ADVERTISEMENT

ರವಿ ಗ್ರಹ ಕಾರಕತ್ವ: ಸಿಂಹ ರಾಶಿಯ ಅಧಿಪತಿ ಗುಣಗಳು, ಶಕ್ತಿಗಳ ಬಗ್ಗೆ ತಿಳಿದುಕೊಳ್ಳಿ

ಎಲ್.ವಿವೇಕಾನಂದ ಆಚಾರ್ಯ
Published 9 ಸೆಪ್ಟೆಂಬರ್ 2025, 6:17 IST
Last Updated 9 ಸೆಪ್ಟೆಂಬರ್ 2025, 6:17 IST
   

ಜ್ಯೋತಿಷ ಶಾಸ್ತ್ರದಲ್ಲಿ ಗ್ರಹಗಳ ಕಾರಕತ್ವ ತುಂಬಾ ಮುಖ್ಯವಾದುದು. ಎಂದರೆ ಪ್ರತಿ ಗ್ರಹವೂ ಕೆಲವು ನಿರ್ದಿಷ್ಟ ಅಂಶಗಳು, ಸಂಬಂಧಗಳು ಮತ್ತು ಜೀವನದ ಘಟನೆಗಳನ್ನು ಸಂಕೇತಿಸುವುದೇ ಅದರ ಕಾರಕತ್ವ. ಉದಾಹರಣೆಗೆ, ಸೂರ್ಯನು ತಂದೆ ಅಥವಾ ರಾಜನ ಸಂಕೇತವಾದರೆ, ಚಂದ್ರನು ತಾಯಿಯ ಸಂಕೇತ. ಈ ಕಾರಕತ್ವಗಳು ಜಾತಕದ ವಿಶ್ಲೇಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಏಕೆಂದರೆ ಅವು ನಿರ್ದಿಷ್ಟ ವಿಷಯಗಳ ಸಂಭವನೀಯತೆಯನ್ನು ಮತ್ತು ಅವುಗಳ ಫಲಿತಾಂಶಗಳನ್ನು ನಿರ್ಧರಿಸಲು ಸಹಾಯ ಮಾಡುತ್ತವೆ. ಈ ಕಾರಕತ್ವದ ಆಧಾರದಲ್ಲಿ ಮತ್ತು ಜಾತಕದಲ್ಲಿ ಅನ್ಯ ರಾಶಿಗಳ ಸ್ಥಿತಿಗತಿಯ ಆಧಾರದಲ್ಲಿ ಜ್ಯೋತಿಷದ ಲೆಕ್ಕಾಚಾರ ನಡೆಯುತ್ತದೆ. ಈ ಲೇಖನದಲ್ಲಿ, ಸಿಂಹ ರಾಶಿಯ ಅಧಿಪತಿಯಾಗಿರುವ ರವಿಯು ಮನುಷ್ಯನ ಜಾತಕದ ಮೇಲೆ ಪ್ರಭಾವ ಬೀರಬಹುದಾದ ಗುಣಗಳನ್ನು ತಿಳಿದುಕೊಳ್ಳೋಣ.

ರವಿ ಗ್ರಹ: ರವಿಯು ಸಿಂಹ ರಾಶಿಯ ಅಧಿಪತಿಯಾಗಿದ್ದಾನೆ. ರವಿಯು ಮನುಷ್ಯನ ಜಾತಕದ ಮೇಲೆ ಹಲವಾರು ರೀತಿಯಲ್ಲಿ ಪ್ರಭಾವ ಬೀರಬಹುದು. ಇದು ಅಗ್ನಿ ತತ್ವದ ಗ್ರಹವಾಗಿದೆ. ಮುಖ್ಯವಾಗಿ ಪುರುಷ ಗ್ರಹವಾಗಿದೆ. ಈ ರಾಶಿಯವರು ಈ ಕೆಳಗಿನ ಗುಣಗಳನ್ನು ಹೊಂದಿರುತ್ತಾರೆ.

ADVERTISEMENT

ಸರ್ಕಾರಿ ನೌಕರಿಯಲ್ಲಿ ಇರುತ್ತಾರೆ. ಅಧಿಕಾರವನ್ನ ನಡೆಸುತ್ತಾ ಇರುತ್ತಾರೆ. ದರ್ಪದ, ಅಹಂಕಾರದ ಗುಣವನ್ನು ಹೊಂದಿರುತ್ತಾರೆ. ಆಡಳಿತವನ್ನು ಚೆನ್ನಾಗಿ ನಡೆಸುತ್ತಾರೆ. ನಾಯಕತ್ವವನ್ನು ಬಯಸುವವರಾಗಿರುತ್ತಾರೆ. ಒಂಟಿಯಾಗಿ ಕುಳಿತು ಯೋಚನೆ ಮಾಡುವವರು ಆಗಿರುತ್ತಾರೆ. ನ್ಯಾಯ ತೀರ್ಮಾನವನ್ನ ಮಾಡುತ್ತಾ ಗುಣವನ್ನು ಹೊಂದಿರುತ್ತಾರೆ.

