ADVERTISEMENT

Astrology | ಗ್ರಹಗಳ ಬದಲಾವಣೆ: ಈ 3 ರಾಶಿಗಳಿಗೆ ಭಾರೀ ಅದೃಷ್ಟ

ಎಲ್.ವಿವೇಕಾನಂದ ಆಚಾರ್ಯ
Published 3 ಡಿಸೆಂಬರ್ 2025, 7:28 IST
Last Updated 3 ಡಿಸೆಂಬರ್ 2025, 7:28 IST
<div class="paragraphs"><p>ಚಿತ್ರ: ಎಐ</p></div>
   

ಚಿತ್ರ: ಎಐ

2025ರ ಡಿಸೆಂಬರ್ ತಿಂಗಳಲ್ಲಿ 4 ಗ್ರಹಗಳ ಸ್ಥಾನದಲ್ಲಿನ ಬದಲಾವಣೆಯಿಂದಾಗಿ ಮೂರು ರಾಶಿಯವರಿಗೆ ಶುಭಫಲ ದೊರೆಯಲಿದೆ. ಡಿಸೆಂಬರ್ 2ರಂದು ಶುಕ್ರ ಗ್ರಹ, ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ. ಡಿಸೆಂಬರ್ 7ರಂದು ಮಂಗಳ ಗ್ರಹ ಕರ್ಕಾಟಕ ರಾಶಿಯಲ್ಲಿ ವಕ್ರಿಯ ಚಾಲನೆ ಪ್ರಾರಂಭಿಸುತ್ತಾನೆ. ಡಿಸೆಂಬರ್ 15ರಂದು ಸೂರ್ಯನು ಧನಸ್ಸು ರಾಶಿಗೆ ಪ್ರವೇಶ ಮಾಡುತ್ತಾನೆ. ಇದರ ಮಾರನೆಯ ದಿನವೇ ವೃಶ್ಚಿಕ ರಾಶಿಯಲ್ಲಿ ಮಾರ್ಗೀಯ ಚಲನೆ ಪ್ರಾರಂಭಿಸುತ್ತದೆ.

ಡಿಸೆಂಬರ್ 28ರಂದು ಶುಕ್ರ ಗ್ರಹವು ಶನಿಯ ರಾಶಿಗಳಾದ ಕುಂಭ ರಾಶಿಗೆ ಸೇರುತ್ತಾನೆ. ಹೀಗಾಗಿ ಗ್ರಹಗಳ ಬದಲಾವಣೆಯಿಂದ ಈ ಮೂರು ರಾಶಿಗಳಿಗೆ ವಿಶೇಷ ಫಲಿತಾಂಶ ದೊರೆಯಲಿದೆ ಎಂದು ಜ್ಯೋತಿಷ ಹೇಳುತ್ತದೆ.

ADVERTISEMENT

ವೃಷಭ ರಾಶಿ:

ಈ ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಸಮಾಜದಲ್ಲಿ ಗೌರವ ದೊರೆಯುತ್ತದೆ. ವ್ಯಾಪಾರಿಗಳಿಗೆ ಲಾಭ ಹಾಗೂ ಹೆಚ್ಚು ಹಣ ಗಳಿಸುವ ಸಾಧ್ಯತೆ ಇರುತ್ತದೆ. ವಾಹನ, ಆಸ್ತಿಯಗೆ ಸಂಬಂಧಿಸಿದ ವಿಚಾರಗಳು ಬಗೆಹರಿಯುತ್ತವೆ. 

ಸಿಂಹ ರಾಶಿ:

ಈ ರಾಶಿಯವರಿಗೆ ಡಿಸೆಂಬರ್ ತಿಂಗಳು ಲಾಭದಾಯಕವಾಗಲಿದೆ. ಆಕಸ್ಮಿಕವಾಗಿ ಧನ ಲಾಭವಾಗಲಿದೆ. ಇವರ ಬಳಿ ಇರುವ ಹಣದಿಂದ ಹೂಡಿಕೆ ಮಾಡಿ ಲಾಭ ಗಳಿಸಬಹುದು. ಕುಟುಂಬದಲ್ಲಿ ಶಾಂತಿ, ಸಮೃದ್ಧಿ ನೆಲೆಸಲಿದೆ. 

ಮಕರ ರಾಶಿ:

ಈ ರಾಶಿಯವರಿಗೆ ನಾಲ್ಕು ಗ್ರಹಗಳ ಪರಿವರ್ತನೆಯಿಂದಾಗಿ ಉದ್ಯೋಗ ದೊರೆಯುವ ಲಕ್ಷಣಗಳು ಒದಗಿ ಬರುತ್ತವೆ. ಅಭಿವೃದ್ಧಿ ಪರ್ವವಾಗಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.