ADVERTISEMENT

ನಿಸ್ಸಾನ್ ಸ್ಪೋರ್ಟಿ ಮಿಕ್ರಾ...

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2018, 19:30 IST
Last Updated 15 ಆಗಸ್ಟ್ 2018, 19:30 IST
ನಿಸ್ಸಾನ್‌ 
ನಿಸ್ಸಾನ್‌    

ನಿಸ್ಸಾನ್‌ ಇಂಡಿಯಾ ಕಂಪನಿ ಹೊಸ ಸ್ಪೋರ್ಟಿ ವಿನ್ಯಾಸವುಳ್ಳ ಇಂಟಲಿಜೆಂಟ್ ವ್ಯವಸ್ಥೆಯಿರುವ ಮಿಕ್ರಾ ಕಾರು ಬಿಡುಗಡೆ ಮಾಡಿದೆ. ಈ ಕಾರಿನಲ್ಲಿ ಸುರಕ್ಷತಾ ವ್ಯವಸ್ಥೆಗಳಿವೆ. ಎರಡು ಏರ್‌ಬ್ಯಾಗ್‌, ಸಂವೇದಕ ಬಾಗಿಲುಗಳು, ಸೀಟು ಬೆಲ್ಟ್‌ ನೆನಪಿಸುವ ವ್ಯವಸ್ಥೆ, ಹಿಂಭಾಗದಲ್ಲಿ ಪಾರ್ಕಿಂಗ್‌ ಸೆನ್ಸರ್‌ಗಳು, ವೇಗದ ಕುರಿತು ಎಚ್ಚರಿಸುವ ಸಾಧನಗಳು ಇವೆ.

ರಿವರ್ಸ್‌ ಪಾರ್ಕಿಂಗ್‌ ಕ್ಯಾಮೆರಾ (ಕಾರು ಹಿಮ್ಮುಖವಾಗಿ ಚಲಿಸುತ್ತಿರುವಾಗ ಕ್ಯಾಮೆರಾ ಚಾಲನೆಗೊಂಡು ವಾಹನದ ಹಿಂಭಾಗದ ದೃಶ್ಯವನ್ನು ಡ್ಯಾಷ್‌ ಬೋರ್ಡ್‌ನ ಪರದೆಯ ಮೇಲೆ ಮೂಡಿಸುತ್ತದೆ) ಇದೆ. ಇದು ಹಿಮ್ಮುಖ (ರಿವರ್ಸ್‌) ಚಲನೆಯ ಸಂದರ್ಭಗಳಲ್ಲಿ ವಾಹನ ಹೆಚ್ಚು ಸುರಕ್ಷಿತವಾಗಿರಲು ಸಹಕಾರಿ.

ಡ್ಯಾಷ್‌ ಬೋರ್ಡ್‌ನಲ್ಲಿ 6.2 ಇಂಚು ಅಳತೆಯ ಟಚ್ ಸ್ಕ್ರೀನ್ ಪರದೆಯಿದೆ. ಆಡಿಯೊ ವಿಷುವಲ್‌ ನ್ಯಾವಿಗೇಷನ್‌ ವ್ಯವಸ್ಥೆಯಿದೆ. ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಕಾರುಗಳಿಗೆ ಭಾರತದಲ್ಲಿ ₹5.03 ಲಕ್ಷ ಬೆಲೆ ಇದೆ.

ADVERTISEMENT

ಈ ಕಾರಿನಲ್ಲಿ ಯುರೋಪ್ ಮತ್ತು ಜಪಾನ್‌ ಸಂಯೋಜಿತ ತಂತ್ರಜ್ಞಾನವಿದೆ. ಈಗಾಗಲೇ 100ಕ್ಕೂ ಅಧಿಕ ದೇಶಗಳಲ್ಲಿ ನಿಸ್ಸಾನ್‌ ಪ್ರಖ್ಯಾತ ಬ್ರಾಂಡ್‌ ಎನಿಸಿದ್ದು, ಗ್ರಾಹಕರಿಗೆ ಸುರಕ್ಷತೆಗೆ ಹೆಚ್ಚು ಒತ್ತು ನೀಡಿದೆ. ಚುರುಕಿನ ಚಾಲನಾ ಅನುಭವ ನೀಡುತ್ತದೆ. ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಕಾರನ್ನು ಪರಿಚಯಿಸಿದ್ದೇವೆ’ ಎಂದು ನಿಸ್ಸಾನ್‌ ಮೋಟಾರ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ನ ನಿರ್ದೇಶಕ ಹರ್‌ದೀಪ್‌ ಸಿಂಗ್‌ ಬ್ರಾರ್‌ ಹೇಳುತ್ತಾರೆ.

‘ಹಿನ್ನೋಟದ ಕನ್ನಡಿಯನ್ನು ಕಾರಿನೊಳಗೇ ಕುಳಿತು ಹೊಂದಿಸಲು ವ್ಯವಸ್ಥೆ ಇದೆ (ಅಡ್ಜಸ್ಟಬಲ್ ಔಟರ್‌ ರಿಯರ್‌ ವ್ಯೂ ಮಿರರ್‌). ವಿಶಾಲ ಮತ್ತು ಆರಾಮದಾಯಕ ಒಳಾಂಗಣ, ನುಣುಪಾದ, ಆಕರ್ಷಕ ಹೊರ ಮೇಲ್ಮೈ ನೋಟ ಎಲ್ಲದರ ಜತೆಗೆ ಉತ್ತಮ ಕಾರ್ಯದಕ್ಷತೆಯ ಅಂಶ ಈ ಕಾರಿನಲ್ಲಿದೆ’ ಎಂದು ಕಂಪನಿ ಹೇಳಿದೆ.

ಕಾರು ಎಲ್ಲಿರುತ್ತದೆ ಎಂದು ಸ್ಥಳದ ಮಾಹಿತಿ ಪಡೆಯುವ ವ್ಯವಸ್ಥೆ, ಸಮೀಪದಲ್ಲಿ ಲಭ್ಯವಿರುವ ಪಾರ್ಕಿಂಗ್ ಸ್ಥಳ, ಇಂಟಲಿಜೆಂಟ್‌ ಕೀ, ಲೀಡ್‌ ಮಿ ಟು ಕಾರ್‌ ಇತ್ಯಾದಿ ಅಂಶಗಳಿಂದ ಹೆಚ್ಚು ಚಾಲಕ ಸ್ನೇಹಿಯಾಗಿದೆ. ಹೊಸ ನಿಸ್ಸಾನ್‌ ಮಿಕ್ರಾ ಎರಡು ವಿಧದಲ್ಲಿ ಲಭ್ಯ. ಒಂದು 1.2 ಲೀಟರ್‌ ಪೆಟ್ರೋಲ್‌ ಎಂಜಿನ್‌ ಹೊಂದಿರುವಂಥದ್ದು. ಇದರಲ್ಲಿ ಕಾರ್ಯದಕ್ಷತೆ ವರ್ಧನೆ, ನಿರಂತರ ಬದಲಾಗುವ ಟ್ರಾನ್ಸ್‌ಮಿಷನ್‌ ವ್ಯವಸ್ಥೆ ಇದೆ.

ಇನ್ನೊಂದು 1.5 ಲೀಟರ್‌ ಮಾದರಿಯ ಡೀಸೆಲ್‌ ಚಾಲಿತ ಕಾರು. ಇದರಲ್ಲಿ 5 ಮ್ಯಾನ್ಯುವಲ್‌ ಟ್ರಾನ್ಸ್‌ಮಿಷನ್‌ ಗಿಯರ್‌ ಇದೆ ಎಂದು ಕಂಪನಿ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.