ADVERTISEMENT

ಬಜಾಜ್‌ ಚೇತಕ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಜ.14ಕ್ಕೆ ಬಿಡುಗಡೆ

ಏಜೆನ್ಸೀಸ್
Published 8 ಜನವರಿ 2020, 8:36 IST
Last Updated 8 ಜನವರಿ 2020, 8:36 IST
ಬಜಾಜ್‌ ಹೊಸ ಎಲೆಕ್ಟ್ರಿಕ್‌ ಸ್ಕೂಟರ್‌ ಚೇತಕ್‌
ಬಜಾಜ್‌ ಹೊಸ ಎಲೆಕ್ಟ್ರಿಕ್‌ ಸ್ಕೂಟರ್‌ ಚೇತಕ್‌    
""
""

ಬೆಂಗಳೂರು:ವೇಗದ ಬೈಕ್‌ಗಳ ಜಮಾನದಲ್ಲಿ ಹಿಂದೆ ಸರಿದಿದ್ದ ಬಜಾಜ್‌ನ 'ಚೇತಕ್‌' ಎಲೆಕ್ಟ್ರಿಕ್‌ಸ್ಕೂಟರ್‌ ರೂಪದಲ್ಲಿ ಬಿಡುಗಡೆ ಸಜ್ಜಾಗಿದೆ. 2020ರ ಜನವರಿ 14ರಂದು ಹೊಸ ಚೇತಕ್‌ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಮೊದಲಿಗೆ ಪುಣೆಯಲ್ಲಿ ಚೇತಕ್‌ ಮಾರಾಟ ಆರಂಭವಾಗಲಿದ್ದು, ನಂತರ ಬೆಂಗಳೂರು ಸೇರಿದಂತೆ ಇತರೆ ಮೆಟ್ರೊ ನಗರಗಳಲ್ಲಿ ಖರೀದಿಗೆ ಸಿಗಲಿದೆ.

4 ಕಿ.ವ್ಯಾಟ್‌ ಎಲೆಕ್ಟ್ರಿಕ್‌ ಮೋಟಾರ್‌ ಹೊಂದಿದ್ದು, ಲಿಥಿಯಮ್‌–ಅಯಾನ್‌ ಬ್ಯಾಟರಿ ಒಳಗೊಂಡಿದೆ. ಒಮ್ಮೆ ಪೂರ್ಣ ಚಾರ್ಜ್‌ ಮಾಡಿದರೆ ಇಕೊ ಮೋಡ್‌ನಲ್ಲಿ 95 ಕಿ.ಮೀ ದೂರ ಕ್ರಮಿಸಬಹುದು. ಸ್ಪೋರ್ಟ್‌ ಮೋಡ್‌ನಲ್ಲಿ 85 ಕಿ.ಮೀ. ದೂರ ಸಂಚರಿಸಬಹುದಾಗಿದೆ. ಪೂರ್ಣ ಮೆಟಲ್‌ ಹೊರಭಾಗ, ರಾತ್ರಿ ಸಂಚಾರದಲ್ಲಿ ಸುಲಭವಾಗಲು ಬೆಳಗುವ ಸ್ವಿಚ್‌ಗಳು, ಬೆಳಗ್ಗೆ ಮತ್ತು ರಾತ್ರಿಗೆ ತಕ್ಕಂತೆ ಬೆಳಗುವ ಎಲ್‌ಇಡಿ ಲೈಟ್‌, ವೇಗ, ಇಂಧನ, ವಾಟರ್ ಪ್ರೂಫ್‌ ಬ್ಯಾಟರಿ, ಸೈಡ್‌ ಸ್ಟ್ಯಾಂಡ್‌ ಸೇರಿದಂತೆ ಇತರೆ ಮಾಹಿತಿಯನ್ನು ತೋರಿಸುವ ಡಿಜಿಟಲ್‌ ಕಂಸೋಲ್‌ಆಕರ್ಷಿಸುತ್ತದೆ.

