ADVERTISEMENT

ಷಷ್ಟಾಷ್ಟಕ ದೋಷ: ಯಾರ ಮೇಲೆ ಹೆಚ್ಚಿರಲಿದೆ ಇದರ ಪ್ರಭಾವ?

ಎಲ್.ವಿವೇಕಾನಂದ ಆಚಾರ್ಯ
Published 5 ಡಿಸೆಂಬರ್ 2025, 6:32 IST
Last Updated 5 ಡಿಸೆಂಬರ್ 2025, 6:32 IST
<div class="paragraphs"><p>ಚಿತ್ರ: ಎಐ</p></div>
   

ಚಿತ್ರ: ಎಐ

ಜಾತಕದ ಅನುಸರಾವಾಗಿ ಹಲವು ದೋಷಗಳಿರುತ್ತವೆ. ಜ್ಯೋತಿಷದ ಪ್ರಕಾರ ಪ್ರತಿ ದೋಷಗಳಿಗೂ ಒಂದಲ್ಲ ಒಂದು ಪರಿಹಾರ ಕೂಡ ಇರುತ್ತದೆ. ಅದೇ ರೀತಿ ಜಾತಕದಲ್ಲಿ ಷಷ್ಟಾಷ್ಟಕ ಎಂಬುದು ಕೂಡ ಒಂದು ದೋಷವಾಗಿದೆ. ಹೀಗಂದರೇನು? ಇದರ ಪ್ರಭಾವವೇನು ಎಂಬುದನ್ನು ನೋಡೋಣ. 

  • ಕುಜನು 6 ಮತ್ತು 8ನೇ ಮನೆಯಲ್ಲಿದ್ದರೆ ಷಷ್ಟಾಷ್ಟಕ ದೋಷಕ್ಕೆ ಒಳಗಾಗುತ್ತಾರೆ. ಅದರಲ್ಲಿಯೂ ಹೆಣ್ಣಿಗೆ 6 ಹಾಗೂ ಗಂಡಿಗೆ  8ನೇ ಮನೆಯಲ್ಲಿದ್ದರೆ ಈ ದೋಷ ಲಭಿಸುತ್ತದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ.

    ADVERTISEMENT
  • ಈ ದೋಷ ಕೆಲವರ ಜಾತಕಕ್ಕೆ ಅನುಸಾರವಾಗಿ ಉಂಟಾಗುತ್ತದೆ. ಭಾತೃತ್ವಕ್ಕೆ ಮೂಲ ಕಾರಣ ಕುಜ ಗ್ರಹ ಎಂದು ಜ್ಯೋತಿಷದಲ್ಲಿ ಪರಿಗಣಿಸಲಾಗಿದೆ.

  • ಈ ದೋಷವಿದ್ದರೆ ಅಣ್ಣ ತಮ್ಮಂದಿರ ನಡುವೆ ಕಲಹ ಉಂಟಾಗುತ್ತದೆ. ಮಿತ್ರರಲ್ಲಿ ಜಗಳ, ವೈಮನಸು ಉಂಟಾಗುತ್ತದೆ.

  • ಜ್ಯೋತಿಷದ ಪ್ರಕಾರ 6ನೇ ಮನೆಯಲ್ಲಿ ಋಣ, ರೋಗ, ಶತ್ರು ಸೂಚಿಸುತ್ತದೆ. 8ನೇ ಮನೆಯಲ್ಲಿ ಗಂಡಿಗೆ ದಾಂಪತ್ಯ ಜೀವನದಲ್ಲಿ ಗಂಡ ಮತ್ತು ಹೆಂಡತಿ ಮಧ್ಯೆ ನಿರಂತರ ಜಗಳವಾಗುತ್ತದೆ. ಈ ಜಗಳ ವಿಚ್ಛೇದನದ‌ವರೆಗೂ ಹೋಗಬಹುದು. ಇದನ್ನು ಕಳತ್ರ ದೋಷವೆಂದು ಹೇಳಲಾಗುತ್ತದೆ.

  • ಜಾತಕ ನೋಡದೆ ಪ್ರೇಮ ವಿವಾಹವಾದವರಿಗೆ ಈ ದೋಷದ ಸಾಧ್ಯತೆ ಹೆಚ್ಚು. ಭೂ ಮಾಂಗಲ್ಯ ಧಾರಣೆ, ಗಣ ಹೋಮ, ಗಿರಿಜಾ ಕಲ್ಯಾಣ ಹಾಗೂ ನವಗ್ರಹ ಆರಾಧನೆ ಮಾಡುವುದು ಪರಿಹಾರವಾಗಿದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.