ಇನ್ನೂ, ಇವರ ಮುಖ ಗುಂಡಾಕಾರ ಇರುತ್ತದೆ. ಮುಖ ಅಷ್ಟೊಂದು ಆಕರ್ಷಣೆಯಾಗಿರೋದಿಲ್ಲ (ಕಾರಣ ಸಿಂಹದ ಮುಖವೇ ಹಾಗೆ). ಉಗ್ರ ಮನಸ್ಸಿರುವವರು, ಬಹಳ ಕೋಪಿಸ್ಟರು, ಕಠಿಣ ಹೃದಯವಂತವರು ಸಹ ಆಗಿತ್ತಾರೆ. ಇವರದ್ದು ರಾಜನ ರಾಶಿ ಆಗಿರುವುದರಿಂದ ಶಿಕ್ಷೆಯನ್ನ ಕೊಡುವ ಗ್ರಹವಾಗಿದೆ. ಗಂಭೀರ ನಡಿಗೆ ಉಳ್ಳವರು ಆಗಿರುತ್ತಾರೆ. ಇದು ಒಳ್ಳೆಯ ಶ್ರೀಮಂತ ಗ್ರಹವಾಗಿದ್ದು, ಸದಾ ಗೆಲ್ಲುವ ಹಂಬಲ ಹೊಂದಿರುತ್ತಾರೆ. ಎಲ್ಲವನ್ನೂ ನಿಯಂತ್ರಿಸುವ ಶಕ್ತಿ ಇವರಿಗೆ ಇರುತ್ತದೆ. ಸಾಮಾನ್ಯವಾಗಿ ಎಲ್ಲಾ ಸಿಂಹ ರಾಶಿಯವರು ಮುಖ್ಯ ಮಂತ್ರಿ, ಮಂತ್ರಿ, ಎಮ್‌ಎಲ್ಎ ಆಗಿರುತ್ತಾರೆ. ಈ ರವಿಯನ್ನ ಕ್ರೂರ ಗ್ರಹವೆಂದೂ ಕರೆಯುತ್ತಾರೆ. ರವಿಯು ಜ್ಞಾನವಂತ ಗ್ರಹ. ಆದರೆ ಉನ್ನತ ವಿದ್ಯಾವಂತ ಗ್ರಹವಲ್ಲ. ಇಲ್ಲಿ ರವಿಯ ಸಂಖ್ಯೆಯು 1 ಆಗಿದೆ. ಇದೊಂದು ಪಿತೃ ಕಾರಕವಾಗಿದೆ.

ಉಚ್ಚ ಸ್ಥಾನ:- ಮೇಷ ರಾಶಿ

ಉಚ್ಚಾಂಶ:-10

ಮೂಲ ತ್ರಿಕೋಣ:- ಸಿಂಹ ರಾಶಿ

ದಶಾ ಅವಧಿ:- 6 ವರುಷ.

ಒಂದು ರಾಶಿಯಿಂದ ಇನ್ನೊಂದು ರಾಶಿಗೆ :-1 ತಿಂಗಳು.

ಧಾನ್ಯ:- ಗೋಧಿ.

ದಿಕ್ಕು:- ಪೂರ್ವ.

ಕಾರಕ :- ಪಿತ್ಥ.

ನೀಚ ಸ್ಥಾನ:- ತುಲಾ ರಾಶಿ.

ರವಿಯು :- ಮೂಳೆಯ ಕಾರಕ. ಗ್ರಹ.

ಇಂದ್ರಿಯ :- ಕಣ್ಣು.

ಮಿತ್ರ ಗ್ರಹಗಳು :-ಚಂದ್ರ, ಕುಜ-ಗುರು-ಕೇತು.

ಶತ್ರು :- ಶನಿ, ಶುಕ್ರ, ರಾಹು.

ಸಮ ಗ್ರಹ :- ಬುಧ.

ರವಿಯ ರತ್ನ:- ಮಾಣಿಕ್ಯ.

ರವಿಯ ಬಣ್ಣ :- ಕೆಂಪು ಮತ್ತು ಗುಲಾಬಿ.

ಪೀತಾಂಬರ:- ಲೋಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.