ADVERTISEMENT

ಮಾರುತಿ ಇ–ವಿಟಾರಾ ಬಿಡುಗಡೆ: ಬೆಲೆ ಸೇರಿದಂತೆ ಇಲ್ಲಿದೆ ಸಂಪೂರ್ಣ ಮಾಹಿತಿ

ಪಿಟಿಐ
Published 17 ಫೆಬ್ರುವರಿ 2026, 14:41 IST
Last Updated 17 ಫೆಬ್ರುವರಿ 2026, 14:41 IST
   

ನವದೆಹಲಿ: ಇ–ವಿಟಾರಾ ಕಾರನ್ನು ಬಿಡುಗಡೆ ಮಾಡುವ ಮೂಲಕ ಮಾರುತಿ ಸುಜುಕಿ ಇಂಡಿಯಾ ಕಂಪನಿಯು ದೇಶದ ಇ.ವಿ. ಮಾರುಕಟ್ಟೆಯನ್ನು ಮಂಗಳವಾರ ಪ್ರವೇಶಿಸಿದೆ.

ಈ ಮಾದರಿಯ ಕಾರುಗಳ ರಫ್ತನ್ನು ಕಂಪನಿಯು ಈಗಾಗಲೇ ಆರಂಭಿಸಿದೆ. ‘45 ವರ್ಷಗಳ ಹಿಂದೆ ಕಂಪನಿಯು ಫೆಬ್ರುವರಿ ತಿಂಗಳಲ್ಲಿ ಆರಂಭವಾಯಿತು... ಈಗ ಅದೇ ಫೆಬ್ರುವರಿ ತಿಂಗಳಲ್ಲಿ ನಾವು ವಾಹನ ಉದ್ಯಮಕ್ಕೆ ಹೊಸ ವ್ಯಾಖ್ಯಾನ ನೀಡುವ ಪರಿವರ್ತನೆಯ ಪಯಣವನ್ನು ಆರಂಭಿಸಲು ಸಿದ್ಧರಾಗಿದ್ದೇವೆ’ ಎಂದು ಕಂಪನಿಯ ಮಾರುಕಟ್ಟೆ ಹಾಗೂ ಮಾರಾಟ ವಿಭಾಗದ ಹಿರಿಯ ಕಾರ್ಯನಿರ್ವಹಣಾ ಅಧಿಕಾರಿ ಪಾರ್ಥೊ ಬ್ಯಾನರ್ಜಿ ಹೇಳಿದ್ದಾರೆ.

ಬ್ಯಾಟರಿಯನ್ನು ಒಂದು ಸೇವೆಯನ್ನಾಗಿ ಪಡೆಯುವುದಿದ್ದರೆ ಇ–ವಿಟಾರಾ ವಾಹನಕ್ಕೆ ₹10.99 ಲಕ್ಷ ಬೆಲೆ ನಿಗದಿ ಮಾಡಲಾಗಿದೆ. ಇ–ವಿಟಾರಾ ಒಂದು ಬಾರಿ ಪೂರ್ತಿಯಾಗಿ ಚಾರ್ಜ್‌ ಆದರೆ ₹543 ಕಿ.ಮೀ.ವರೆಗೆ ಸಾಗುತ್ತದೆ. 1,500ಕ್ಕೂ ಹೆಚ್ಚಿನ ಸೇವಾ ಕೇಂದ್ರಗಳು ಈ ವಾಹನಕ್ಕೆ ಅಗತ್ಯವಿರುವ ರಿಪೇರಿ ಕೆಲಸಗಳನ್ನು ಮಾಡಿಕೊಡಲಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.