ADVERTISEMENT

Astrology: ಮಕರನಲ್ಲಿ ಶುಕ್ರನ ಸಂಚಾರ‌ದಿಂದ ಈ ಎಲ್ಲಾ ರಾಶಿಯವರಿಗೆ ಅದೃಷ್ಟ

ಎಲ್.ವಿವೇಕಾನಂದ ಆಚಾರ್ಯ
Published 12 ಡಿಸೆಂಬರ್ 2025, 6:19 IST
Last Updated 12 ಡಿಸೆಂಬರ್ 2025, 6:19 IST
   

ಜ್ಯೋತಿಷದ ಪ್ರಕಾರ, ಇಂದು (ಡಿಸೆಂಬರ್‌ 12) ಶುಕ್ರನು ಉತ್ತರಾಷಾಢ ನಕ್ಷತ್ರದ ಎರಡನೇ ಪಾದದಲ್ಲಿ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ. ಶುಕ್ರನ ಪ್ರವೇಶದಿಂದ ಕೆಲವು ರಾಶಿಗಳಿಗೆ ಸುವರ್ಣಕಾಲದ ಆರಂಭವೆಂದು ಹೇಳಬಹುದು.

ಶುಕ್ರ ಮತ್ತು ಶನಿಯ ಸ್ನೇಹ ಸಂಬಂಧದಿಂದ 12 ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಆದರೆ ಕೆಲವೇ ಕೆಲವು ರಾಶಿಗಳಿಗೆ ಮಾತ್ರ ಅದೃಷ್ಟ ಒಲಿಯುವ ಸಂಭವ ಹೆಚ್ಚು ಎಂದು ಜ್ಯೋತಿಷದಲ್ಲಿ ಹೇಳಲಾಗುತ್ತದೆ. 

ಮೇಷ ರಾಶಿ:

ADVERTISEMENT

ಈ ರಾಶಿಯವರಿಗೆ ಶುಕ್ರನ ಸಂಚಾರದಿಂದ ಕೆಲಸ ಮತ್ತು ವ್ಯವಹಾರದಲ್ಲಿ ಪ್ರಗತಿ ದೊರೆಯುತ್ತದೆ. ವೃತ್ತಿ ಜೀವನದಲ್ಲಿ ಹೊಸ ಮೈಲುಗಲ್ಲು ತಲುಪಲಿದ್ದಾರೆ. ಉದ್ಯೋಗ ಬದಲಾಯಿಸುವ ಯೋಚನೆ ಇದ್ದವರಿಗೆ ಇದು ಸೂಕ್ತ ಸಮಯವೆಂದು ಹೇಳಲಾಗುತ್ತದೆ. ಆದಾಯದಲ್ಲಿ ಹೆಚ್ಚಳವಾಗುವ ಸಂಭವ ಹೆಚ್ಚು. ಈ ಅವಧಿಯಲ್ಲಿ ಮೇಷ ರಾಶಿಯವರ ವ್ಯವಹಾರಗಳು ಇನ್ನಷ್ಟು ವಿಸ್ತಾರವಾಗುತ್ತದೆ. ಆರ್ಥಿಕ ಲಾಭ ಉಂಟಾಗಲಿದೆ. ಚಲನಚಿತ್ರ, ಕಲೆ, ಸಂಗೀತ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ತೊಡಗಿರುವವರಿಗೆ ಉತ್ತಮ ಅವಕಾಶ ಲಭಿಸಲಿವೆ. 

ವೃಷಭ ರಾಶಿ:

ಈ ರಾಶಿಗೆ ಶುಕ್ರ ಅಧಿಪತಿಯಾಗಿದ್ದಾನೆ. ಶುಕ್ರ ಅಧಿಪತಿಯಾಗುವುದು ಅದೃಷ್ಟದ ಸಂಕೇತ ಎಂದು ಹೇಳಲಾಗುತ್ತದೆ. ಆದ್ದರಿಂದ ಧನ, ಆಸ್ತಿ, ಅಂತಸ್ತು ದೊರೆಯಲಿದೆ. 

ತುಲಾ ರಾಶಿ:

ಈ ರಾಶಿಯವರು ಮನೆ, ವಾಹನ ಖರೀದಿ ಹಾಗೂ ಆಸ್ತಿಗೆ ಸಂಬಂಧಪಟ್ಟ ವ್ಯವಹಾರಗಳಲ್ಲಿ ಒಳಿತಾಗಲಿದೆ. ತಾಯಿಯೊಂದಿಗಿನ ಸಂಬಂಧ ಬಲಗೊಳ್ಳಲಿದೆ. ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. ಆತ್ಮವಿಶ್ವಾಸ ದೃಢವಾಗುತ್ತದೆ ಎಂದು ಹೇಳಲಾಗುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.