ಬೆಂಗಳೂರು: ಮಾರುತಿ ಸುಜುಕಿ ಕಂಪನಿಯ ಗ್ರ್ಯಾಂಡ್ ವಿಟಾರಾ ಮಾದರಿಯ 300ಕ್ಕೂ ಹೆಚ್ಚು ವಾಹನಗಳನ್ನು ರಾಜ್ಯದ ನೆಕ್ಸಾ ಮಳಿಗೆಗಳು ಈ ಮಾದರಿ ಬಿಡುಗಡೆ ಆದ 21 ದಿನಗಳಲ್ಲಿ ಗ್ರಾಹಕರಿಗೆ ಹಸ್ತಾಂತರ ಮಾಡಿವೆ. ರಾಜ್ಯದಲ್ಲಿ ಈ ವಾಹನಕ್ಕೆ ಇದುವರೆಗೆ ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಬುಕಿಂಗ್‌ಗಳು ಬಂದಿವೆ.
ಮಧ್ಯಮ ಗಾತ್ರದ ಈ ಎಸ್‌ಯುವಿ ವಾಹನವನ್ನು ಮಾರುತಿ ಸುಜುಕಿ ಜುಲೈನಲ್ಲಿ ಅನಾವರಣ ಮಾಡಿದೆ. ಕಾರು ಉದ್ಯಮದಲ್ಲಿ ಈ ಮೊದಲು ಎಸ್‌ಯುವಿ ಪಾಲು ಶೇ 19ರಷ್ಟು ಇದ್ದಿದ್ದು ಈಗ ಶೇ 40ಕ್ಕೆ ಏರಿಕೆಯಾಗಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ. ಗ್ರ್ಯಾಂಡ್ ವಿತಾರಾ ವಾಹನದ ಬೆಲೆಯು ₹ 10.45 ಲಕ್ಷದಿಂದ (ಎಕ್ಸ್ ಷೋರೂಂ) ಆರಂಭವಾಗುತ್ತದೆ.
ಗ್ರ್ಯಾಂಡ್ ವಿಟಾರಾ ವಾಹನವು 1.5 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು ಪ್ರತಿ ಲೀಟರ್‌ಗೆ ಗರಿಷ್ಠ 27.97 ಕಿ.ಮೀ. ಇಂಧನ ದಕ್ಷತೆಯನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.