ADVERTISEMENT

ಗ್ರ್ಯಾಂಡ್‌ ವಿಟಾರಾ ಸಿಎನ್‌ಜಿ ಅವತರಣಿಕೆ ಬಿಡುಗಡೆ

ಪಿಟಿಐ
Published 6 ಜನವರಿ 2023, 12:49 IST
Last Updated 6 ಜನವರಿ 2023, 12:49 IST
   

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಕಂಪನಿಯು ತನ್ನ ಮಧ್ಯಮ ಗಾತ್ರದ ಎಸ್‌ಯುವಿ ಗ್ರ್ಯಾಂಡ್‌ ವಿಟಾರಾದ ಸಿಎನ್‌ಜಿ ಅವತರಣಿಕೆಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ಎಕ್ಸ್‌ ಷೋರೂಂ ಬೆಲೆ ₹ 12.85 ಲಕ್ಷದಿಂದ ₹ 14.84 ಲಕ್ಷದವರೆಗೆ ಇದೆ.

ಸಿಎನ್‌ಜಿ ಅವತರಣಿಕೆಯು 5–ಸ್ಪೀಡ್‌ ಮ್ಯಾನುಯಲ್‌ ಗಿಯರ್‌ಬಾಕ್ಸ್‌ ಹೊಂದಿದ್ದು, ಕೆ.ಜಿ.ಗೆ 26.6 ಕಿಲೋ ಮೀಟರ್‌ ಇಂಧನ ದಕ್ಷತೆ ಹೊಂದಿದೆ ಎಂದು ಕಂಪನಿ ತಿಳಿಸಿದೆ.

ಗ್ರ್ಯಾಂಡ್‌ ವಿಟಾರಾ ಎಸ್‌–ಸಿಎನ್‌ಜಿ ಬಿಡುಗಡೆಯಿಂದಾಗಿ ಒಟ್ಟು 14 ಮಾದರಿಗಳಲ್ಲಿ ಸಿಎನ್‌ಜಿ ಆಯ್ಕೆ ನೀಡಿದಂತಾಗಿದೆ ಎಂದು ಕಂಪನಿಯ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಾಂಕ್‌ ಶ್ರೀವಾಸ್ತವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಿಂಗಳ ಚಂದಾದಾರಿಕೆ ಮೊತ್ತ ₹ 30,723 ಪಾವತಿ ಮಾಡಿಯೂ ಈ ಅವತರಣಿಕೆಯನ್ನು ಖರೀದಿಸಬಹುದು ಎಂದು ಕಂಪನಿ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.