ADVERTISEMENT

Vastu Tips: ಸೌಂದರ್ಯ ಅರಸುವ ವೃಷಭ ರಾಶಿಯವರಿಗೆ ಬೇಕು ಶಿಲ್ಪಿಯ ಸಲಹೆ

ಸವಿತಾ ಕುಮಾರಿ ಕೆ.
Published 28 ಫೆಬ್ರುವರಿ 2026, 13:17 IST
Last Updated 28 ಫೆಬ್ರುವರಿ 2026, 13:17 IST
   

ನಮ್ಮಲ್ಲಿ ಬಹಳ ಮಂದಿ ನಾನಾ ಅವಶ್ಯಕತೆಗಳ ಸರಪಳಿಯಲ್ಲೇ ಜೀವನವನ್ನು ಸಾಗಿಸುತ್ತಾರೆ. ಆದರೂ ಆ ಹೋರಾಟಗಳ ನಡುವೆಯೇ ಸೌಂದರ್ಯ ಅರಸುತ್ತಾ ಆನಂದ ಕಾಣುತ್ತೇವೆ. ಓಮ್ಮೆ ಮನುಸ್ಸು ಒಂದು ನಿರ್ಧಾರ ಮಾಡಿದರೆ, ಸ್ಥಿರವಾಗಿ ಹಾಗೂ ಸಮಾಧಾನವಾಗಿ, ಬದ್ಧವಾಗಿರುವುದು ಒಂದು ಪ್ರಮುಖವಾದ ಗುಣ. ಸುಖದ ಅನ್ವೇಷಣೆ ನಿರಂತರ. ಅದು ಬಟ್ಟೆಯಾಗಿರಲಿ, ವಸ್ತುವಾಗಿರಲಿ ಅಥವಾ ಮನೆಯೇ ಆದರೂ ಸರಿ.

ನಾನು ಸರಿ ಎನ್ನುವ ಮನೋಭಾವಾಗಳ ಸಮ್ಮಿಲನವೇ ವೃಷಭ ರಾಶಿ.

ಪೃಥ್ವಿಯೊಂದಿಗೆ ಪ್ರಬಲವಾದ ಸಂಬಂಧ ಹೊಂದಿರುವ ವೃಷಭರಾಶಿ, ಸ್ಥಿರತೆಯನ್ನು ಸದಾ ಬಯಸುತ್ತದೆ. ಶುಕ್ರ ಈ ರಾಶಿಯ ಆಧಿಪತಿ. ಸಹಜವಾಗಿಯೇ, ಸೌಂದಾರ್ಯ ಒಂದು ಪ್ರಬಲವಾದ ಗುಣ ಹಾಗೂ ಅವಶ್ಯಕತೆಯಾಗಿದೆ. ಹೀಗಿರುವ ವೃಷಭ ರಾಶಿಯವರು ಸಹಜವಾಗಿಯೇ ಮನೆ ನಿರ್ಮಾಣಕ್ಕೆ ವಾಸ್ತುಶಿಲ್ಪಿಯನ್ನು ಆಯ್ಕೆ ಮಾಡುತ್ತಾರೆ.

ADVERTISEMENT

ಕೆಂಪು ಬಣ್ಣದ ಮಣ್ಣು, ಪ್ರಕೃತಿ ಸೋಂಪಾಗಿರುವ ನಿವೇಶನಗಳು ವೃಷಭ ರಾಶಿಯವರಿಗೆ ಹೊಂದುತ್ತದೆ. ಉತ್ತರ–ದಕ್ಷಿಣ ಜಾಗಗಳು ಇವರಿಗೆ ಹೆಚ್ಚು ಉತ್ತಮ. ಅಂಗಳ ಅಥವಾ ಮನೆಯ ಸುತ್ತ ಜಾಗ, ಈ ರಾಶಿಗೆ ಹಿತವಾಗಿರುತ್ತದೆ. ಮೇಲಿನ ಮಹಡಿಗಳಾದರೆ, ಉತರ–ದಕ್ಷಿಣ ದಿಕ್ಕಿನಲ್ಲಿ ಬಾಲ್ಕನಿಗಳು ಹಿತ ಕೊಡುತ್ತದೆ. ಹೆಚ್ಚು ಶಾಖ ಈ ರಾಶಿಯವರಿಗೆ ಬೇಡವಾಗಿರುವುದರಿಂದ, ಚಿಕ್ಕದಾದರೂ ಸರಿ, ಚೊಕ್ಕವಾಗಿರುವುದು ಬಹಳ ಮುಖ್ಯ.

ಈ ರಾಶಿಯ ಗುಣ ಹಾಗೂ ಪೃಥ್ವಿಯ ತತ್ವವು, ಯಜಮಾನನ ಅಥವಾ ಯಜಮಾನಿಯ ಜಾತಕದಲ್ಲಿ ಪ್ರಭಲವಾಗಿದ್ದರೂ ಕುಜನ ಪಾತ್ರವನ್ನೂ ಪರಿಗಣಿಸಬೇಕು. ಸ್ವಭಾವಿಕವಾಗಿಯೇ ವ್ಯವಹಾರ ಮನೋಭಾವ ಹೊಂದಿರುವ ವೃಷಭ ರಾಶಿಯವರು ಉತ್ತಮವು ಹಾಗೂ ಅಗ್ಗವು ಆಗಿರುವುದನ್ನು ಬಯಸುತ್ತಾ, ಅನ್ವೇಷಣೆ ಮಾಡುತ್ತಾರೆ.

ಪ್ರಭಲವಾದ ಅವಶ್ಯಕತೆಯಿಲ್ಲದೆ, ಇವರು ಯಾವುದೇ ಕೆಲಸಕ್ಕೆ ಕೈ ಹಾಕಲು ಹಿಂಜರಿಯುವರು. ಈ ಮನಸ್ಥಿತಿಯಲ್ಲಿ ಮನೆಯನ್ನು ಕಟ್ಟಲು ಮುಂದಾದಾಗ ಆರ್ಕಿಟೆಕ್ಟ್ ಅನ್ನು ಕಾಣುತ್ತಾರೆ.

ವಾಸ್ತುಶಾಸ್ತ್ರವು, ಈ ರೀತಿಯ ಯಜಮಾನ ಮತ್ತು ಜಾಗಕ್ಕೆ, ವೃಷಭಾಯವನ್ನು ಸೂಚಿಸುತ್ತದೆ. ಇವರು ಮನೆ ನಿರ್ಮಾಣ ಮಾಡುವಾಗ ಹೆಚ್ಚು ಉತ್ತರ ಮತ್ತು ದಕ್ಷಿಣಕ್ಕೆ ಒತ್ತು ಕೊಡಬೇಕು. ವ್ಯವಹಾರದ ಜಾಗಗಳು ಹೆಚ್ಚು ಉತ್ತರಕ್ಕೆ ಮತ್ತು ಕಾರ್ಯ ಜಾಗಗಳು ಹೆಚ್ಚು ದಕ್ಷಿಣಕ್ಕೆ ಬಂದರೆ ಸೂಕ್ತ.ತಂಪಾದ ಗಾಳಿಗೆ ಅವಕಾಶವವಿರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.