ಬೆಂಗಳೂರು: ದ್ವಿಚಕ್ರ ವಾಹನ ಹಾಗೂ ತ್ರಿಚಕ್ರ ವಾಹನಗಳನ್ನು ತಯಾರಿಸುವ ಟಿವಿಎಸ್ ಮೋಟರ್ ಕಂಪನಿಯು ‘ಟಿವಿಎಸ್ ಕಿಂಗ್ ಕಾರ್ಗೊ ಎಚ್‌ಡಿ ಇವಿ’ ತ್ರಿಚಕ್ರ ವಾಹನವನ್ನು ಬಿಡುಗಡೆ ಮಾಡಿದೆ. ನಗರ ಹಾಗೂ ಅರೆನಗರ ಪ್ರದೇಶಗಳ ಸರಕು ಸಾಗಣೆ ವಲಯದಲ್ಲಿನ ಬದಲಾಗುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ ಈ ವಾಹನವನ್ನು ರೂಪಿಸಲಾಗಿದೆ ಎಂದು ಕಂಪನಿ ಹೇಳಿದೆ.
ಅತ್ಯಾಧುನಿಕ ತಂತ್ರಜ್ಞಾನ, ಬಲಿಷ್ಠವಾದ ವಿನ್ಯಾಸ, ಕಾರ್ಯಕ್ಷಮತೆ ಹಾಗೂ ವಿಶ್ವಾಸಾರ್ಹತೆಯನ್ನು ಒಂದೆಡೆ ತರಬೇಕು ಎಂಬ ಉದ್ದೇಶದೊಂದಿಗೆ ಟಿವಿಎಸ್ ಕಿಂಗ್ ಕಾರ್ಗೊ ಎಚ್‌ಡಿ ವಾಹನವನ್ನು ವಿನ್ಯಾಸಗೊಳಿಸಲಾಗಿದೆ. ಸರಕುಗಳನ್ನು ಗ್ರಾಹಕರು ಇರುವಲ್ಲಿಗೆ ತಲುಪಿಸುವವರಿಗೆ ಅಗತ್ಯವಿರುವ ಸುರಕ್ಷತೆ ಮತ್ತು ಆರಾಮವನ್ನು ಮೇಲ್ದರ್ಜೆಗೆ ಏರಿಸುವ ಗುರಿಯೊಂದಿಗೆ ಈ ವಾಹನವನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಿದೆ.
ಕಂಪನಿಯು ‘ಟಿವಿಎಸ್ ಕಿಂಗ್ ಕಾರ್ಗೊ ಎಚ್‌ಡಿ ಸಿಎನ್‌ಜಿ’ ಮಾದರಿಯನ್ನು ಕೂಡ ಪ್ರದರ್ಶಿಸಿದೆ. ಸಿಎನ್‌ಜಿ ವಾಹನವನ್ನು ಪ್ರಸಕ್ತ ಕ್ಯಾಲೆಂಡರ್ ವರ್ಷದ ಅಂತ್ಯಕ್ಕೆ ಮೊದಲು ಬಿಡುಗಡೆ ಮಾಡಲಾಗುತ್ತದೆ.
ಇದು ಬ್ಲೂಟೂತ್ ಸೌಲಭ್ಯ ಇರುವ ಭಾರತದ ಮೊದಲ ತ್ರಿಚಕ್ರ ಸರಕು ಸಾಗಣೆ ವಾಹನ. ಇದರಲ್ಲಿ ಟಿವಿಎಸ್ ಸ್ಮಾರ್ಟ್ ಎಕ್ಸೊನೆಕ್ಟ್ ಸೌಲಭ್ಯ ಇದೆ, 26 ಬಗೆಯ ಸ್ಮಾರ್ಟ್ ವೈಶಿಷ್ಟ್ಯಗಳು ಲಭ್ಯವಿವೆ.
ವಾಹನ ಬಿಡುಗಡೆ ಕುರಿತು ಮಾತನಾಡಿದ ಟಿವಿಎಸ್ ಮೋಟರ್ ಕಂಪನಿಯ ಕಮರ್ಷಿಯಲ್ ಮೊಬಿಲಿಟಿ ವಿಭಾಗದ ಬ್ಯುಸಿನೆಸ್ ಹೆಡ್ ರಜತ್ ಗುಪ್ತ ಅವರು ‘ಸ್ಮಾರ್ಟ್ ವೈಶಿಷ್ಟ್ಯಗಳು, ಹೆಚ್ಚಿನ ಭಾರವನ್ನು ಹೊರುವುದು, ಆರಾಮದಾಯಕತೆ, ನೋಡಲು ಆಕರ್ಷಕವಾಗಿರುವುದು, ಸುರಕ್ಷತೆಯ ಸಾಟಿಯಿಲ್ಲದ ಸಮ್ಮಿಲನದೊಂದಿಗೆ ಇದು ಹೊಸ ಮಾನದಂಡಗಳನ್ನು ಸೃಷ್ಟಿಸಲಿದೆ’ ಎಂದು ಹೇಳಿದ್ದಾರೆ.
ದೆಹಲಿ, ಎನ್‌ಸಿಆರ್ (ಫರೀದಾಬಾದ್, ನೊಯಿಡಾ, ಗುರುಗ್ರಾಮ, ಗಾಝಿಯಾಬಾದ್), ರಾಜಸ್ಥಾನ ಮತ್ತು ಬೆಂಗಳೂರಿನಲ್ಲಿ ಆರಂಭಿಕ ಹಂತದಲ್ಲಿ ಟಿವಿಎಸ್ ಕಿಂಗ್ ಕಾರ್ಗೊ ಇ.ವಿ ಲಭ್ಯವಿರಲಿದೆ. ಇದರ ಬೆಲೆ ₹3.85 ಲಕ್ಷ (ದೆಹಲಿ ಎಕ್ಸ್ ಷೋರೂಂ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.