   

ವರ್ಷಾಂತ್ಯದಲ್ಲಿ ಬರುವ ಎಳ್ಳು ಅಮಾವಾಸ್ಯೆ ನಾಳೆ (ಡಿಸೆಂಬರ್ 19) ಆಚರಿಸಲಾಗುವುದು. ಈ ದಿನ ಕೇತು ಜಯಂತಿಯೂ ಇರುವುದರಿಂದ ಬಹಳ ವಿಶೇಷವಾಗಿದೆ. ಈ ಅಮಾವಸ್ಯೆ ಕೆಲವು ರಾಶಿಯವರಿಗೆ ಅದೃಷ್ಟ ತರಲಿದೆ. 

ಮೇಷ ರಾಶಿ: ಎಳ್ಳು ಅಮಾವಾಸ್ಯೆಯಿಂದ ಈ ರಾಶಿಯವರಿಗೆ ಅದೃಷ್ಟ ಲಭಿಸಲಿದೆ. ಈ ರಾಶಿಯವರು ವಿರೋಧಿಗಳ ಮೇಲೆ ಜಯ ಸಾಧಿಸುವ ಸಾಧ್ಯತೆಗಳಿರುತ್ತವೆ. ವೃತ್ತಿ ವ್ಯವಹಾರದಲ್ಲಿರುವ ತೊಂದರೆಗಳು ದೂರವಾಗುತ್ತದೆ. ‌ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ. ಕೌಟಿಂಬಿಕ ಜೀವನ ಸಂತೋಷಮಯವಾಗಿರುತ್ತದೆ ಎಂದು ಜ್ಯೋತಿಷ ಹೇಳುತ್ತದೆ. 

ವೃಷಭ ರಾಶಿ: ಈ ಅಮಾವಾಸ್ಯೆಯ ನಂತರ ಗ್ರಹಗಳ ರಾಜ ಎಂದು ಕರೆಯಲ್ಪಡುವ ಸೂರ್ಯ ಈ ರಾಶಿಗೆ ಶುಭದಾಯಕವಾಗಲಿದ್ದಾನೆ. ಈ ರಾಶಿಯ ಜನರಿಗೆ ಮಾನಸಿಕ ತೊಂದರೆಗಳು ದೂರವಾಗುತ್ತವೆ. ಪ್ರೀತಿ ಹಾಗೂ ಪ್ರೇಮದ ವಿಚಾರದಲ್ಲಿ ಶುಭ ಸೂಚನೆಗಳು ಕಾಣುತ್ತವೆ. ಮಕ್ಕಳ ಮದುವೆಗೆ ಶುಭ ಸಂದರ್ಭಗಳು ಕೂಡಿ ಬರುತ್ತದೆ ಎಂದು ಜ್ಯೋತಿಷ ಹೇಳುತ್ತದೆ. 

ADVERTISEMENT

ಸಿಂಹ ರಾಶಿ : ಈ ರಾಶಿಯ ಜನರಿಗೆ ಪೋಷಕರಿಂದ ಸಹಾಯ ದೊರೆಯುತ್ತದೆ. ಮನೆ ಖರೀದಿಸುವವರಿಗೆ ಶುಭವಾಗಲಿದೆ. ಈ ರಾಶಿಯವರಿಗೆ ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ. 

ಧನಸ್ಸು ರಾಶಿ: ಈ ರಾಶಿಯ ಜನರಿಗೆ ಲಕ್ಷ್ಮೀನಾರಾಯಣ ಯೋಗವು ಒದಗಿ ಬರಲಿದೆ. ಪೂರ್ವಜರ ಆಶೀರ್ವಾದದಿಂದ ಆಸ್ತಿ ಹಾಗೂ ಹಣಕ್ಕೆ ಸಂಬಂಧಿಸಿದ ತೊಂದರೆಗಳು ನಿವಾರಣೆಯಾಗುತ್ತವೆ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ. 

ಮೀನ ರಾಶಿ: ಈ ರಾಶಿಯವರಿಗೆ ಹಲವು ಕಡೆಯಿಂದ ಹಣ ಬರುವ ಸಾಧ್ಯತೆ ಇದೆ. ಮಾಧ್ಯಮ ಹಾಗೂ ರಾಜಕೀಯದಲ್ಲಿ ಇರುವವರು ಒಂದಷ್ಟು ಸಾಧನೆಯನ್ನು ಮಾಡಬಹುದು. ಇನ್ನು ಕೆಲವರು ತಮ್ಮ ಸಂಗಾತಿಯೊಂದಿಗಿನ ವ್ಯಾಪಾರ ವ್ಯವಹಾರ ಮಾಡುವುದು ಲಾಭದಾಯಕವಾಗಿರುತ್ತದೆ ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.