ADVERTISEMENT

ಓಲಾ ಇ–ಸ್ಕೂಟರ್‌ಗೆ ರಿಯಾಯಿತಿ ಪ್ರಕಟ

ಪಿಟಿಐ
Published 13 ಮಾರ್ಚ್ 2025, 13:13 IST
Last Updated 13 ಮಾರ್ಚ್ 2025, 13:13 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಓಲಾ ಎಲೆಕ್ಟ್ರಿಕ್‌ ಕಂಪನಿಯು ಹೋಳಿ ಹಬ್ಬದ ಅಂಗವಾಗಿ ತನ್ನ ಎಸ್1 ಸರಣಿಯ ಇ–ಸ್ಕೂಟರ್‌ ಮಾರಾಟದ ಬೆಲೆಯಲ್ಲಿ ರಿಯಾಯಿತಿ ಪ್ರಕಟಿಸಿದೆ. ಸೀಮಿತ ಅವಧಿವರೆಗೆ ಈ ಸೌಲಭ್ಯ ದೊರೆಯಲಿದೆ.

ಎಸ್‌1 ಏರ್‌ ಸ್ಕೂಟರ್‌ಗೆ ₹26,750 ರಿಯಾಯಿತಿ ಘೋಷಿಸಿದ್ದು, ಇದು ₹89,999ಕ್ಕೆ ದೊರೆಯಲಿದೆ. ಎಸ್‌1ಎಕ್ಸ್‌ ಪ್ಲಸ್‌ (ಜೆನ್‌ 2) ಸ್ಕೂಟರ್‌ಗೆ ₹22 ಸಾವಿರ ರಿಯಾಯಿತಿ ಪ್ರಕಟಿಸಿದ್ದು, ₹82,999ಕ್ಕೆ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.

ಎಸ್‌1 ಸರಣಿ ಹಾಗೂ ಇತ್ತೀಚೆಗೆ ಬಿಡುಗಡೆಯಾಗಿರುವ ಎಸ್‌1 ಜೆನ್‌ 3 ಸರಣಿಯ ಸ್ಕೂಟರ್‌ಗಳ ಬೆಲೆಯಲ್ಲಿ ₹25 ಸಾವಿರವರೆಗೆ ರಿಯಾಯಿತಿ ಪ್ರಕಟಿಸಲಾಗಿದೆ. ಮಾರ್ಚ್‌ 17ರ ವರೆಗೆ ಗ್ರಾಹಕರಿಗೆ ಈ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.