ADVERTISEMENT

Orxa Mantis: 211ಕಿ.ಮೀ ಮೈಲೇಜ್‌ನ ಇವಿ ಸೂಪರ್ ಬೈಕ್ ಪರಿಚಯಿಸಿದ ಒರ್ಹಾ ಎನರ್ಜೀಸ್

ಎಲೆಕ್ಟ್ರಿಕ್ ವಾಹನ ತಯಾರಿಕಾ ಸ್ಟಾರ್ಟ್ ಅಪ್ ಒರ್ಹಾ ಎನರ್ಜೀಸ್ ಕಂಪನಿಯು ಮ್ಯಾಂಟಿಸ್ ಎಂಬ ಇವಿ ಬೈಕ್ ಪರಿಚಯಿಸಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ನವೆಂಬರ್ 2023, 8:58 IST
Last Updated 22 ನವೆಂಬರ್ 2023, 8:58 IST
<div class="paragraphs"><p>ಎಲೆಕ್ಟ್ರಿಕ್ ವಾಹನ ತಯಾರಿಕಾ ಸ್ಟಾರ್ಟ್ ಅಪ್ ಒರ್ಹಾ ಎನರ್ಜೀಸ್ ಕಂಪನಿಯು ಮ್ಯಾಂಟಿಸ್ ಎಂಬ ಇವಿ ಬೈಕ್ ಪರಿಚಯಿಸಿದೆ.</p></div>

ಎಲೆಕ್ಟ್ರಿಕ್ ವಾಹನ ತಯಾರಿಕಾ ಸ್ಟಾರ್ಟ್ ಅಪ್ ಒರ್ಹಾ ಎನರ್ಜೀಸ್ ಕಂಪನಿಯು ಮ್ಯಾಂಟಿಸ್ ಎಂಬ ಇವಿ ಬೈಕ್ ಪರಿಚಯಿಸಿದೆ.

   

ಪ್ರಜಾವಾಣಿ ಚಿತ್ರ

ಬೆಂಗಳೂರು: ಎಲೆಕ್ಟ್ರಿಕ್ ವಾಹನ ತಯಾರಿಕಾ ಸ್ಟಾರ್ಟ್ ಅಪ್ ಒರ್ಹಾ ಎನರ್ಜೀಸ್ ಕಂಪನಿಯು ಮ್ಯಾಂಟಿಸ್ ಎಂಬ ಇವಿ ಬೈಕ್ ಪರಿಚಯಿಸಿದೆ.

ADVERTISEMENT

ನಗರದ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿರುವ ಕಂಪನಿಯ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಮ್ಯಾಂಟಿಸ್ ಬೈಕ್ ಲೋಕಾರ್ಪಣೆಗೊಳಿಸಲಾಯಿತು.

‘ಬೆಂಗಳೂರು ಮೂಲದ ಒರ್ಹಾ ಎನರ್ಜೀಸ್ ಕಳೆದ 8 ವರ್ಷಗಳಿಂದ ಮ್ಯಾಂಟಿಸ್ ಅಭಿವೃದ್ಧಿಯಲ್ಲಿ ತೊಡಗಿದೆ. ಇದು 20.5 ಕಿಲೋ ವ್ಯಾಟ್ ಮೋಟಾರ್ ಬೈಕ್ ಆಗಿದ್ದು, ಒಂದು ಬಾರಿ ಪೂರ್ಣ ಚಾರ್ಜ್ ಗೆ 221 ಕಿ.ಮೀ ದೂರ ಕ್ರಮಿಸುವ ಕ್ಷಮತೆ ಹೊಂದಿದೆ’ ಎಂದು ಸಂಸ್ಥಾಪಕಿ ರಂಜಿತಾ ರಿವಿ ಹೇಳಿದರು.

ಶೂನ್ಯದಿಂದ 100 ಕಿ.ಮೀ ವೇಗ ಕ್ರಮಿಸಲು 8.9 ಸೆಕೆಂಡ್ ಸಾಕು. ಗರಿಷ್ಠ 135 ಕಿ.ಮೀ ವೇಗ ಇದರದ್ದು. ಐಪಿ65 ವಾಟರ್ ರೆಸಿಸ್ಟೆಂಟ್ ಇರುವ ಬ್ಯಾಟರಿ 30 ಸಾವಿರ ಕಿ.ಮೀ ಅಥವಾ 3 ವರ್ಷ ವಾರಂಟಿ ಹೊಂದಿದೆ’ ಎಂದು ಸಹ ಸಂಸ್ಥಾಪಕ ಡಾ. ಪ್ರಜ್ವಲ್ ಸಬ್ನಿಸ್ ವಿವರಿಸಿದರು.

ಬೈಕ್ ಎಕ್ಸ್ ಶೋರೂಮ್ ಬೆಲೆ ಬೆಂಗಳೂರಿನಲ್ಲಿ ₹3.6೦ಲಕ್ಷ ನಿಗದಿಪಡಿಸಲಾಗಿದೆ.

2024ರ ಏಪ್ರಿಲ್ ನಲ್ಲಿ ಬೈಕ್ ಲಭ್ಯ. ಬುಕ್ಕಿಂಗ್ (mantis.orxaenergies.com/)ಈಗಲೇ ಆರಂಭವಾಗಿದ್ದು ಮೊದಲ 1 ಸಾವಿರ ಗ್ರಾಹಕರಿಗೆ ₹10 ಸಾವಿರ ಮುಂಗಡ ಹಣ, ನಂತರ ಇದು ₹25 ಸಾವಿರ ಅಗಲಿದೆ’ ಎಂದು ತಿಳಿಸಿದರು.

ಒಟ್ಟು 182 ಕೆಜಿ ತೂಕ ಇರುವ ಮ್ಯಾಂಟಿಸ್ ಅತ್ಯಂತ ಹಗುರ ಬೈಕ್. 180 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಬೆಂಗಳೂರಿನಿಂದ ಬೈಕ್ ಬಿಡುಗಡೆ ಆರಂಭವಾಗಲಿದೆ. ಹಂತ ಹಂತವಾಗಿ ದೇಶದ ಇತರ ಪ್ರಮುಖ ನಗರಗಳಲ್ಲೂ ಮ್ಯಾಂಟಿಸ್ ಬಿಡುಗಡೆ ಮಾಡಲಾಗುವುದು. ಜತೆಗೆ ಆರಂಭದಲ್ಲಿ ಪ್ರಮುಖ ಮಾರ್ಗಗಳಲ್ಲಿ 100 ವೇಗದ ಚಾರ್ಜರ್ ಅಳವಡಿಸಲಾಗುವುದು. ಇದು ಒಂದು ಗಂಟೆಯಲ್ಲಿ ಶೇ 8೦ರಷ್ಟು ಚಾರ್ಜ್ ಆಗಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.