
ಗೆಟ್ಟಿ ಚಿತ್ರ
ಆಗಾಗ ಕಣ್ಣು ಅದುರುವುದು ಸಾಮಾನ್ಯ ಎಂದು ಹೇಳಲಾಗುತ್ತದೆ. ಆದರೆ, ಜ್ಯೋತಿಷದ ಪ್ರಕಾರ ಕಣ್ಣು ಅದುರುವುದು ಶುಭ ಹಾಗೂ ಅಶುಭದ ಸಂಕೇತ ಎಂದು ಹೇಳಲಾಗುತ್ತದೆ. ಈ ಕುರಿತು ಜ್ಯೋತಿಷಿ ಎಲ್. ವಿವೇಕಾನಂದ ಆಚಾರ್ಯ ಅವರು ಮಾಹಿತಿ ನೀಡಿದ್ದಾರೆ.
ಪುರುಷರಿಗೆ ಬಲಗಣ್ಣು ಅದುರುವುದು ಶುಭ ಫಲವೆಂದು ಪರಿಗಣಿಸಲಾಗುತ್ತದೆ. ಅವರು ಪ್ರಯಾಣದಲ್ಲಿ ಹಾಗೂ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣುತ್ತಾರೆ ಎಂದು ಜ್ಯೋತಿಷದಲ್ಲಿ ತಿಳಿಸಿದೆ.
ಪುರುಷರಿಗೆ ಎಡಕಣ್ಣುಗಳು ಅದುರಿದರೆ, ಅಶುಭ ಫಲವೆಂದು ಪರಿಗಣಿಸಲಾಗಿದೆ. ಕೆಲಸ ಕಾರ್ಯಗಳಲ್ಲಿ ತೊಡಕು ಹಾಗೂ ನಷ್ಟ ಉಂಟಾಗಬಹುದು ಎಂದು ತಿಳಿಸಿದ್ದಾರೆ.
ಸ್ತ್ರೀಯರಿಗೆ ಎಡ ಕಣ್ಣು ಅದುರಿದರೆ ಶುಭವಾಗುತ್ತದೆ. ಮಾಡುವ ಕಾರ್ಯದಲ್ಲಿ ಸಿದ್ಧಿ ಸಿಗಲಿದೆ. ಹಾಗೂ ಬಲಕಣ್ಣು ಅದುರಿದರೆ ಅಶುಭ ಫಲ ಸಿಗಲಿದೆ ಎಂದು ಅವರು ತಿಳಿಸುತ್ತಾರೆ.
ಎರಡು ಕಣ್ಣಿನ ರೆಪ್ಪೆಗಳು ಅದುರುವುದು ಶಾಂತಿ ಹಾಗೂ ಸಾಧನೆಯ ಸೂಚನೆ ಎಂದು ಹೇಳಲಾಗುತ್ತದೆ.
ಬಲ ಕಣ್ಣಿನರೆಪ್ಪೆ ಅದುರಿದರೆ ಶುಭ
ಎಡ ಕಣ್ಣಿನ ರೆಪ್ಪೆ ಆದುರಿದರೆ ಅಶುಭ. ಇದು ದುಃಖಕ್ಕೆ ಕಾರಣವೆಂದು ಹೇಳಲಾಗುತ್ತದೆ.
ಬಲಗಣ್ಣಿನ ಕೆಳಭಾಗ ಅದುರಿದರೆ ಒಳ್ಳೆಯ ಕಾಲ ಬರಲಿದೆ ಎಂಬ ನಂಬಿಕೆ ಇದೆ.
ಎಡ ಕಣ್ಣಿನ ಕೆಳಭಾಗ ಅದುರಿದರೆ ಆರ್ಥಿಕ ನಷ್ಟ ಹಾಗೂ ದುಃಖಕ್ಕೆ ಕಾರಣವಾಗುತ್ತದೆ ಎಂದು ಜ್ಯೋತಿಷಿ ಎಲ್ ವಿವೇಕಾನಂದ ಆಚಾರ್ಯ ಅವರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.