ADVERTISEMENT

ಹೋಂಡಾ: ಸ್ಪೋರ್ಟಿ, ಸ್ಟೈಲೀಶ್‌ ನೋಟದ ಹೊಸ ಎಕ್ಸ್-ಬ್ಲೇಡ್ ಬೈಕ್‌

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 7:08 IST
Last Updated 8 ಜುಲೈ 2020, 7:08 IST
ಹೊಂಡಾದ ಹೊಸ ಎಕ್ಸ್‌ ಬ್ಲೇಡ್‌ ಬೈಕ್‌
ಹೊಂಡಾದ ಹೊಸ ಎಕ್ಸ್‌ ಬ್ಲೇಡ್‌ ಬೈಕ್‌   

ತನ್ನ 160 ಸಿಸಿ ಮೋಟರ್‌ ಸೈಕಲ್‌ ವಲಯದ ಶ್ರೇಣಿ ವಿಸ್ತರಿಸಿರುವ ಹೋಂಡಾ ಮೋಟರ್ ಸೈಕಲ್ ಆ್ಯಂಡ್‌ ಸ್ಕೂಟರ್ ಇಂಡಿಯಾ, ಸ್ಪೋರ್ಟಿ ಮತ್ತು ಸ್ಟೈಲಿಶ್‌ ನೋಟದ ಹೊಸ ಎಕ್ಸ್-ಬ್ಲೇಡ್ ಬಿಎಸ್-6 ಬಿಡುಗಡೆ ಮಾಡಿದೆ. ಹಲವಾರು ಹೊಸ ಸೌಲಭ್ಯಗಳಿಂದ ಇದು ಸುಸಜ್ಜಿತವಾಗಿದೆ. ಆ್ಯಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಬ್ರೇಕಿಂಗ್ ಕ್ಷಮತೆ ಹೆಚ್ಚಿಸುತ್ತದೆ. ಎಂಜಿನ್ ನಿಲುಗಡೆ ಸ್ವಿಚ್ ಅದುಮುವ ಮೂಲಕ ಸ್ವಲ್ಪ ಸಮಯದ ನಿಲುಗಡೆಯ ಸಂದರ್ಭದಲ್ಲಿ ಎಂಜಿನ್ ಆಫ್ ಮಾಡಲು ಸಾಧ್ಯವಾಗುತ್ತದೆ. ಸವಾರರ ಸುರಕ್ಷತೆ ಖಾತರಿಪಡಿಸಲು ಎದುರುಗಡೆ ದೃಶ್ಯ ಕಾಣಿಸದ ಅವಧಿಯಲ್ಲಿ ಅಪಾಯಕಾರಿ ಸಾಧ್ಯತೆಯ ಸ್ವಿಚ್, ಇಂಡಿಕೇಟರ್ ಲೈಟ್ ಬೆಳಗುವಂತೆ ಮಾಡುತ್ತದೆ.

ಗೇರ್ ಮಾಹಿತಿ, ಡಿಜಿಟಲ್ ಕ್ಲಾಕ್ ಮತ್ತು ಸರ್ವೀಸ್ ಬಾಕಿ ಇಂಡಿಕೇಟರ್ ಮಾಹಿತಿಯನ್ನು ಡಿಜಿಟಲ್ ಮೀಟರ್ ಒಳಗೊಂಡಿದೆ. 130 ಮಿಲಿಮೀಟರ್ ಅಗಲದ ಹಿಂಬದಿ ಟೈರ್, ಉದ್ದವಾದ ವ್ಹೀಲ್‍ಬೇಲ್ (1347 ಮಿಮೀ.) ರಸ್ತೆ ಮೇಲಿನ ಬೈಕ್‌ನ ಸ್ಥಿರತೆ ಹೆಚ್ಚಿಸುತ್ತದೆ ಹಾಗೂ ಸುಧೀರ್ಘ ಪ್ರಯಾಣದ ಅವಧಿಯಲ್ಲಿ ಕೂಡಾ ಆರಾಮದಾಯಕತೆಯನ್ನು ಖಾತರಿಪಡಿಸುತ್ತದೆ.

‘ಹೊಸ ಎಕ್ಸ್-ಬ್ಲೇಡ್ ಬಿಎಸ್6ನಲ್ಲಿ ಅತ್ಯಾಧುನಿಕ ಮತ್ತು ಅಧಿಕ ಕ್ಷಮತೆಯ ಎಂಜಿನ್ ವಿನ್ಯಾಸಗೊಳಿಸಲಾಗಿದೆ. ಹೊಸ ತಲೆಮಾರಿನವರ ಪ್ರವೃತ್ತಿಗೆ ಪೂರಕವಾಗಿ ಇದರ ವಿನ್ಯಾಸ ರೂಪಿಸಲಾಗಿದೆ. ನಾಲ್ಕು ಆಕರ್ಷಕ ಬಣ್ಣಗಳಲ್ಲಿ ಲಭ್ಯ ಇದೆ ’ ಎಂದು ಮಾರುಕಟ್ಟೆ ವಿಭಾಗದ ನಿರ್ದೇಶಕ ಯದುವೇಂಧ್ರ ಸಿಂಗ್ ಗುಲೇರಿಯಾ ಹೇಳಿದ್ದಾರೆ.

ADVERTISEMENT

ವೈಶಿಷ್ಟತೆಗಳು

• ಹೊಸ ಎಚ್‍ಇಟಿ ಬಿಎಸ್-6 ಎಂಜಿನ್
• ಹಿಂಬದಿ ಮೋನೊ ಶಾಕ್ ಸಸ್ಪೆನ್ಷನ್
• ಎಬಿಎಸ್ ಹೊಂದಿದ ಮುಂಬದಿ ಹಾಗೂ ಹಿಂಬದಿ ಪೇಟಲ್ ಡಿಸ್ಕ್ ಬ್ರೇಕ್‍
• ಹೊಸ ಎಂಜಿನ್ ನಿಲುಗಡೆ ಸ್ವಿಚ್, ಅಲ್ಪ ನಿಲುಗಡೆ ವೇಳೆ ಅನುಕೂಲ
• ಗೇರ್ ಪೊಸಿಷನ್ ಇಂಡಿಕೇಟರ್, ಡಿಜಿಟಲ್ ಕ್ಲಾಕ್
• ಉದ್ದನೇಯ ಮತ್ತು ಆರಾಮದಾಯಕ ಆಸನ

• ರೋಬೊ ಮುಖದ ಎಲ್‍ಇಡಿ ಹೆಡ್‍ಲ್ಯಾಂಪ್‌
• ಆಕರ್ಷಕ ಟ್ಯಾಂಕ್ ವಿನ್ಯಾಸ
• 6 ವರ್ಷಗಳ ವಾರಂಟಿ ಪ್ಯಾಕೇಜ್
• ಸಿಂಗಲ್ ಡಿಸ್ಕ್ ಮತ್ತು ಅವಳಿ ಡಿಸ್ಕ್
• ಆರಂಭಿಕ ಬೆಲೆ (ಎಕ್ಸ್‌ಷೋರೂಂ) ₹1,05,325

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.