ADVERTISEMENT

ಹಲವು ಆಕರ್ಷಣೆಗಳ ಹುಂಡೈ 'ಔರಾ' ಮಾರುಕಟ್ಟೆಗೆ

ಪೃಥ್ವಿರಾಜ್ ಎಂ ಎಚ್
Published 21 ಜನವರಿ 2020, 17:23 IST
Last Updated 21 ಜನವರಿ 2020, 17:23 IST
ಹುಂಡೈ ಔರಾ
ಹುಂಡೈ ಔರಾ   
""

ನವದೆಹಲಿ: ವಿಶಿಷ್ಟ ವಿನ್ಯಾಸ, ನೂತನ ಆಕರ್ಷಣೆ ಹಾಗೂ ವಿಶೇಷ ಸೌಲಭ್ಯ ಒಳಗೊಂಡಿರುವ 'ಹುಂಡೈ ಆಲ್ ನ್ಯೂ ಔರಾ' ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ ಅನ್ನು (ಎಸ್‌ಯುವಿ) ಹುಂಡೈ ಮೋಟಾರ್ಸ್ ಇಂಡಿಯಾ, ಮಂಗಳವಾರ ಇಲ್ಲಿ ಮಾರುಕಟ್ಟೆಗೆ ಪರಿಚಯಿಸಿತು.

ಯುವ ಸಮುದಾಯವನ್ನು ದೃಷ್ಟಿಯಲ್ಲಿಟ್ಟುಕೊಂಡು ತಯಾರಿಸಿರುವ ಇದು ಸೆಡಾನ್ ಶ್ರೇಣಿಯ ಎಸ್‌ಯುವಿ ಪೈಕಿ ಹಲವಾರು ಹೊಸ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

'2020ರ ದಶಕದ ವಾಹನ ಉದ್ದಿಮೆ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಲಿರುವ ಮೊದಲ ಎಸ್‌ಯುವಿ ಇದಾಗಿದೆ' ಎಂದು ಕಂಪನಿಯ ಸಿಇಒ ಎಸ್. ಎಸ್. ಕಿಮ್ ಅವರು ಬಣ್ಣಿಸಿದರು.

ADVERTISEMENT

'ಆಕರ್ಷಕ ವಿನ್ಯಾಸ ಮತ್ತು ಬಣ್ಣಗಳಲ್ಲಿ ಲಭ್ಯ ಇರುವ ಇದು, ವಿಶಿಷ್ಟ ವಿನ್ಯಾಸಕ್ಕೆ ಹೆಸರಾದ ಹುಂಡೈ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸುವ ವಿಶ್ವಾಸವಿದೆ. ಸಮರ್ಪಕ ಇಂಧನ ಬಳಕೆ, ಉತ್ತಮ ಕಾರ್ಯನಿರ್ವಹಣೆಯ ಉತ್ಕೃಷ್ಟವಾದ ಬಿಎಸ್ 6 ಎಂಜಿನ್ ಒಳಗೊಂಡಿದೆ’ ಎಂದರು.

ವೈಶಿಷ್ಟ್ಯಗಳು
*
ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಹಾಗೂ ಫಾಗ್ ಲ್ಯಾಂಪ್

* ಹಗಲಿನಲ್ಲಿ ಬೆಳಕು ಸೂಸುವ ಟ್ವಿನ್ ಬೂಮರ್ಯಾಂಗ್ ದೀಪ

* ಜೆಡ್ ಆಕೃತಿಯ ಎಲ್‌ಇಡಿ ಟೇಲ್ ಲ್ಯಾಂಪ್

* ವಜ್ರಾಕೃತಿಯ ಆರ್15 ಅಲೊಯ್ ಚಕ್ರಗಳು

ಸುರಕ್ಷತಾ ಕ್ರಮಗಳು

* ಕ್ರೂಯಿಸ್ ಕಂಟ್ರೋಲ್ ವ್ಯವಸ್ಥೆ

* ಯುಎಸ್‌ಬಿ ಫಾಸ್ಟ್ ಚಾರ್ಜರ್

* ಹಿಂಬದಿಯಲ್ಲಿ ಆರಾಮದಾಯಕ ಆಸನಗಳು

ಹೊಸ ಆಕರ್ಷಣೆಗಳು

*ವೈರ್‌ಲೆಸ್ ಚಾರ್ಜಿಂಗ್ ವ್ಯವಸ್ಥೆ

* ಗೇರ್‌ನಾಬ್‌ಗೆ ಚರ್ಮದ ಹೊದಿಕೆ

* ತುರ್ತು ಸಂದರ್ಭಗಳಲ್ಲಿ ನಿಲ್ಲಿಸಲು ತುರ್ತು ಸಂಕೇತ

* ಐಬ್ಲ್ಯುಆಡಿಯೊ ರಿಮೋಟ್ ಫೋನ್ ಆ್ಯಪ್

* ಯುಎಸ್‌ಬಿ ಚಾರ್ಜರ್

* ವಿವಿಧ ರೂಪದಲ್ಲಿ ಬಳಕೆಯಾಗುವ ಸ್ಪೀಡೊ ಮೀಟರ್

* ಸ್ಮಾರ್ಟ್‌ಫೋನ್ ಜತೆ ಜೋಡಿಸಬಹುದಾದ 20.25 ಸೆಂ.ಮೀ. ಗಾತ್ರದ ಟಚ್ ಸ್ಕ್ರೀನ್

ಮೂರು ಪವರ್ ಟ್ರೇನ್ ಮಾದರಿಗಳು

*ಬಿಎಸ್6- 1.2 ಲೀ. ಪೆಟ್ರೋಲ್ ಎಂಜಿನ್

*ಬಿಎಸ್6- 1.2 ಲೀ. ಡೀಸೆಲ್ ಎಂಜಿನ್

*ಬಿಎಸ್6- 1.0 ಲೀ. ಟರ್ಬೊ ಜಿಡಿಐ

*ಬೆಲೆ (ದೆಹಲಿ ಎಕ್ಸ್ ಷೋರೂಂ): ₹ 5.79 ಲಕ್ಷದಿಂದ ₹ 9.22 ಲಕ್ಷ

(ಕಂಪನಿಯ ಆಹ್ವಾನದ ಮೇರೆಗೆ ವರದಿಗಾರ ದೆಹಲಿಗೆ ತೆರಳಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.