ಪಾರ್ಕಿಂಗ್‌ ಮಾಡಿರುವ ಸಂದರ್ಭದಲ್ಲಿ ಸ್ಕೂಟರ್‌ ಹಿಂದೆ ತೆಗೆಯಲು ಪರದಾಡುವುದನ್ನು ತಪ್ಪಿಸಲು ರಿವರ್ಸ್‌ ಗೇರ್‌ ಸಹ ನೀಡಲಾಗಿದೆ. ರಿವರ್ಸ್‌ ಮೋಡ್‌ ಸ್ವಿಚ್‌ ಒತ್ತಿ ಸುಲಭವಾಗಿ ಸ್ಕೂಟರ್‌ ಹಿಂದೆ ಚಲಿಸುವಂತೆ ಮಾಡಬಹುದು. ಅಲಾಯ್‌ ವೀಲ್ಸ್‌ನ ಮತ್ತು ಡಿಸ್ಕ್‌ ಬ್ರೇಕ್‌ ಅಳವಡಿಸಲಾಗಿದೆ. ಇಲ್ಲಿನ ಬ್ರೇಕಿಂಗ್‌ ತಂತ್ರಜ್ಞಾನವು ಕೈನೆಟಿಕ್‌ ಶಕ್ತಿಯನ್ನು ಎಲೆಕ್ಟ್ರಿಕ್‌ ಶಕ್ತಿಯಾಗಿ ಪರಿವರ್ತಿಸುವ ಮೂಲಕ ಸಂಚಾರಕ್ಕೆ ಮತ್ತಷ್ಟು ಇಂಧನ ಪೂರೈಕೆ ಮಾಡುತ್ತದೆ. 3 ವರ್ಷ ಮತ್ತು 50,000 ಕಿ.ಮೀ. ವರೆಗೂ ಬ್ಯಾಟರಿ ವಾರಂಟಿ ನೀಡಲಾಗಿದೆ. ಬ್ಯಾಟರಿ ಶೇ 100ರಷ್ಟು ಚಾರ್ಜ್ ಮಾಡಲು 5 ಗಂಟೆ ಹಾಗೂ 1 ಗಂಟೆಯಲ್ಲಿ ಶೇ 25ರಷ್ಟು ಚಾರ್ಜ್‌ ಆಗುತ್ತದೆ.

ADVERTISEMENT

ಮೊಬೈಲ್‌ನೊಂದಿಗೆ ಸ್ಕೂಟರ್‌ ಇರುವಿಕೆ ಮಾಹಿತಿಯನ್ನು ಸಂಪರ್ಕಿಸಬಹುದು. ಹೆಲ್ಮೆಟ್‌ ಇಡಲು ಪೂರಕ ಸ್ಥಳಾವಕಾಶ, ಮೊಬೈಲ್‌ ಸುರಕ್ಷಿತವಾಗಿ ಇಟ್ಟು ಚಾರ್ಜ್‌ ಮಾಡಲು ಮುಂಭಾಗಲ್ಲಿಯೇ ಅವಕಾಶವಿದೆ.

ಚೇತಕ್‌ ಪ್ರಸ್ತುತ ಏಥರ್‌ 450, ಬಿಡುಗಡೆಯಾಗಲಿರುವ 450 ಎಕ್ಸ್‌ ಹಾಗೂ ಒಕಿನಾವಾ ಪ್ರೈಸ್ ಪೈಪೋಟಿ ಎದುರಿಸಬೇಕಿದೆ.

ಈವರೆಗೂ ಕಂಪನಿ ಸ್ಕೂಟರ್‌ ಬೆಲೆಯನ್ನು ಬಹಿರಂಗ ಪಡಿಸಿಲ್ಲ. ವಿದ್ಯುತ್‌ ಚಾಲಿತ ಚೇತಕ್‌ ಸ್ಕೂಟರ್‌ ಬೆಲೆ ಸುಮಾರು ₹ 1.20 ಲಕ್ಷ ಇರಬಹುದು ಎಂದು ಅಂದಾಜಿಸಲಾಗುತ್ತಿದೆ. ಕೆಟಿಎಂ ಬೈಕ್‌ಗಳನ್ನು ಮಾರಾಟ ಮಾಡುತ್ತಿರುವ ಷೋರೂಂಗಳಲ್ಲಿಯೇ ಹೊಸ ಚೇತಕ್‌ ಸಹ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.