ಕಾರ್ತಿಕೇಯನು ತನ್ನ ಕುಟುಂಬದ ಮೇಲೆ ಕೋಪಗೊಂಡು ಕೈಲಾಸ ಪರ್ವತವನ್ನು ತೊರೆದನು. ಷಷ್ಠಿಯ ದಿನದಂದು ತಾರಕಾಸುರ ಎಂಬ ರಾಕ್ಷಸನನ್ನು ಕೊಂದು ದೇವತೆಗಳ ಸೈನ್ಯದ ಅಧಿಪತಿಯಾದನು ಎಂದು ಪುರಾಣದ ಕಥೆಗಳಲ್ಲಿ ಉಲ್ಲೇಖವಿದೆ.
ಹಿಂದೂ ಧರ್ಮದ ಪ್ರಕಾರ, ಷಷ್ಠಿ ವ್ರತವನ್ನು ಪ್ರತೀ ತಿಂಗಳ ಷಷ್ಠಿಯಂದು ಆಚರಿಸಲಾಗುತ್ತದೆ. ಷಷ್ಠಿಯ ದಿನ ಕಾರ್ತಿಕೇಯ ಜನಿಸಿದ ಎಂದು ಪುರಾಣಗಳು ಹೇಳುತ್ತವೆ. ಅಂದು ಕಾರ್ತಿಕೇಯನಿಗಾಗಿ ಉಪವಾಸ ವ್ರತ ಆಚರಣೆ ಮಾಡಲಾಗುತ್ತದೆ. ಷಷ್ಠಿಯ ತಿಥಿಯಂದು ಕಾರ್ತಿಕೇಯನ ದರ್ಶನ ಪಡೆಯುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
ಷಷ್ಠಿ ಪೂಜೆ ವಿಧಾನ:
ಷಷ್ಠಿ ವ್ರತದ ದಿನ ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ದೇವರ ಧ್ಯಾನ ಮಾಡುತ್ತ ವ್ರತ ತೆಗೆದುಕೊಳ್ಳುವುದಾಗಿ ಪ್ರತಿಜ್ಞೆ ಮಾಡಿ.
ಕಾರ್ತಿಕೇಯ ಶಿವ-ಪಾರ್ವತಿಯರ ವಿಗ್ರಹ ಇಟ್ಟು ಪೂಜಿಸಿ.
ತುಪ್ಪ, ಮೊಸರು, ನೀರು ಹಾಗೂ ಹೂವುಗಳಿಂದ ನೈವೇದ್ಯವನ್ನು ಅರ್ಪಿಸಬೇಕು.
ಕಲವ, ಅಕ್ಷತೆ, ಅರಿಶಿನ, ಶ್ರೀಗಂಧ, ಸುಗಂಧ ದ್ರವ್ಯ ಇತ್ಯಾದಿಗಳಿಂದ ಪೂಜಿಸಬೇಕು.
ಸಂಜೆ ಪೂಜೆ ಹಾಗೂ ಆರತಿ ಮಾಡಿದ ಬಳಿಕ ಫಲಾಹಾರವನ್ನು ಸೇವಿಸಿ.
ಪೂಜೆಯ ರಾತ್ರಿ ನೆಲದ ಮೇಲೆ ಮಲಗುವುದರಿಂದ ಕಾರ್ತಿಕೇಯನ ಅನುಗ್ರಹ ದೊರೆಯಲಿದೆ ಎಂದು ಜ್ಯೋತಿಷ.
ಷಷ್ಠಿಯ ಮಂತ್ರ:
‘ಓಂ ಶಾರವಾನಾ - ಭಾವಾಯಾ ನಮಃ ಜ್ಞಾನಶಕ್ತಿಧರಾ ಸ್ಕಂದ ವಲ್ಲಿಯೀಕಲ್ಯಾಣಾ ಸುಂದರಾ ದೇವಸೇನ ಮನಃ ಕಾಂತಾ ಕಾರ್ತಿಕೇಯಾ ನಮೋಸ್ತುತೆ’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.