ADVERTISEMENT

ಹುಂಡೈ ‘ಕ್ಲಿಕ್‌ ಟು ಬೈ’

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 19:30 IST
Last Updated 22 ಜನವರಿ 2020, 19:30 IST
   

ಹುಂಡೈ ಮೋಟರ್‌ ಇಂಡಿಯಾ ಕಂಪನಿಯು ಆನ್‌ಲೈನ್‌ ಮಾರಾಟಕ್ಕೆ ಜಾಲತಾಣ ಬಿಡುಗಡೆ ಮಾಡಿದೆ. ಕಾರ್‌ಗಳ ಖರೀದಿಗಾಗಿಅತ್ಯಂತ ಸರಳ ಮತ್ತು ಪಾರದರ್ಶಕವಾದ ‘ಕ್ಲಿಕ್‌ ಟು ಬೈ’ ರೀತಿಯ ಸೌಲಭ್ಯ ಇದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

‘ಹೊಸ ಯುಗದ ಡಿಜಿಟಲ್‌ ಗ್ರಾಹಕರನ್ನು ಸೆಳೆಯಲು ಭಾರತದ ಮೊದಲ ಆನ್‌ಲೈನ್‌ ಮಾರಾಟ ವೇದಿಕೆ ಇದಾಗಿದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಸ್‌.ಎಸ್‌. ಕಿಮ್‌ ತಿಳಿಸಿದ್ದಾರೆ.

‘ಒಂದು ದಶಕದಲ್ಲಿ ರಿಟೇಲ್‌ ಮಾರಾಟದಲ್ಲಿ ಸಾಕಷ್ಟು ಸ್ಥಿತ್ಯಂತರಗಳು ಆಗಿವೆ. ಹೊಸ ಪೀಳಿಗೆಯವರು ಆನ್‌ಲೈನ್‌ನಲ್ಲಿ ಉತ್ಪನ್ನಗಳ ಖರೀದಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ’ ಎಂದಿದ್ದಾರೆ.

ADVERTISEMENT

ಕಂಪನಿಯು ಸದ್ಯ ದೆಹಲಿ–ಎನ್‌ಸಿಆರ್‌ನಲ್ಲಿ ಕೆಲವು ಡೀಲರ್‌ ವ್ಯಾಪ್ತಿಯಲ್ಲಿ ಈ ಸೌಲಭ್ಯಕ್ಕೆ ಚಾಲನೆ ನೀಡಿದೆ.https://clicktobuy.hyundai.co.in/#/customer/select-a-car

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.