ಬೆಂಗಳೂರಿನಲ್ಲಿ ಟೊಯೊಟ ಕಿರ್ಲೋಸ್ಕರ್ ಮೋಟರ್ ಇಂಡಿಯಾ ತನ್ನ ಹೊಸ ಮಾದರಿಯ ಟೊಯೊಟ ‘ಆಲ್ ನ್ಯೂ ಕ್ಯಾಮ್ರಿ’ ಕಾರನ್ನು ಬುಧವಾರ ಬಿಡುಗಡೆ ಮಾಡಿತು.
ಬೆಂಗಳೂರು: ಟೊಯೊಟ ಕಿರ್ಲೋಸ್ಕರ್ ಮೋಟರ್ ಇಂಡಿಯಾವು ತನ್ನ ಹೊಸ ಹೈಬ್ರಿಡ್ ಮಾದರಿಯ ಟೊಯೊಟ ‘ಆಲ್ ನ್ಯೂ ಕ್ಯಾಮ್ರಿ’ ಕಾರನ್ನು ನಗರದಲ್ಲಿ ಬುಧವಾರ ಬಿಡುಗಡೆ ಮಾಡಿದೆ.
ಇದರ ಎಕ್ಸ್ ಷೋರೂಂ ದರ ₹48 ಲಕ್ಷ ಇದೆ. ಬುಕಿಂಗ್ ಈಗಾಗಲೇ ಆರಂಭವಾಗಿದ್ದು, ಗ್ರಾಹಕರು ನೋಂದಾಯಿಸಿಕೊಂಡರೆ ತಕ್ಷಣವೇ ವಿತರಿಸಲಾಗುವುದು ಎಂದು ಕಂಪನಿ ತಿಳಿಸಿದೆ.
ಈ ವಾಹನ ಪ್ರತಿ ಲೀಟರ್ ಪೆಟ್ರೋಲ್‌ಗೆ 25.49 ಕಿ.ಮೀ ಮೈಲೇಜ್ ನೀಡಲಿದೆ. 12.3 ಇಂಚಿನ ಗಾತ್ರದ ಮಲ್ಟಿಮೀಡಿಯಾ ವಿತ್ ಎಂಟರ್‌ಟೈನ್‌ಮೆಂಟ್ ಆ್ಯಪ್ ಮತ್ತು ಇಷ್ಟೇ ಗಾತ್ರದ ಡಿಸ್‌ಪ್ಲೇ, 9 ಏರ್‌ಬ್ಯಾಗ್, ಆರಾಮದಾಯಕ ಆಸನಗಳು, ಎಲ್‌ಇಡಿ ಲೈಟ್‌ಗಳನ್ನು ಹೊಂದಿದೆ.
ಕಾರಿನ ಹೊರಗೆ ಮತ್ತು ಒಳಗೆ ಉತ್ತಮ ವಿನ್ಯಾಸ ಒಳಗೊಂಡಿದೆ. ವಿಶಾಲವಾದ ಕ್ಯಾಬಿನ್, ವೈಯರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ಆಟೊಮೇಟಿಕ್ ಮಳೆ ಸೆನ್ಸಾರ್ ವೈಪರ್‌ಗಳು, ಟೈಪ್–ಸಿ ಜಾರ್ಜಿಂಗ್ ಪೋರ್ಟ್, 9 ಸ್ಪೀಕರ್, ಸ್ಪೀಡ್ ಸೆನ್ಸಿಂಗ್ ಡೋರ್ ಆಟೊ ಲಾಕ್, ಟೊಯೊಟ ಸೇಫ್ಟಿ ಸೆನ್ಸ್ 3.0, ನ್ಯಾವಿಗೇಷನ್ ವ್ಯವಸ್ಥೆ ಹೊಂದಿದೆ.
ಬೆಟ್ಟ ಹತ್ತುವಾಗ ಮತ್ತು ಇಳಿಯುವಾಗ ಉತ್ತಮವಾದ ಚಾಲನೆಯ ಅನುಭವ ನೀಡಲಿದೆ. ಡಾರ್ಕ್ ಬ್ಲೂ, ಸಿಮೆಂಟ್ ಗ್ರೇ ಸೇರಿ ವಿವಿಧ ಬಣ್ಣದಲ್ಲಿ ಲಭ್ಯವಿದೆ. ಬ್ಯಾಟರಿಗೆ 8 ವರ್ಷ ಗ್ಯಾರಂಟಿ ಅಥವಾ 1.60 ಲಕ್ಷ ಕಿ.ಮೀ. ಇದೆ. ಪೆಟ್ರೋಲ್ ಖಾಲಿಯಾದರೆ ಕಾರಿನಲ್ಲಿರುವ ವಿದ್ಯುತ್ ಬ್ಯಾಟರಿ ಸಾಮರ್ಥ್ಯದಿಂದ ಚಲಿಸಲಿದೆ.
‘ಆಲ್ ನ್ಯೂ ಕ್ರಾಮಿ 5ನೇ ತಲೆಮಾರಿನ ಹೈಬ್ರಿಡ್ ತಂತ್ರಜ್ಞಾನವನ್ನು ಒಳಗೊಂಡಿದೆ. ಪರಿಸರಕ್ಕೆ ಪೂರಕವಾಗಿ ತಯಾರಿಸಲಾಗಿದೆ. ಸುಧಾರಿತ ಉತ್ತಮ ಸಾಮರ್ಥ್ಯ ಮತ್ತು ದಕ್ಷತೆಯನ್ನು ಒಳಗೊಂಡಿದೆ’ ಎಂದು ಕಂಪನಿಯ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಸಕಾಜು ಯೋಶಿಮುರಾ ಹೇಳಿದರು.
‘ಗ್ರಾಹಕರ ಅಭಿರುಚಿಗೆ ತಕ್ಕಂತೆ ಈ ಕಾರಿನ ವಿನ್ಯಾಸ ಇದೆ. ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ನೀಡಲಿದೆ. ಕಾರು ಹೈಬ್ರಿಡ್ ಎಲೆಕ್ಟ್ರಿಕ್ ವಾಹನ ಮಾದರಿ ಒಳಗೊಂಡಿದೆ. ವಾಹನದ ಎಕ್ಸ್ ಷೋರೂಂ ಬೆಲೆ ₹48 ಲಕ್ಷ ಇದೆ. ದೇಶದಲ್ಲೆಡೆ ಒಂದೇ ರೀತಿ ಈ ದರ ಇದೆ’ ಎಂದು ಟೊಯೊಟ ಕಿರ್ಲೋಸ್ಕರ್ ಮೋಟರ್‌ನ ಮಾರಾಟ ಸೇವಾ ವಿಭಾಗದ ಉಪಾಧ್ಯಕ್ಷ ಶಬರಿ ಮನೋಹರ್ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಕಂಪನಿಯ ಉಪಾಧ್ಯಕ್ಷೆ ಮಾನಸಿ ಟಾಟಾ, ಉಪ ವ್ಯವಸ್ಥಾಪಕ ನಿರ್ದೇಶಕ ತದಾಶಿ ಅಸಾಜುಮಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.