ADVERTISEMENT

ನವೆಂಬರ್‌ಗೆ ಹೊಸ ಔಡಿ ಕ್ಯು5 ಎಸ್‌ಯುವಿ

ಪಿಟಿಐ
Published 3 ಅಕ್ಟೋಬರ್ 2021, 14:41 IST
Last Updated 3 ಅಕ್ಟೋಬರ್ 2021, 14:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಐಷಾರಾಮಿ ಕಾರು ತಯಾರಿಸುವ ಜರ್ಮನಿಯ ಔಡಿ ಕಂಪನಿಯು ತನ್ನ ಹೊಸ ಎಸ್‌ಯುವಿ ಕ್ಯು5 ಮೂಲಕ ಭಾರತದಲ್ಲಿ ಮಾರಾಟ ಹೆಚ್ಚಿಸಿಕೊಳ್ಳುವ ನಿರೀಕ್ಷೆ ಹೊಂದಿದೆ.

ಸ್ಥಳೀಯವಾಗಿ ತಯಾರಾದ ‘ಕ್ಯು5’ ಎಸ್‌ಯುವಿ ಅನ್ನು ನವೆಂಬರ್‌ನಲ್ಲಿ ಬಿಡುಗಡೆ ಮಾಡುವ ಆಲೋಚನೆ ಇದೆ ಎಂದು ಔಡಿ ಇಂಡಿಯಾದ ಮುಖ್ಯಸ್ಥ ಬಲ್ಬೀರ್‌ ಸಿಂಗ್‌ ಧಿಲ್ಲಾನ್‌ ಹೇಳಿದ್ದಾರೆ.

ಭಾರತದಲ್ಲಿ ಬಿಎಸ್‌–6 ಮಾನದಂಡಗಳನ್ನು ಜಾರಿಗೊಳಿಸಿದ ಬಳಿಕ ಕಂಪನಿಯು ದೇಶದಲ್ಲಿ ತನ್ನ ಜನಪ್ರಿಯ ಎಸ್‌ಯುವಿಗಳಾದ ಕ್ಯು3, ಕ್ಯು5 ಮತ್ತು ಕ್ಯು7 ಮಾರಾಟವನ್ನು ನಿಲ್ಲಿಸಿತ್ತು. ಅಲ್ಲದೆ, ಡೀಸೆಲ್‌ ಎಂಜಿನ್‌ ಆಯ್ಕೆಯನ್ನೂ ನಿಲ್ಲಿಸಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.